ADVERTISEMENT

ಜಿಯೊಟೆಲಿ ಒಎಸ್ ಮೂಲಕ ಕಾರ್ಯಾಚರಿಸುವ ಮೊದಲ ಟಿವಿ ಬಿಡುಗಡೆ ಮಾಡಿದ ಥಾಮ್ಸನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2025, 7:43 IST
Last Updated 20 ಫೆಬ್ರುವರಿ 2025, 7:43 IST
   

ನವದೆಹಲಿ: ಎಲೆಕ್ಟ್ರಾನಿಕ್‌ ಉಪಕರಣಗಳ ತಯಾರಿಕಾ ಕಂಪನಿ ಥಾಮ್ಸನ್‌, ಜಿಯೊಟೆಲಿ ಒಎಸ್ ಮೂಲಕ ಕಾರ್ಯಾಚರಿಸುವ 43 ಇಂಚಿನ QLED ಟಿವಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಅತ್ಯುತ್ತಮ ವಿನ್ಯಾಸದೊಂದಿಗೆ ವಾಯ್ಸ್ ಸರ್ಚ್‌, ವೈಯಕ್ತಿಕಗೊಳಿಸಿದ ಸಲಹೆಗಳು, ಎಐ ಅಪ್‌ಸ್ಕೇಲಿಂಗ್ ಮುಂತಾದ ತಂತ್ರಜ್ಞಾನಗಳನ್ನು ಇದು ಒಳಗೊಂಡಿದೆ.

ಇದರ ಮಾರುಕಟ್ಟೆ ಬೆಲೆ ₹18,999 ಇದ್ದು, ಫ್ಲಿಪ್‌ಕಾರ್ಟ್‌ನಲ್ಲಿ 2025ರ ಜನವರಿ 21ರಿಂದ ಲಭ್ಯವಿದೆ.

ADVERTISEMENT

ಇದಲ್ಲದೇ ಕಂಪನಿಯು ಗ್ರಾಹಕರಿಗೆ ಲಾಂಚ್‌ ಆಫರ್ ನೀಡಿದ್ದು, ಮೂರು ತಿಂಗಳ ಜಿಯೊಹಾಟ್‌ಸ್ಟಾರ್‌(jiohotstar) ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ.

ವೈಶಿಷ್ಟ್ಯತೆಗಳೇನು:

  • 4ಕೆ ಡಿಸ್‌ಪ್ಲೇ

  • ಎಚ್‌ಡಿಆರ್

  • ಡ್ಯುಯಲ್‌ಬ್ಯಾಂಡ್(2.4+5)GHz ವೈಫೈ

  • ಮಲ್ಟಿ ಲ್ಯಾಂಗ್ವೇಜ್‌ ವಾಯ್ಸ್‌ ಅಸಿಸ್ಟೆಂಟ್

  • 2 ಜಿಬಿ RAM

  • 8 ಜಿಬಿ ROM

  • 300+ ಜಿಯೊ ಗೇಮ್ಸ್‌

  • 2 ಯುಎಸ್‌ಬಿ

  • 300+ ಉಚಿತ ಲೈವ್ ಟಿವಿ ಚಾನೆಲ್ಸ್‌

  • ಸ್ಪೀಕರ್, ಹೆಡ್‌ಫೋನ್‌, ಮೌಸ್‌ ಸಪೊರ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.