ADVERTISEMENT

ದೇಶದ ಮಾರುಕಟ್ಟೆಗೆ ಕೋಡಕ್‌ ಹೊಸ ಆಂಡ್ರಾಯ್ಡ್ ಟಿವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2021, 5:36 IST
Last Updated 28 ಅಕ್ಟೋಬರ್ 2021, 5:36 IST
ಕೋಡಕ್‌ ಹೊಸ ಟಿವಿ ಬಿಡುಗಡೆ
ಕೋಡಕ್‌ ಹೊಸ ಟಿವಿ ಬಿಡುಗಡೆ   

ಬೆಂಗಳೂರು: ದೇಶದಲ್ಲಿ ಹಬ್ಬದ ಸೀಸನ್ ಆರಂಭವಾಗುತ್ತಿದ್ದಂತೆ ಹೊಸ ಮಾದರಿಗಳ ಗೃಹೋಪಯೋಗಿ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿವೆ.

ಕೋಡಕ್‌, ನೂತನ ಮಾದರಿಯ ಸಿಎ ಪ್ರೊ ಆಂಡ್ರಾಯ್ಡ್ ಟಿವಿಯನ್ನು ಬಿಡುಗಡೆ ಮಾಡಿದೆ.

43 ಮತ್ತು 50 ಇಂಚಿನ ಡಿಸ್‌ಪ್ಲೇ ಹೊಂದಿರುವ ಎರಡು ಮಾದರಿಗಳು ದೇಶದಲ್ಲಿ ಬಿಡುಗಡೆಯಾಗಿದ್ದು, ಆಂಡ್ರಾಯ್ಡ್ 10 ಕಾರ್ಯಾಚರಣೆ ವ್ಯವಸ್ಥೆ ಮೂಲಕ ಇವು ಕಾರ್ಯನಿರ್ವಹಿಸುತ್ತವೆ.

ADVERTISEMENT

ಬೆಲೆ ಮತ್ತು ಲಭ್ಯತೆ

ಕೋಡಕ್‌ ಬಿಡುಗಡೆ ಮಾಡಿರುವ ಹೊಸ ಸ್ಮಾರ್ಟ್ ಟಿವಿಗಳು, ಗುರುವಾರದಿಂದ ಫ್ಲಿಪ್‌ಕಾರ್ಟ್ ಬಿಗ್ ದಿವಾಲಿ ಸೇಲ್ ಮೂಲಕ ದೊರೆಯಲಿದೆ.

ಕೋಡಕ್‌ ಸಿಎ ಪ್ರೊ 43 ಇಂಚಿನ ಟಿವಿ ಬೆಲೆ ₹27,999 ಮತ್ತು 50 ಇಂಚಿನ ಟಿವಿಗೆ ₹33,999 ದರ ನಿಗದಿಪಡಿಸಲಾಗಿದೆ. ಅಲ್ಲದೆ, ಫ್ಲಿಪ್‌ಕಾರ್ಟ್ ಮೂಲಕ ಖರೀದಿಸುವಾಗ ಎಸ್‌ಬಿಐ ಕಾರ್ಡ್ ಬಳಸಿದರೆ, ಶೇ 10 ಡಿಸ್ಕೌಂಟ್ ಕೂಡ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.