ADVERTISEMENT

ಭಾರತಕ್ಕೆ ಬರಲಿದೆ 108 ಮೆಗಾಪಿಕ್ಸೆಲ್, 5 ಲೆನ್ಸ್‌ ಕ್ಯಾಮೆರಾ ಫೋನ್; ಎಂಐ ನೋಟ್ 10

ಏಜೆನ್ಸೀಸ್
Published 25 ನವೆಂಬರ್ 2019, 12:13 IST
Last Updated 25 ನವೆಂಬರ್ 2019, 12:13 IST
ಎಂಐ ನೋಟ್ 10 ಫೋನ್‌
ಎಂಐ ನೋಟ್ 10 ಫೋನ್‌    

ಚೀನಾದ ಸ್ಮಾರ್ಟ್‌ಫೋರ್ನ್ ಸಂಸ್ಥೆ ಶಿಯೋಮಿ ಭಾರತದಲ್ಲಿ 108 ಮೆಗಾಪಿಕ್ಸೆಲ್‌ ಕ್ಯಾಮೆರಾ ಫೋನ್‌ ಅನಾವರಣಗೊಳಿಸಲು ಮುಂದಾಗಿದೆ. 'ಎಂಐ ನೋಟ್‌ 10' ಅತಿ ಶೀಘ್ರದಲ್ಲಿದೇಶದ ಮಾರುಕಟ್ಟೆ ಪ್ರವೇಶಿಸಲಿದೆ.

ಶಿಯೋಮಿ ಇಂಡಿಯಾ ಮುಖ್ಯಸ್ಥ ಮನು ಕುಮಾರ್ ಜೈನ್‌ ಸೋಮವಾರ ಟ್ವೀಟ್‌ ಮೂಲಕ 108 ಮೆಗಾಪಿಕ್ಸೆಲ್‌ ಕ್ಯಾಮೆರಾ ಹೊರತರುತ್ತಿರುವುದನ್ನು ಬಹಿರಂಗ ಪಡಿಸಿದ್ದಾರೆ. ಮೊಬೈಲ್‌ ಹಿಂಬದಿಯಲ್ಲಿ ಐದು ಲೆನ್ಸ್‌(ಪೆಂಟಾ ಲೆನ್ಸ್‌) ಹೊಂದಿರುವ ಕ್ಯಾಮೆರಾನ್ನುಎಂಐ ನೋಟ್‌ 10 ಒಳಗೊಂಡಿದೆ. ಸ್ಮಾರ್ಟ್‌ಫೋನ್‌ ಫೋಟೊಗ್ರಫಿ ವಲಯದಿಂದ ಈ ಫೋನ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

108 ಮೆಗಾಪಿಕ್ಸೆಲ್‌ ಕ್ಯಾಮೆರಾ ಫೋನ್‌ ಶೀಘ್ರವೇ ಬರದಲಿ ಎಂದಷ್ಟೇ ಮನು ಕುಮಾರ್‌ ಟ್ವೀಟಿಸಿದ್ದು, ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡು ಎಂಐ ನೋಟ್‌ 10 ಸಿದ್ಧಪಡಿಸಲಾಗಿದೆ. 'ಎಂಐ ಸಿಸಿ9 ಪ್ರೊ ಪ್ರೀಮಿಯಂ ಎಡಿಷನ್‌' ಫೋನ್‌ 108 ಎಂಪಿ ಕ್ಯಾಮೆರಾ ಮೂಲಕ ಸಾಕಷ್ಟು ಸುದ್ದಿಯಾಗಿತ್ತು. ಅದರ ಮತ್ತೊಂದು ರೂಪವೇ ಎಂಐ ನೋಟ್‌ 10 ಎನ್ನಲಾಗುತ್ತಿದೆ. ಸ್ಯಾಮ್‌ಸಂಗ್‌ ಗ್ಯಾಲಾಕ್ಸಿ ನೋಟ್‌ 10 ಮತ್ತು ಗೂಗಲ್‌ ಪಿಕ್ಸೆಲ್‌ 4 ಫೋನ್‌ನ ಕ್ಯಾಮೆರಾಗಳಿಂತಲೂ ಉತ್ತಮ ಗುಣಮಟ್ಟ ಫೋಟೊಗಳನ್ನು ಎಂಐನ ಹೊಸ ಫೋನ್‌ನಲ್ಲಿ ಸೆರೆ ಹಿಡಿಯಲು ಸಾಧ್ಯ ಎಂದು ಹಲವು ವೆಬ್‌ಸೈಟ್‌ಗಳು ವರದಿ ಮಾಡಿವೆ.

ADVERTISEMENT

ಎಷ್ಟಿರಬಹುದು ನೋಟ್‌ 10 ಬೆಲೆ?

'ಎಂಐ ನೋಟ್‌ 10' ಫೋನ್‌ 6 ಜಿಬಿ ರ್‍ಯಾಮ್‌ ಮತ್ತು 128 ಜಿಬಿ ಸಂಗ್ರಹ ಸಾಮರ್ಥ್ಯ ಹಾಗೂ 'ಎಂಐ ನೋಟ್‌ 10 ಪ್ರೊ' 8 ಜಿಬಿ ರ್‍ಯಾಮ್‌ ಮತ್ತು 256 ಜಿಬಿ ಸಂಗ್ರಹ ಸಾಮರ್ಥ್ಯಗಳಲ್ಲಿ ಹೊರ ದೇಶಗಳಲ್ಲಿ ಬಿಡುಗಡೆಯಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಬೆಲೆಯನ್ನು ಭಾರತದ ರೂಪಾಯಿಗೆ ಪರಿವರ್ತಿಸಿಕೊಂಡರೆ, 'ಎಂಐ ನೋಟ್‌ 10' ಬೆಲೆ ₹43,000 ಹಾಗೂ ಪ್ರೊ ಮಾದರಿಯ ಫೋನ್‌ ಬೆಲೆ ₹51,000 ಎಂದು ಅಂದಾಜಿಸಬಹುದಾಗಿದೆ. ಆದರೆ, ಭಾರತದಲ್ಲಿ ಬಿಡುಗಡೆಯಾಗುವ ಫೋನ್‌ ಸಾಮರ್ಥ್ಯ ಎಷ್ಟಿರಲಿದೆ ಎಂಬುದು ಬಹಿರಂಗವಾಗಿಲ್ಲ.

ಈಗಾಗಲೇ ಬಿಡುಗಡೆಯಾಗಿರುವ ಫೋನ್‌ನಲ್ಲಿ ಏನೆಲ್ಲ ಇದೆ?

ಡಿಸ್‌ಪ್ಲೇ: 6.47 ಇಂಚು ಕರ್ವ್ಡ್‌ ಫುಲ್‌ ಎಚ್‌ಡಿ ಒಎಲ್‌ಇಡಿ

ಕ್ಯಾಮೆರಾ: ಹಿಂಬದಿ ಐದು ಕ್ಯಾಮೆರಾಗಳು; 108 ಎಂಪಿ ಮೇನ್‌ ಕ್ಯಾಮೆರಾ, 20 ಎಂಪಿ ವೈಡ್‌ ಆ್ಯಂಗಲ್‌ ಕ್ಯಾಮೆರಾ(117 ಡಿಗ್ರಿ), 12 ಎಂಪಿ ಟೆಲಿಫೋಟೊ ಲೆನ್ಸ್‌(50x ಡಿಜಿಟಲ್‌ ಜೂಮ್‌). ಒಂದು ಸೆಲ್ಫಿ ಕ್ಯಾಮೆರಾ; 32 ಎಂಪಿ.4ಕೆ ಗುಣಮಟ್ಟದ ವಿಡಿಯೊ, ಸ್ಲೋ ಮೋಶನ್‌ ಎಚ್‌ಡಿ ವಿಡಿಯೊ, ಕಡಿಮೆ ಬೆಳಕಿನ ಫೋಟೊಗ್ರಫಿ ಸೇರಿದಂತೆ ಹಲವು ಆಯ್ಕೆಗಳನ್ನು ಹೊಂದಿದೆ.

ಚಿಪ್‌: ಆಕ್ಟಾಕೋರ್‌ ಕ್ವಾಲ್‌ಕಾಮ್‌ ಸ್ನ್ಯಾಪ್‌ಡ್ರಾಗನ್‌ 730ಜಿ

ರ್‍ಯಾಮ್‌: 6 ಜಿಬಿ / 8 ಜಿಬಿ

ಸಂಗ್ರಹ ಸಾಮರ್ಥ್ಯ: 128 ಜಿಬಿ/ 256 ಜಿಬಿ

ಬ್ಯಾಟರಿ: 5,260 ಎಂಎಎಚ್‌, 30ವ್ಯಾಟ್ ಫಾಸ್ಟ್‌ ಚಾರ್ಜಿಂಗ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.