ADVERTISEMENT

ನೂತನ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ ಟೆಕ್ನೊ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಡಿಸೆಂಬರ್ 2022, 9:16 IST
Last Updated 17 ಡಿಸೆಂಬರ್ 2022, 9:16 IST
   

ಚೀನಾ ಮೂಲದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪೆನಿ ಟೆಕ್ನೊ (TECNO) ತನ್ನ ಎರಡು ಹೊಸ ಉತ್ಪನ್ನಗಳಾದ PHANTOM X2 Series (ಸ್ಮಾರ್ಟ್‌ಫೋನ್‌) ಹಾಗೂMEGABOOK S1 (ಲ್ಯಾಪ್‌ಟಾಪ್‌) ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಟೆಕ್ನೊದ ಎರಡೂ ಉತ್ಪನ್ನಗಳು ನೂತನ ತಂತ್ರಜ್ಞಾನ ಮತ್ತು ಅತ್ಯುತ್ತಮ ಕಾರ್ಯಕ್ಷಮತೆಯನ್ನು ಹೊಂದಿವೆ.

PHANTOM X2 Pro 5G ಸರಣಿಯ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳು ಸುಧಾರಿತ ತಂತ್ರಜ್ಞಾನವನ್ನು ಹೊಂದಿವೆ. ವೃತ್ತಿಪರ ಕ್ಯಾಮರಾ ಬಳಕೆಯ ಅನುಭವ ನೀಡುವಂತಹ ಹಿಂದೆ ಸರಿಯುವ ಪೋಟ್ರೇಟ್‌ ಲೆನ್ಸ್‌ ಒಳಗೊಂಡ ವಿಶ್ವದ ಮೊದಲ ಸ್ಮಾರ್ಟ್‌ಫೋನ್‌ ಎನಿಸಿದೆ.

ADVERTISEMENT

ಎರಡೂ ಅಂಚು ಬಾಗಿದಂತಿರುವ ಆಕರ್ಷಕ ವಿನ್ಯಾಸ,6.52 ಇಂಚಿನ ಡಿಸ್ಪ್ಲೇ ಹೊಂದಿರುವ ಈ ಫೋನ್‌ ಆಕರ್ಷಕವಾಗಿದೆ. ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬಳಸಿ ತಯಾರಿಸಲಾದ ಬ್ಯಾಕ್‌ ಕವರ್‌ ಒಳಗೊಂಡ ಪರಿಸರ ಸ್ನೇಹಿ ಆವೃತ್ತಿಯಲ್ಲಿಯೂ ಲಭ್ಯವಿದೆ.ಮೀಡಿಯಾಟೆಕ್‌ ಡೈಮೆನ್ಸಿಟಿ 9000 ಚಿಪ್‌ಸೆಟ್‌ ಅನ್ನೂ ಒಳಗೊಂಡಿದೆ.

TECNO MEGABOOK S1 ಅತ್ಯಾಧುನಿಕ ಲ್ಯಾಪ್‌ಟಾಪ್ ಆಗಿದ್ದು ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲದು. ಹಿತವಾದ ಬಳಕೆಯ ಅನುಭವವನ್ನೂ ನೀಡುತ್ತದೆ. 12th Gen Intel processor, ಅಸಾಧಾರಣ ಕಾರ್ಯಕ್ಷಮತೆ ಹೊಂದಿದೆ. ಅಷ್ಟಲ್ಲದೆ ಕೇವಲ 13.5 mm ಗಾತ್ರ ಇರುವಈ ಲ್ಯಾಪ್‌ಟಾಪ್‌, ಅಡಾಪ್ಟರ್‌ ಸೇರಿ 1.44kg ತೂಕವಷ್ಟೇ ಇದೆ. ಹೀಗಾಗಿ ಎಲ್ಲಿಗೆ ಬೇಕಾದರೂ ಜೊತೆಯಲ್ಲಿ ಕೊಂಡೊಯ್ಯಬಹುದು.

ಈ ಲ್ಯಾಪ್‌ಟಾಪ್‌ನ16GBRAM ಮತ್ತು512GBಸ್ಟೋರೇಜ್‌ ಆವೃತ್ತಿಯು ₹ 1,23,000ಕ್ಕೆ ಮತ್ತು 16GB RAM ಮತ್ತು 1TB ಸ್ಟೋರೇಜ್‌ ಆವೃತ್ತಿಯು ₹1,31,000ಕ್ಕೆ ಸಿಗಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.