ADVERTISEMENT

Lava Blaze: ನೂತನ ಲಾವಾ ಬ್ಲೇಜ್ ಸ್ಮಾರ್ಟ್‌ಫೋನ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಜುಲೈ 2022, 10:43 IST
Last Updated 8 ಜುಲೈ 2022, 10:43 IST
   

ನವದೆಹಲಿ: ದೇಶೀಯ ಮೊಬೈಲ್‌ ತಯಾರಿಕಾ ಸಂಸ್ಥೆ ಲಾವಾ, ನೂತನ 'ಬ್ಲೇಜ್' ಸ್ಮಾರ್ಟ್‌ಫೋನ್ ದೇಶಕ್ಕೆ ಪರಿಚಯಿಸಿದೆ.

ಆಕರ್ಷಕ ವಿನ್ಯಾಸ, ಉತ್ತಮ ಕಾರ್ಯಕ್ಷಮತೆ, ಪ್ರೀಮಿಯಂ ಫೀಚರ್‌ ಹಾಗೂ ಕೈಗೆಟುಕುವ ಬೆಲೆ, ಯುವ ಗ್ರಾಹಕರ ನಿರೀಕ್ಷೆಯನ್ನು ಈಡೇರಿಸಲಿದೆ ಎಂದು ಸಂಸ್ಥೆಯು ಹೇಳಿದೆ.

ಬೆಲೆ: ₹8,699

ADVERTISEMENT

ಫೀಚರ್:
6.5 ನಾಚ್ ಎಚ್‌ಡಿ ಡಿಸ್‌ಪ್ಲೇ,
ಮೀಡಿಯಾಟೆಕ್ ಹೆಲಿಯೊ ಎ22 ಪ್ರೊಸೆಸರ್,
ಹಿಂಬದಿ ಗಾಜಿನ ಕವಚ (ಸೆಗ್ಮೆಂಟ್‌ನಲ್ಲಿ ಮೊದಲು)
ಆಂಡ್ರಾಯ್ಡ್ 12,
3+3(ವರ್ಚ್ಯುವಲ್) GB RAM
64 GB ಸ್ಟೋರೆಜ್,
10W ಟೈಪ್ ಸಿ ಫಾಸ್ಟ್ ಚಾರ್ಜಿಂಗ್,
5000 mAh ಬ್ಯಾಟರಿ.

ಕ್ಯಾಮರಾ:
13MP ಟ್ರಿಪಲ್ ಕ್ಯಾಮರಾ,
8 MP ಫ್ರಂಟ್ ಕ್ಯಾಮರಾ,

ಬುಕ್ಕಿಂಗ್:
ಗ್ರಾಹಕರು ಜುಲೈ 7ರಿಂದ ಮುಂಗಡವಾಗಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಜುಲೈ 14ರಿಂದ ಮಾರಾಟಕ್ಕೆ ಲಭ್ಯವಾಗಲಿದೆ. ಫ್ಲಿಪ್‌ಕಾರ್ಟ್, ಲಾವಾ ಇ-ಸ್ಟೋರ್, ಆಫ್‌ಲೈನ್ ಸ್ಟೋರ್‌ಗಳ ಮೂಲಕವೂ ಖರೀದಿಗೆ ಲಭ್ಯವಾಗಲಿದೆ.

ಮುಂಗಡ ಬುಕ್ ಮಾಡುವ ಮೊದಲ 1,000 ಗ್ರಾಹಕರಿಗೆ ಲಾವಾ 'ಪ್ರೊಬಡ್ಸ್ 21' ಉಚಿತವಾಗಿ ದೊರೆಯಲಿದೆ. 100 ದಿನಗಳ ಉಚಿತ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಹಾಗೂ ಮನೆಗೆ ಬಂದು ಉಚಿತ ಸರ್ವಿಸ್ ಸೇವೆಯನ್ನು ಒದಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.