ADVERTISEMENT

OnePlus Nord LE: ಸದ್ದಿಲ್ಲದೇ ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಏಪ್ರಿಲ್ 2021, 7:52 IST
Last Updated 9 ಏಪ್ರಿಲ್ 2021, 7:52 IST
ಲಿಟರಲಿ ಒನ್ ಓನ್ಲಿ ಎಡಿಶನ್
ಲಿಟರಲಿ ಒನ್ ಓನ್ಲಿ ಎಡಿಶನ್   

ಅಚ್ಚರಿಯ ಘೋಷಣೆಯೆಂಬಂತೆ ಒನ್‌ಪ್ಲಸ್, ಹೊಸ ಸ್ಮಾರ್ಟ್‌ಫೋನ್ ಒಂದನ್ನು ಸದ್ದಿಲ್ಲದೆಯೇ ಗುರುವಾರ ರಾತ್ರಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಈ ಬಾರಿ ನಾರ್ಡ್ ಸರಣಿಯಲ್ಲಿ ಒನ್‌ಪ್ಲಸ್ ನಾರ್ಡ್ ಎಲ್‌ಇ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಆದರೆ ಈ ಫೋನ್‌ ವಿಶೇಷತೆಯೇನೆಂದರೆ, ಒಂದೇ ಒಂದು ಸ್ಮಾರ್ಟ್‌ಫೋನ್ ಈ ಸರಣಿಯಲ್ಲಿ ತಯಾರಾಗಿದೆ. ಎಲ್‌ಇ ಅಂದರೆ, ಲಿಟರಲಿಒನ್ ಓನ್ಲಿ ಎಡಿಶನ್ ಎಂದು ಒನ್‌ಪ್ಲಸ್ ಹೇಳಿದೆ.

ಒನ್‌ಪ್ಲಸ್ ಕಂಟೆಸ್ಟ್‌ನಲ್ಲಿ ಜಯಗಳಿಸುವ ಓರ್ವ ಲಕ್ಕೀ ವಿನ್ನರ್ ಈ ಸ್ಮಾರ್ಟ್‌ಫೋನ್ ಪಡೆಯಲಿದ್ದಾರೆ. ಇನ್‌ಸ್ಟಾಗ್ರಾಂ ಮೂಲಕ ಸ್ಮಾರ್ಟ್‌ಫೋನ್ ಬಳಕೆದಾರರು ಪ್ರಸ್ತುತ ಬಳಸುತ್ತಿರುವ ಫೋನ್ ಚಿತ್ರವನ್ನು ಪೋಸ್ಟ್ ಮಾಡಬೇಕಿದೆ. ಜತೆಗೆ ಹೊಸ ಒನ್‌ಪ್ಲಸ್ ನಾರ್ಡ್ ಎಲ್‌ಇ ಫೋನ್ ಯಾಕೆ ಅವರಿಗೆ ಇಷ್ಟವೆಂದು ಸಂಕ್ಷಿಪ್ತವಾಗಿ ವಿವರಿಸಬೇಕಿದೆ. ಆಯ್ಕೆಯಾದ ಪೋಸ್ಟ್ ಅದೃಷ್ಠಶಾಲಿಗೆ ಹೊಸ ಒನ್‌ಪ್ಲಸ್ ಫೋನ್ ದೊರೆಯಲಿದೆ.

ADVERTISEMENT

ಹೊಸ ಒನ್‌ಪ್ಲಸ್ ನಾರ್ಡ್ ಎಲ್‌ಇ ಸ್ಮಾರ್ಟ್‌ಫೋನ್, ಸೀಮಿತ ಆವೃತ್ತಿ ಮತ್ತು ಹಳದಿ-ನೀಲಿ ಸಂಯೋಜನೆಯ ಆಕರ್ಷಕ ಬಣ್ಣ ಹೊಂದಿದೆ, ಅದನ್ನು ಹೊರತುಪಡಿಸಿ, ಉಳಿದಂತೆ ವಿನ್ಯಾಸ ಮತ್ತು ತಾಂತ್ರಿಕ ವೈಶಿಷ್ಟ್ಯದಲ್ಲಿ ಯಾವುದೇ ಬದಲಾವಣೆಯಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.