ಮುಂಬೈ: ಸ್ಮಾರ್ಟ್ ಟಿ.ವಿಗಳಿಗಾಗಿ ಭಾರತದ ಮೊದಲ ಆಪರೇಟಿಂಗ್ ಸಿಸ್ಟಮ್ ‘ಜಿಯೊಟೆಲಿ ಒಎಸ್’ ಅನ್ನು ರಿಲಯನ್ಸ್ ಜಿಯೊ ಘೋಷಣೆ ಮಾಡಿದೆ. ಇದು ನೆಕ್ಸ್ಟ್ ಜನರೇಷನ್ ಸ್ಮಾರ್ಟ್ ಟಿ.ವಿ ಆಪರೇಟಿಂಗ್ ಸಿಸ್ಟಮ್ ಆಗಿದ್ದು, ಭಾರತೀಯ ಪ್ರೇಕ್ಷಕರ ವಿಶಿಷ್ಟ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಇದನ್ನು ಸಿದ್ಧಪಡಿಸಲಾಗಿದೆ.
ಭಾರತದಲ್ಲಿ ಅಂದಾಜು ಮೂರೂವರೆ ಕೋಟಿ ಕುಟುಂಬಗಳು ಮನರಂಜನೆಗಾಗಿ ಟಿ.ವಿ ಅವಲಂಬಿಸಿವೆ. ಡಿಜಿಟಲ್ ಮನರಂಜನೆಗೆ ಬೇಡಿಕೆ ನಿರಂತರವಾಗಿ ಹೆಚ್ಚಾಗುತ್ತಿದೆ. ಆದರೆ, ಅವರ ಟಿ.ವಿಗಳ ಸೀಮಿತ ಸಾಮರ್ಥ್ಯದಿಂದಾಗಿ ಹಲವು ಗ್ರಾಹಕರಿಗೆ ಸವಾಲುಗಳು ಎದುರಾಗಿವೆ. ಕಸ್ಟಮೈಸೇಷನ್‌ಗೆ ನಿರ್ಬಂಧ, ಹೆಚ್ಚಿನ ಗುಣಮಟ್ಟದ ಪ್ರಾದೇಶಿಕ ಕಂಟೆಂಟ್‌ಗೆ ಸೀಮಿತ ಸಂಪರ್ಕ, ಇವೆಲ್ಲದರ ಜೊತೆಗೆ ತಡೆರಹಿತ, ಪ್ರೀಮಿಯಂ ಬಳಕೆದಾರರ ಅನುಭವ ನೀಡುವಂಥದ್ದರ ಅನುಪಸ್ಥಿತಿ ತೊಡಕಾಗಿದೆ. ಈ ಸಮಸ್ಯೆಗಳಿಗೆ ಜಿಯೊಟೆಲಿ ಒಎಸ್ ಪರಿಹಾರವಾಗಿದೆ.
ಜಿಯೊಟೆಲಿ ಒಎಸ್‌ನ ಪ್ರಮುಖ ಫೀಚರ್‌ಗಳು
- ಎಐನಿಂದ ಶಿಫಾರಸು ಮಾಡಲಾದ ಕಂಟೆಂಟ್‌ಗಳು: ಬಳಕೆದಾರರು ಕಂಟೆಂಟ್‌ಗಳ ಹುಡುಕಾಟದಲ್ಲಿ ಹೆಚ್ಚು ಸಮಯವನ್ನು ವ್ಯರ್ಥ ಮಾಡುವ ಅಗತ್ಯವೇ ಇಲ್ಲದಂತೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ಆಯಾ ಗ್ರಾಹಕರ ಆದ್ಯತೆಗೆ ತಕ್ಕಂತೆ ಶಿಫಾರಸುಗಳನ್ನು ಮಾಡುತ್ತದೆ.
- ವೇಗ ಹಾಗೂ ಶೀಘ್ರ: ಬಹಳ ಸಲೀಸಾದ, ಯಾವುದೇ ವಿಳಂಬ ಇಲ್ಲದ 4ಕೆ ಕಂಟೆಂಟ್‌ಗಳು ದೊರೆಯುತ್ತವೆ ಹಾಗೂ ಸಾಟಿಯೇ ಇಲ್ಲದಂಥ ಕಂಟೆಂಟ್ ಅನುಭವಗಳನ್ನು ದೊರಕಿಸುತ್ತದೆ.
- ಮನರಂಜನೆಗೆ ಸುಲಭ ಸಂಪರ್ಕ: ಟಿ.ವಿ ಚಾನೆಲ್‌ಗಳ ಲೈಬ್ರರಿಗೆ, ಕ್ಲೌಡ್ ಗೇಮ್‌ಗಳಿಗೆ, ನೆಚ್ಚಿನ ಒಟಿಟಿ ಅಪ್ಲಿಕೇಷನ್‌ಗಳಿಗೆ ಸಲೀಸಾದ ಸಂಪರ್ಕ ಇರುತ್ತದೆ. ಇದರ ಜೊತೆಗೆ ಟಿ.ವಿ ಚಾನೆಲ್‌ಗಳು ಮತ್ತು ಕಂಟೆಂಟ್‌ಗಳ ಮಧ್ಯೆ ಬದಲಾವಣೆ ಸರಳವಾಗಿರುತ್ತದೆ. ಅದಕ್ಕಾಗಿಯೇ ಎಲ್ಲವನ್ನೂ ಒಂದೇ ರಿಮೋಟ್ ಕಂಟ್ರೋಲ್‌ನಲ್ಲಿ ನಿರ್ವಹಿಸಬಹುದು.
- ನಿರಂತರವಾಗಿ ಮೇಲ್ದರ್ಜೆ ಹಾಗೂ ಪರಿವರ್ತನೆ: ನಿಯಮಿತವಾಗಿ ಸಾಫ್ಟ್‌ವೇರ್ ಅಪ್‌ಡೇಟ್‌ಗಳನ್ನು ಮಾಡಲಾಗುತ್ತದೆ. ಇದರಿಂದ ಟಿ.ವಿ ಒಎಸ್ ಹೊಸ ಅಪ್ಲಿಕೇಷನ್‌ಗಳು, ಕಂಟೆಂಟ್ ಫಾರ್ಮಾಟ್‌ಗಳು ಮತ್ತು ಬದಲಾಗುವ ಭದ್ರತೆ ಹಾಗೂ ತಂತ್ರಜ್ಞಾನಗಳ ಜೊತೆಗೆ ಹೊಂದಿಕೊಳ್ಳುತ್ತದೆ.
ಲಭ್ಯತೆ ಮತ್ತು ಬ್ರ್ಯಾಂಡ್ ಪಾಲುದಾರಿಕೆಗಳು
ಜಿಯೊಟೆಲಿ ಒಎಸ್‌ನಿಂದ ಕಾರ್ಯ ನಿರ್ವಹಿಸುವ ಟಿ.ವಿಗಳು 2025ರ ಫೆಬ್ರುವರಿ 21ರಿಂದ ಲಭ್ಯವಿದ್ದು, ಥಾಮ್ಸನ್, ಕೊಡಾಕ್, ಬಿಪಿಎಲ್ ಮತ್ತು ಜೆವಿಸಿಯಂತಹ ಪ್ರಮುಖ ಸ್ಮಾರ್ಟ್ ಟಿ.ವಿ ಬ್ರ್ಯಾಂಡ್‌ಗಳೊಂದಿಗೆ ಪದಾರ್ಪಣೆ ಮಾಡಲಿವೆ.
2025ನೇ ಇಸವಿಯಲ್ಲಿಯೇ ಇನ್ನೂ ಹೆಚ್ಚಿನ ಬ್ರ್ಯಾಂಡ್‌ಗಳು ಈ ಸಾಲಿಗೆ ಸೇರಲಿವೆ. ಇದು ಭಾರತೀಯ ಗ್ರಾಹಕರಿಗೆ ವ್ಯಾಪಕ ಶ್ರೇಣಿಯ ಆಯ್ಕೆಗಳನ್ನು ಖಚಿತಪಡಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.