ADVERTISEMENT

Gobuds Sport’s Earbuds ಬಿಡುಗಡೆ: ಬೆಲೆ –ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಮಾರ್ಚ್ 2024, 11:43 IST
Last Updated 4 ಮಾರ್ಚ್ 2024, 11:43 IST
<div class="paragraphs"><p> ‘ಗೋಬಡ್ಸ್ ಸ್ಪೋರ್ಟ್ಸ್’&nbsp;ಇಯರ್‌ಬಡ್ಸ್‌</p></div>

‘ಗೋಬಡ್ಸ್ ಸ್ಪೋರ್ಟ್ಸ್’ ಇಯರ್‌ಬಡ್ಸ್‌

   

ಬೆಂಗಳೂರು: ಬೆಂಗಳೂರು ಮೂಲದ ಗೋವೊ (GOVO) ಕಂಪನಿಯು ಸ್ಮಾರ್ಟ್‌ ಸಾಧನಗಳ ವಿಭಾಗದಲ್ಲಿ ಕಡಿಮೆ ಬೆಲೆಗೆ ಹೊಸ ವಯರ್‌ಲೆಸ್‌ ಇಯರ್‌ಬಡ್ಸ್‌ ‘ಗೋಬಡ್ಸ್ ಸ್ಪೋರ್ಟ್ಸ್’ (Gobuds Sport’s) ಬಿಡುಗಡೆ ಮಾಡಿದೆ. ಇದರ ಬೆಲೆ ₹ 1,299.

‘ಗೋಬಡ್ಸ್ ಸ್ಪೋರ್ಟ್ಸ್’ ಇಯರ್‌ಬಡ್ಸ್‌ ಬ್ಯಾಟರಿ ಬಾಳಿಕೆ, ಮನರಂಜನೆ ಮತ್ತು ಕರೆ... ಹೀಗೆ ಎಲ್ಲ ಆಯಾಮಗಳಲ್ಲಿಯೂ ಉತ್ತಮ ಆಲ್‌ರೌಂಡರ್ ಆಗಿದೆ ಎಂದು ಕಂಪನಿ ಹೇಳಿದೆ.

ADVERTISEMENT

‘ಗೋಬಡ್ಸ್ ಸ್ಪೋರ್ಟ್ಸ್’ನ ಪ್ರಮುಖ ವೈಶಿಷ್ಟ್ಯಗಳು ಇಲ್ಲಿವೆ:

* ಕಂಫರ್ಟ್ ಸೆಕ್ಯೂರ್ ಫಿಟ್: ದಿನವಿಡೀ ಬಳಸಲು ಅನುಕೂಲವಾಗುವಂತೆ ಹೆಚ್ಚು ಆರಾಮ ಮತ್ತು ಕಿವಿಯಲ್ಲಿ ಹೆಚ್ಚು ಸರಿದಾಡದೆ ಭದ್ರವಾಗಿ ಹಿಡಿದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

* 52 ಗಂಟೆಗಳ ಬ್ಯಾಟರಿ ಸಾಮರ್ಥ್ಯ: ಟೈಪ್ ‘ಸಿ’ ಇನ್‌ಪುಟ್‌ನೊಂದಿಗೆ ಸಂಗೀತ ಆಲಿಸಲು, ಸಿನಿಮಾ ವೀಕ್ಷಿಸಲು, ಗೇಮ್‌ಗಳನ್ನು ತಡೆರಹಿತವಾಗಿ 52 ಗಂಟೆಗಳವರೆಗೆ ಆಡುವಷ್ಟರ ಮಟ್ಟಿಗೆ ಬ್ಯಾಟರಿ ಬಾಳಿಕೆ ಬರುತ್ತದೆ.

* ವಾಟರ್ ರೆಸಿಸ್ಟೆಂಟ್: ನೀರಿನಿಂದ ರಕ್ಷಣೆ ನೀಡಲು ಐಪಿಎಕ್ಸ್‌ 4 ರೇಟಿಂಗ್ಸ್‌ ಇದೆ.

* ಗೇಮಿಂಗ್ ಮೋಡ್: ಗೇಮಿಂಗ್ ಮೋಡ್‌ನಲ್ಲಿ ಸಾಮಾನ್ಯವಾಗಿ ಎದುರಾಗಬಹುದಾದ ವಿಳಂಬ ಇದರಲ್ಲಿ ಇಲ್ಲ. ಬದಲಿಗೆ ಅತ್ಯಂತ ಕನಿಷ್ಠ 80 ಮಿಲಿ ಸೆಕೆಂಡುಗಳ ಸುಪ್ತತೆಯೊಂದಿಗೆ ಮೊಬೈಲ್ ಗೇಮಿಂಗ್‌ನ ಅನುಭೂತಿಯನ್ನು ಅನುಭವಿಸಬಹುದು.

* ರಿಚ್ ಸೌಂಡ್: ಅದ್ಭುತ ಬಾಸ್ ಹಾಗೂ ನೈಜ ಧ್ವನಿಗಾಗಿ 12 ಮಿಮೀಯ ಡೈನಾಮಿಕ್ ಡ್ರೈವರ್‌ ಇದರೊಳಗಿದೆ.

* ಬ್ಲೂಟೂತ್ V5.3: 30 ಅಡಿ ವ್ಯಾಪ್ತಿ

* ಸಂಗೀತ ಆಲಿಸಲು ಇದರ ಆಡಿಯೊ ಗುಣಮಟ್ಟ ಉತ್ತಮವಾಗಿದೆ. ಇಯರ್‌ ಟಿಪ್‌ ಇರುವುದರಿಂದ ಹೊರಗಿನ ಶಬ್ಧ ಕೇಳಿಸುವುದಿಲ್ಲ. ಇದರಿಂದಾಗಿ ಸಂಗೀತವನ್ನು ಆನಂದವಾಗಿ ಆಲಿಸಬಹುದು. ಸಂಗೀತ ಆಲಿಸುವಾಗ ಮತ್ತು ವಿಡಿಯೊ ಪ್ಲೇ ಮಾಡುವಾಗ ಹೊರಗಿನ ಶಬ್ಧ ಕೇಳಿಸದಂತೆ ತಡೆಯುವ ಇಎನ್‌ಸಿ (ಎನ್ವಿರಾನ್ಮೆಂಟಲ್‌ ನಾಯ್ಸ್‌ ಕ್ಯಾನ್ಸಲೇಷನ್) ವ್ಯವಸ್ಥೆಯು ಚೆನ್ನಾಗಿ ಕೆಲಸ ಮಾಡುತ್ತದೆ.

‘ಗೋಬಡ್ಸ್ ಸ್ಪೋ’ ಇಯರ್‌ಬಡ್ಸ್‌ ಒಂದು ವರ್ಷದ ವಾರಂಟಿಯೊಂದಿಗೆ ಬಿಳಿ ಬಣ್ಣದಲ್ಲಿ ಲಭ್ಯವಿದೆ.

‘ಗೋಬಡ್ಸ್ ಸ್ಪೋರ್ಟ್ಸ್’ ಇಯರ್‌ಬಡ್ಸ್‌

‘ಗೋಬಡ್ಸ್ ಸ್ಪೋರ್ಟ್ಸ್’ ಇಯರ್‌ಬಡ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.