ADVERTISEMENT

Realme 15 Pro 5G ಭಾರತದಲ್ಲಿ ಬಿಡುಗಡೆ; ಬೆಲೆ, ವೈಶಿಷ್ಟ್ಯತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜುಲೈ 2025, 13:05 IST
Last Updated 28 ಜುಲೈ 2025, 13:05 IST
   

ಬೆಂಗಳೂರು: ‘ಎಐ ಎಡಿಟ್‌ ಜೀನಿ’ ಎಂಬ ಅತ್ಯಾಧುನಿಕ ಟೆಕ್ನಾಲಜಿ ಒಳಗೊಂಡ ‘ರಿಯಲ್‌ ಮಿ 15 ಸೀರಿಸ್‌’ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿವೆ. ಫೋಟೋ ಎಡಿಟಿಂಗ್‌ಗಾಗಿ ಎಐ ಎಡಿಟರ್‌ ಇನ್‌ಬಿಲ್ಟ್‌ ಅಳವಡಿಸಿದ ಮೊದಲ ಸ್ಮಾರ್ಟ್‌ಫೋನ್‌ ಇದಾಗಿದೆ.

‘ರಿಯಲ್‌ಮಿ 15 ಪ್ರೊ 5ಜಿ ಮತ್ತು ರಿಯಲ್‌ಮಿ 15 5ಜಿ ಸೀರಿಸ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಅನೇಕ ವಿಶೇಷ ಫೀಚರ್ಸ್‌ಗಳನ್ನು ಈ ಫೋನ್‌ಗಳು ಹೊಂದಿದೆ’ ಎಂದು ರಿಯಲ್‌ಮಿ ಇಂಡಿಯಾದ ಉತ್ಪನ್ನ ಕಾರ್ಯತಂತ್ರ ವ್ಯವಸ್ಥಾಪಕ ದೇವೇಂದರ್ ಸಿಂಗ್ ಹೇಳಿದ್ದಾರೆ.

ವೈಶಿಷ್ಟ್ಯತೆಗಳೇನು:

ADVERTISEMENT
  • ಟ್ರಿಪಲ್ 50MP ಅಲ್ಟ್ರಾ ಕ್ಲಿಯರ್ ಕ್ಯಾಮೆರಾ ಮತ್ತು 4K 60ಎಫ್‌ಪಿಎಸ್‌ ವೀಡಿಯೊ ರೆಕಾರ್ಡಿಂಗ್‌ ಒಳಗೊಂಡಿದ್ದು ಸ್ಪಷ್ಟ ಹಾಗೂ ವೈವಿಧ್ಯಮಯ ಚಿತ್ರಗಳನ್ನು ಸೆರೆಹಿಡಿಯಲು ಸಹಾಯ ಮಾಡುತ್ತದೆ.

  • ರಿಯಲ್ ಮಿ 15ಪ್ರೊ ಟ್ರಿಪಲ್ ಲೆನ್ಸ್‌ 50ಎಂಪಿ ಅಲ್ಟ್ರಾ ಕ್ಲಾರಿಟಿ ಕ್ಯಾಮೆರಾ ಒಳಗೊಂಡಿದ್ದು, ಫ್ಲಾಗ್‌ಶಿಪ್ ಮಟ್ಟದ ತಂತ್ರಜ್ಞಾನ ಒಳಗೊಂಡಿದೆ. ರಿಯಲ್‌ಮಿ 15 ಯಲ್ಲಿ ಎರಡು 50ಎಂಪಿ ಕ್ಯಾಮೆರಾಗಳಿವೆ.

  • ಎಐ ಪಾರ್ಟಿ ಮೋಡ್‌ ತಂತ್ರಾಂಶ: ಈ ತಂತ್ರಾಂಶದ ಮೂಲಕ ಫೋಟೊಗಳಿಗೆ ವಾಟರ್‌ಮಾರ್ಕ್‌ ಹಾಕಲು, ವಿವಿಧ ಶೈಲಿಯ ಫ್ರೇಮ್‌ ಹಾಕಲು ಸಾಧ್ಯವಾಗುತ್ತದೆ.

  • ಎಐ ಎಡಿಟ್ ಜೀನಿ ತಂತ್ರಾಂಶ: ಸಂಪೂರ್ಣ ಎಐ ಆಧಾರಿತ ಎಡಿಟಿಂಗ್ ಸಾಧನವಾಗಿದ್ದು, ಧ್ವನಿ ಆದೇಶಗಳ ಮೂಲಕವೇ ಚಿತ್ರಗಳನ್ನು ಎಡಿಟ್ ಮಾಡಬಹುದಾಗಿದೆ. ಫೋಟೋಗಳ ಬಣ್ಣ ಬದಲಿಸುವುದು ಸೇರಿದಂತೆ ಹಲವು ರೀತಿಯ ಎಡಿಟ್‌ಗೆ ಇದು ಸಹಕಾರಿಯಾಗಿದೆ.

  • ರಿಯಲ್‌ಮಿ 15 ಸೀರಿಸ್‌ ಸ್ನ್ಯಾಪ್ ಡ್ರ್ಯಾಗನ್® 7 Gen 4 ಚಿಪ್‌ಸೆಟ್ ಹೊಂದಿದೆ.

  • ಜಿಟಿ ಬೂಸ್ಟ್ ಎಐ ಗೇಮಿಂಗ್ ಆಪ್ಟಿಮೈಜೇಶನ್‌ ಹೊಂದಿವೆ.

  • 7000mAh ಟೈಟಾನ್ ಬ್ಯಾಟರಿ ಹೊಂದಿದೆ.

  • ದಪ್ಪ: 7.69mm ಇದೆ.

ಬೆಲೆ ಎಷ್ಟು?

ರಿಯಲ್‌ಮಿ 15 ಸೀರಿಸ್‌ನ ಬೆಲೆಯು ₹23,999 ನಿಂದ ಪ್ರಾರಂಭವಾಗಲಿದ್ದು, 15 ಪ್ರೋ ₹28,999 ಶುರುವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.