ADVERTISEMENT

ಸ್ಯಾಮ್ಸಂಗ್‌ ಫೋಲ್ಡಿಂಗ್‌ ಫೋನ್‌ ಬಿಡುಗಡೆ

ಬೆಲೆ ₹ 1.40 ಲಕ್ಷ l ಭಾರತದ ಮಾರುಕಟ್ಟೆಯಲ್ಲಿ ಶೀಘ್ರವೇ ಲಭ್ಯ ನಿರೀಕ್ಷೆ

ಏಜೆನ್ಸೀಸ್
Published 21 ಫೆಬ್ರುವರಿ 2019, 20:00 IST
Last Updated 21 ಫೆಬ್ರುವರಿ 2019, 20:00 IST
ಗೆಲಕ್ಸಿ ಫೋಲ್ಡ್‌
ಗೆಲಕ್ಸಿ ಫೋಲ್ಡ್‌   

ಸ್ಯಾನ್‌ ಫ್ರಾನ್ಸಿಸ್ಕೊ: ಸ್ಯಾಮ್ಸಂಗ್‌ ಕಂಪನಿಯು, ಗ್ರಾಹಕರು ಬಹಳ ದಿನಗಳಿಂದ ನಿರೀಕ್ಷಿಸುತಿದ್ದ ಫೋಲ್ಡಿಂಗ್‌ 5ಜಿ ಸ್ಮಾರ್ಟ್‌ಫೋನ್‌ ‘ಗ್ಯಾಲಕ್ಸಿ ಫೋಲ್ಡ್‌’ ಜಾಗತಿಕ ಮಾರುಕಟ್ಟೆಗೆಬಿಡುಗಡೆ ಮಾಡಿದೆ.

ಸ್ಮಾರ್ಟ್‌ಫೋನ್‌ ಮಡಚಿದಾಗ ಪರದೆ ಗಾತ್ರ 4.6 ಇಂಚು ಇದ್ದು, ಬಿಡಿಸಿದಾಗ 7.3 ಇಂಚಿನ ಟ್ಯಾಬ್ಲೆಟ್‌ ಗಾತ್ರಕ್ಕೆ ಹಿಗ್ಗುತ್ತದೆ. ಬೆಲೆ 1,980 ಡಾಲರ್‌ (₹ 1,40,580) ಇದೆ. ಅಮೆರಿಕವನ್ನೂ ಒಳಗೊಂಡು ಆಯ್ದ ಕೆಲವೇ ಮಾರುಕಟ್ಟೆಗಳಲ್ಲಿಏಪ್ರಿಲ್‌ 26ರಿಂದ ಖರೀದಿಗೆ ಲಭ್ಯವಿರಲಿದೆ.

‘ಹೊಸ ಮಾದರಿಯ ಸಾಧನವನ್ನಷ್ಟೇ ನಾವು ನೀಡುತ್ತಿಲ್ಲ. ಮಾದರಿಯನ್ನೇ ನಿರ್ಧರಿಸುವ ಸಾಧನ ಇದಾಗಿದೆ’ ಎಂದು ಸ್ಯಾಮ್ಸಂಗ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಸ್ಟಿನ್‌ ಡೆನಿಸನ್‌ ಹೇಳಿದ್ದಾರೆ.

ADVERTISEMENT

‘ಇದೊಂದು ವಿಲಾಸಿ ಸಾಧನವಾಗಿದ್ದು, ಮೂರು ಆ್ಯಪ್‌ಗಳನ್ನು ಏಕಕಾಲಕ್ಕೆ ತೆರೆಯಬಹುದು. ಯೂಟ್ಯೂಬ್‌ ವಿಡಿಯೊ ನೋಡುತ್ತಿದ್ದಂತೆಯೇ ಅದರ ಬಗ್ಗೆ ಸ್ನೇಹಿತನಿಗೆ ಸಂದೇಸ ಕಳುಹಿಸಬಹುದು. ಅದೇ ಹೊತ್ತಿಗೇ ಬ್ರೌಸಿಂಗ್‌ ಸಹ ಮಾಡಬಹುದು’ ಎಂದು ಅವರು ವಿವರಿಸಿದ್ದಾರೆ.

‘ಇಂದಿನ ತಂತ್ರಜ್ಞಾನಗಳ ಮಿತಿಗಳನ್ನು ಮೀರಿಹೊಸ ಪೀಳಿಗೆಯ ಸ್ಮಾರ್ಟ್‌ಫೋನ್‌ಗಳನ್ನು ನೀಡುತ್ತಿದ್ದೇವೆ. ಈ ಮೂಲಕ ಉದ್ಯಮದ ಬೆಳವಣಿಗೆಗೆ ವೇಗ ನೀಡುತ್ತಿದ್ದೇವೆ’ ಎಂದು ಸ್ಯಾಮ್ಸಂಗ್‌ ಎಲೆಕ್ಟ್ರಾನಿಕ್ಸ್‌ನ ಮೊಬೈಲ್‌ ಕಮ್ಯುನಿಕೇಷನ್ಸ್‌ನ ಮುಖ್ಯಸ್ಥ ಡಿ.ಜೆ. ಕೋ ಹೇಳಿದ್ದಾರೆ. ‘ಸಾಂಪ್ರದಾಯಿಕ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ಮಿತಿಗಳು ಗ್ಯಾಲಕ್ಸಿ ಪೋಲ್ಡ್‌ನಲ್ಲಿ ಇರುವುದಿಲ್ಲ. ಪ್ರೀಮಿಯಂ ಫೋಲ್ಡೆಬಲ್‌ ಸಾಧನದಿಂದ ಹೊಸ ಅನುಭವಗಳನ್ನು ಕಂಡುಕೊಳ್ಳಬಹುದು. ನಿರೀಕ್ಷೆಯಂತೆಯೇ ಇದು ಅಗ್ಗವಾಗಿಲ್ಲ. ಆದರೆ, ಗ್ಯಾಜೆಟ್‌ ಪ್ರಿಯರಿಗೆ ಉತ್ತಮ ಸಾಧನವಾಗಿದೆ’ ಎಂದು ವಿಶ್ಲೇಷಕ ಬಾಬ್‌ ಒ ಡೊನೆಲ್‌ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಹೊಸತು: ಸಂಸ್ಥೆಯು ಎಸ್‌ ಸಸರಣಿಯಲ್ಲಿ ಇನ್ನೂ ಹಲವು ಸಾಧನಗಳನ್ನು ಬಿಡುಗಡೆ ಮಾಡಿದೆ.

5ಜಿ ಬೆಂಬಲಿಸುವ ‘ಎಸ್‌10’ರ ಬೆಲೆ ತಿಳಿಸಿಲ್ಲ. ಎಸ್‌10ಇ ಬೆಲೆ₹ 53,179ದಿಂದ, ಎಸ್‌10 ಪ್ಲಸ್‌ ಬೆಲೆ ₹ 70 ಸಾವಿರದಿಂದ ಆರಂಭ
ವಾಗಲಿದೆ.

ಗ್ಯಾಲಕ್ಸಿ ಫೋಲ್ಡ್‌ ವೈಶಿಷ್ಟ್ಯ
ಪರದೆ:
4.6 ಇಂಚು, ಬಿಡಿಸಿದಾಗ 7.6ವರೆಗೆ ಹಿಗ್ಗಲಿದೆ. ಇನ್ಫಿನಿಟಿ ಫ್ಲೆಕ್ಸ್‌ + ಅಮೊಎಲ್‌ಇಡಿ ಪ್ಯಾನಲ್‌ ಮತ್ತು ಕ್ಯುಎಕ್ಸ್‌ಜಿಎ ಪ್ಲಸ್‌ ರೆಸಲ್ಯೂಷನ್

ಒಎಸ್‌: ಆಂಡ್ರಾಯ್ಡ್‌ 9.0, ಕಸ್ಟಮ್‌ ಯುಐ.

ಪ್ರೊಸೆಸರ್: 64 ಬಿಟ್‌ ಆಕ್ಟಾ ಕೋರ್‌ ಪ್ರೊಸೆಸರ್

ರ‍್ಯಾಮ್‌: 12 ಜಿಬಿ, 512 ಜಿಬಿ ಆಂತರಿಕ ಸಾಮರ್ಥ್ಯ. ಮೈಕ್ರೊ ಎಸ್‌ಡಿ ಆಯ್ಕೆ ಇಲ್ಲ

ಬ್ಯಾಟರಿ: 4,380 ಎಂಎಎಚ್‌

ಫಿಂಗ್‌ರ್‌ಪ್ರಿಂಟ್‌ ಸ್ಕ್ಯಾನರ್‌

ಕ್ಯಾಮೆರಾ: 6 ಕ್ಯಾಮೆರಾಗಳಿವೆ.

ಕವರ್‌ ಕ್ಯಾಮೆರಾ 10ಎಂಪಿ ಸೆಲ್ಫಿ
ರೇರ್‌ ಕ್ಯಾಮೆರಾ :
12 ಎಂಪಿ+12ಎಂಪಿ ಟೆಲೆಫೋಟೊ + 16 ಎಂಪಿ ಅಲ್ಟ್ರಾ ವೈಡ್ ಆ್ಯಂಗಲ್ ವಿತ್‌ ಡ್ಯುಯಲ್‌ ಪಿಕ್ಸಲ್‌ ಆಟೊ ಫೋಕಸ್‌ ಕ್ಯಾಮೆರಾ

ಫ್ರಂಟ್ ಡ್ಯುಯಲ್ ಕ್ಯಾಮೆರಾ: 10ಎಂಪಿ + 8 ಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.