ADVERTISEMENT

ವಾಟ್ಸ್‌ಆ್ಯಪ್‌ ಕೆಲಸ ಮಾಡದ ಪೋನ್‌ಗಳು

ವಿಶ್ವನಾಥ ಎಸ್.
Published 3 ಜುಲೈ 2019, 19:30 IST
Last Updated 3 ಜುಲೈ 2019, 19:30 IST
   

ಜನಪ್ರಿಯ ಮೆಸೆಜಿಂಗ್‌ ಪ್ಲಾಟ್‌ಫಾರಂ ವಾಟ್ಸ್‌ಆ್ಯಪ್‌ ಕೆಲವು ಕಾರ್ಯಾಚರಣಾ ವ್ಯವಸ್ಥೆ (ಒಎಸ್‌) ಇರುವ ಹ್ಯಾಂಡ್‌ಸೆಟ್‌ಗಳಿಗೆ ಬೆಂಬಲ ನೀಡದೇ ಇರಲು ನಿರ್ಧರಿಸಿದೆ. ಆಂಡ್ರಾಯ್ಡ್‌, ಐಫೋನ್‌, ವಿಂಡೋಸ್‌ ಫೋನ್‌ನ ಕೆಲವು ಒಎಸ್‌ಗಳಲ್ಲಿ ವಾಟ್ಸ್‌ಆ್ಯಪ್‌ ಬಳಸಲು ಆಗುವುದಿಲ್ಲ. ಅಂದರೆ ಕೆಳಗೆ ಸೂಚಿಸಿರುವ ಒಎಸ್‌ ವರ್ಷನ್‌ಗಳಲ್ಲಿ, ನಿಗದಿ ಪಡಿಸಿರುವ ದಿನಾಂಕದಿಂದ ಹೊಸ ಖಾತೆ ತೆರೆಯಲು ಸಾಧ್ಯವಾಗುವುದಿಲ್ಲ. ಇರುವ ಖಾತೆಯ ನಿರ್ವಹಣೆ, ಮರು ದೃಢೀಕರಣ ಮಾಡಲು ಸಾಧ್ಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಹಾಗಿದ್ದರೆ, ಅದರಲ್ಲಿರುವ ಚಾಟ್‌ ಹಿಸ್ಟರಿಯನ್ನು ಅಪ್‌ಗ್ರೇಡೆಡ್‌ ಒಎಸ್‌ ಇರುವ ಹ್ಯಾಂಡ್‌ಸೆಟ್‌ಗೆ ವರ್ಗಾಯಿಸಬಹುದೇ ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ, ಅದೂ ಸಾಧ್ಯವಿಲ್ಲ. ಚಾಟ್‌ ಹಿಸ್ಟರಿ ಬೇಕೇ ಬೇಕು ಎಂದಾದರೆ ಅದನ್ನು ಮೇಲ್‌ಗೆ ಅಟ್ಯಾಚ್‌ ಮಾಡಿಕೊಳ್ಳಿ ಎನ್ನುವ ಸಲಹೆಯನ್ನೂ ನೀಡಿದೆ.

2.3.3ಗಿಂತಲೂ ಹಳೆಯ ಆಂಡ್ರಾಯ್ಡ್‌ ವರ್ಷನ್‌ಗಳಲ್ಲಿ ವಾಟ್ಸ್‌ಆ್ಯಪ್‌ ಕೆಲಸ ಮಾಡುವುದಿಲ್ಲ. ಅಂದರೆ ಆಂಡ್ರಾಯ್ಡ್‌ 2.1, 2.2ನಲ್ಲಿ ಬಳಕೆ ಸಾಧ್ಯವಿಲ್ಲ. ಅಂತೆಯೇ ವಿಂಡೋಸ್‌ 8.0 ಮತ್ತು ಅದಕ್ಕಿಂತಲೂ ಹಿಂದಿನ ವರ್ಷನ್‌ಗಳಿಗೂ ವಾಟ್ಸ್‌ಆ್ಯಪ್‌ ಸಿಗುವುದಿಲ್ಲ. ಐಫೋನ್‌ 3ಜಿಎಸ್‌/ಐಒಎಸ್‌ 6, ನೋಕಿಯಾ ಸಿಂಬಿಯನ್‌ ಎಸ್‌60ನಲ್ಲಿ 2020ರವರೆಗೂ ಇರುವ ಖಾತೆಯನ್ನು ಬಳಸಬಹುದಷ್ಟೆ.

ADVERTISEMENT

ಎಲ್ಲಿಯವರೆಗೆ ಬೆಂಬಲ?

ವಿಂಡೋಸ್‌ ಎಸ್‌40;2019ರ ಡಿಸೆಂಬರ್‌ 31. ಮೈಕ್ರೊಸಾಫ್ಟ್‌ ಸ್ಟೋರ್‌ನಲ್ಲಿ 2019ರ ಜುಲೈ 1ರಿಂದಲೇ ವಾಟ್ಸ್‌ಆ್ಯಪ್‌ ಲಭ್ಯವಿಲ್ಲ.

ಆಂಡ್ರಾಯ್ಡ್‌ 2.3.7 ಮತ್ತು ಅದಕ್ಕಿಂತ ಹಳತು;2020 ಫೆಬ್ರುವರಿ 1

ಆ್ಯಪಲ್ ಐಒಎಸ್‌ 7 ಮತ್ತು ಅದಕ್ಕಿಂತ ಹಳತು;2020 ಫೆಬ್ರುವರಿ 1

***

ಪರ್ಯಾಯ ಏನು?

ಆಂಡ್ರಾಯ್ಡ್‌ನ ಹಳೆಯ ಒಎಸ್ ಬಳಸುತ್ತಿರುವವರು ಒಎಸ್‌ 4.0 ಅಥವಾ ಅದಕ್ಕಿಂತ ಹೆಚ್ಚಿನದ್ದಕ್ಕೆ ಅಪ್‌ಗ್ರೇಡ್‌ ಆಗುವಂತೆ ಕಂಪನಿ ಶಿಫಾರಸು ಮಾಡಿದೆ. ಹಾಗೆಯೇ ಆ್ಯಪಲ್‌ನಲ್ಲಿ ಐಒಎಸ್‌ 8 ಅಥವಾ ಅದಕ್ಕಿಂತ ಹೆಚ್ಚಿನದ್ದು, ವಿಂಡೋಸ್‌ ಫೋನ್‌ನಲ್ಲಿ 8.1 ಅಥವಾ ಅದಕ್ಕಿಂತ ಹೆಚ್ಚಿನದ್ದಕ್ಕೆ ಅಪ್‌ಗ್ರೇಡ್‌ ಆಗುವಂತೆ ಸಲಹೆ ನೀಡಿದೆ.

ಒಎಸ್‌: ವಾಟ್ಸ್ಆ್ಯಪ್‌ ಸಲಹೆ
ಆಂಡ್ರಾಯ್ಡ್‌ ಒಎಸ್‌ 4.0.3+
ಐಫೋನ್‌ ಐಒಎಸ್‌ 8+
ಕಿಯಾ 2.5.2+ (ಜಿಯೊ ಫೋನ್‌ ಮತ್ತು ಜಿಯೊ ಫೋನ್‌ 2 ಒಳಗೊಂಡು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.