ADVERTISEMENT

ಹೊಸ ವೈಶಿಷ್ಟ್ಯತೆಯ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 9 ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2018, 10:34 IST
Last Updated 10 ಆಗಸ್ಟ್ 2018, 10:34 IST
   

ಆಂಡ್ರಾಯ್ಡ್‌ ಜಗತ್ತಿನಲ್ಲಿ ತನ್ನದೇ ಭಕ್ತಗಣ ಹೊಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 9 ಮೊಬೈಲ್‌ ಫೋನ್‌ ಗುರುವಾರ ಬಿಡುಗಡೆ ಮಾಡಿದೆ. ಇದು ಗ್ಯಾಲಕ್ಸಿ ನೋಟ್ 8ಕ್ಕಿಂತ ಉತ್ತಮ ಎಂಬ ಮಾತು ಚಾಲ್ತಿಯಲ್ಲಿದೆ. ಆಗಸ್ಟ್‌ 24ರಿಂದ ಜಗತ್ತಿನಾದ್ಯಂತ ಮಾರಾಟ ಆರಂಭವಾಗಲಿದೆ. ಆ.10 ರಿಂದ 21ರವರೆಗೆ ಬುಕಿಂಗ್‌ಗೆ ಅವಕಾಶವಿದೆ.

ಮೊಬೈಲ್‌ ವೈಶಿಷ್ಟ್ಯಗಳು:

ಸಿಮ್:ನ್ಯಾನೊ (ಡ್ಯುಯಲ್)
ಕ್ಯಾಮೆರ: ಡ್ಯುಯೆಲ್, 12 ಮೆಗಾ ಪಿಕ್ಸೆಲ್
ಉದ್ದ: 6.4 ಇಂಚು QHD+ (2960×1440)
ಕಾರ್ಯಾಚರಣ ವ್ಯವಸ್ಥೆ: ಆಂಡ್ರಾಯ್ಡ್ 8.1 Oreo
ಗಾತ್ರ: 161.9x76.4x8.8mm
ತೂಕ: 201 ಗ್ರಾಂ
ಬಣ್ಣ: ನಾಲ್ಕು ಬಣ್ಣಗಳಲ್ಲಿ ಲಭ್ಯ( ನೀಲಿ, ನೇರಳೆ, ಕಪ್ಪು, ಕೆಂಪು ಮಿಶ್ರಿತ ಕಂದು ಬಣ್ಣ)
ಬ್ಯಾಟರಿಸಾಮರ್ಥ್ಯ : 4000mAh
ಮೆಮೊರಿ: 6+128 ಜಿಬಿ (ಬೆಲೆ ₹67,900) ಮತ್ತು 8+512ಜಿಬಿ (ಬೆಲೆ ₹84,900),512 ಜಿಬಿ ಮೆಮೊರಿ ಕಾರ್ಡ್‌ ಬಳಕೆಗೆ ಅವಕಾಶ
ಎಸ್‌ ಪೆನ್‌ (ಇದು ಒಂದು ಮಾಂತ್ರಿಕ ದಂಡದ ಹಾಗೆ. ವೇಗವಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ) ಸೌಲಭ್ಯವಿದ್ದು, ಇದರ ಗಾತ್ರ 5.7x4.35x106.37 ಮಿ.ಮೀ ಮತ್ತು ತೂಕ 3.1 ಗ್ರಾಂ ಇರುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.