ADVERTISEMENT

ಫ್ಲಿಪ್‌ಕಾರ್ಟ್‌ನಲ್ಲಿ ಥಾಮ್ಸನ್ ವಾರ್ಷಿಕ ವಿಶೇಷ ಬಿಗ್ ಸೇವಿಂಗ್ ಡೇಯ್ಸ್ ಸೇಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮೇ 2022, 12:12 IST
Last Updated 2 ಮೇ 2022, 12:12 IST
ಥಾಮ್ಸನ್ ವಿಶೇಷ ವಾರ್ಷಿಕ ಮಾರಾಟ ಮೇಳ
ಥಾಮ್ಸನ್ ವಿಶೇಷ ವಾರ್ಷಿಕ ಮಾರಾಟ ಮೇಳ    

ಬೆಂಗಳೂರು: ಫ್ರಾನ್ಸ್ ಮೂಲದ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಥಾಮ್ಸನ್, ದೇಶದಲ್ಲಿ ವಾರ್ಷಿಕ ವಿಶೇಷ ಮಾರಾಟ ಮೇಳ ಆಯೋಜಿಸಿದೆ.

ಫ್ಲಿಪ್‌ಕಾರ್ಟ್ ಮೂಲಕ ಮೇ 3ರಿಂದ ಮೇ 8ರವರೆಗೆ ನಡೆಯುವ ‘ಬಿಗ್ ಸೇವಿಂಗ್ ಡೇಯ್ಸ್ ಸೇಲ್‘ನಲ್ಲಿ ಥಾಮ್ಸನ್ ಟಿವಿ, ವಾಷಿಂಗ್ ಮೆಶಿನ್ ಮತ್ತು ಏರ್ ಕಂಡಿಶನ್ ಮೇಲೆ ವಿಶೇಷ ಡಿಸ್ಕೌಂಟ್ ಲಭ್ಯವಾಗಲಿದೆ.

ಅಲ್ಲದೆ, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಗ್ರಾಹಕರಿಗೆ ಶೇ 10 ಇನ್‌ಸ್ಟಂಟ್ ಡಿಸ್ಕೌಂಟ್ ಕೂಡ ದೊರೆಯಲಿದೆ ಎಂದು ಕಂಪನಿ ಹೇಳಿದೆ.

ADVERTISEMENT

ಥಾಮ್ಸನ್ ಟಿವಿ ಸರಣಿ ಬೆಲೆ ದೇಶದಲ್ಲಿ 24 ಇಂಚಿನ ಮಾದರಿಗೆ ₹6,999ರಿಂದ ಆರಂಭವಾಗಲಿದೆ.

ಜತೆಗೆ, ವಾಷಿಂಗ್ ಮೆಶಿನ್ ಮತ್ತು ಏರ್ ಕಂಡಿಶನ್ ಖರೀದಿಗೂ ವಿಶೇಷ ಕೊಡುಗೆಯನ್ನು ನೀಡಲಾಗುತ್ತದೆ ಎಂದು ಥಾಮ್ಸನ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.