ಶಿಯೊಮಿ ಕಂಪನಿಯಿಂದ ಬೇರ್ಪಟ್ಟು ಸ್ವತಂತ್ರ ಬ್ರ್ಯಾಂಡ್ ಆಗಿರುವ ಪೊಕೊ ಕಂಪನಿಯ ಬಹುನಿರೀಕ್ಷಿತ ‘ಪೊಕೊ ಎಂ2 ಪ್ರೊ’ ಸ್ಮಾರ್ಟ್‌ಫೋನ್ ಅನ್ನು ಮಂಗಳವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ನವದೆಹಲಿಯಲ್ಲಿ ನಡೆದ ಆನ್‌ಲೈನ್ ಸಮಾರಂಭದಲ್ಲಿ ಈ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಾಯಿತು. ಇದೇ ವರ್ಷದಲ್ಲಿ ಪೊಕೊ ತನ್ನ ಮೊದಲ ಸ್ಮಾರ್ಟ್‌ಫೋನ್ ‘ಪೊಕೊ ಎಕ್ಸ್2’ ಬಿಡುಗಡೆ ಮಾಡಿತ್ತು. ಅದರ ನಂತರ ಬಿಡುಗಡೆಯಾದ ಎರಡನೇ ಪೊಕೊ ಸ್ಮಾರ್ಟ್‌ಫೋನ್ ಇದಾಗಿದೆ.
ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ 20 ಸಾವಿರ ರೂಪಾಯಿ ಬೆಲೆಯೊಳಗಿನ ಉತ್ತಮ ಸ್ಮಾರ್ಟ್‌ಫೋನ್‌ಗಳಲ್ಲಿ ಪೊಕೊ ಎಕ್ಸ್2 ಕೂಡ ಒಂದು.ಎಂಐಯುಐ11 ಆಧಾರಿತ ಆಂಡ್ರಾಯ್ಡ್ 10 ವರ್ಷನ್‌ನ ‘ಪೊಕೊ ಎಂ2 ಪ್ರೊ’ ಮೂರು ಮಾಡೆಲ್‌ಗಳಲ್ಲಿ ಲಭ್ಯವಿದ್ದು, ಜುಲೈ 14ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಸಬಹುದು.
4 ಜಿಬಿ ರ‍್ಯಾಮ್ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದ ಆರಂಭಿಕ ಮಾಡೆಲ್ ಬೆಲೆ ₹13,999. 6ಜಿಬಿ ರ‍್ಯಾಮ್ ಮತ್ತು 64 ಜಿಬಿ ಇಂಟರ್ನಲ್ ಸ್ಟೋರೇಜ್ ಸಾಮರ್ಥ್ಯದ ಮಾಡೆಲ್ ಬೆಲೆ ₹14,999. 6ಜಿಬಿ ರ‍್ಯಾಮ್ ಮತ್ತು 128 ಜಿಬಿಇಂಟರ್ನಲ್ ಸ್ಟೋರೇಜ್ ಹೊಂದಿರುವ ಟಾಪ್ ಎಂಡ್ ಮಾಡೆಲ್ ₹16,999.
ಎಂ2 ಪ್ರೊ ವೈಶಿಷ್ಟ್ಯಗಳು
ರ‍್ಯಾಮ್:4ಜಿಬಿ, 6ಜಿಬಿ
ಇಂಟರ್ನಲ್ ಮೆಮೋರಿ: 64 ಜಿಬಿ, 128 ಜಿಬಿ
ಡಿಸ್‌ಪ್ಲೇ:6.67ಇಂಚುಫುಲ್ ಎಚ್.ಡಿ
ಸ್ಕ್ರೀನ್ ರೆಸಲ್ಯೂಷನ್: 2400X1080 ಪಿಕ್ಸೆಲ್
ಫ್ರಂಟ್ ಕ್ಯಾಮೆರಾ: 16 ಎಂ.ಪಿ
ಕ್ವಾಡ್ ರಿಯರ್ ಕ್ಯಾಮೆರಾ: 48 ಎಂ.ಪಿ
ಬ್ಯಾಟರಿ: 5000ಎಂಎಎಚ್
ಚಾರ್ಚಿಂಗ್ ಸಾಮರ್ಥ್ಯ: 33 ವಾಟ್ಸ್
ಪ್ರೊಸೆಸರ್: 720ಜಿ ಸ್ನಾಪ್‌ಡ್ರ್ಯಾಗನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.