ADVERTISEMENT

ವಾಟ್ಸ್‌ಆ್ಯಪ್‌: ವಿಡಿಯೊ ಮೂಲಕ ಗೂಢಚರ್ಯೆ!

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 19:30 IST
Last Updated 20 ನವೆಂಬರ್ 2019, 19:30 IST
   

ನಿಮ್ಮ ವಾಟ್ಸ್‌ಆ್ಯಪ್‌ಗೆ ವಿಡಿಯೊ ಕಳುಹಿಸುವ ಮೂಲಕವೂ ಗೂಢಚರ್ಯೆ ನಡೆಸುವ ಸಾಧ್ಯತೆ ಇದೆ ಎಂದು ಇಂಡಿಯನ್‌ ಕಂಪ್ಯೂಟರ್‌ ಎಮರ್ಜೆನ್ಸಿ ರೆಸ್ಪಾನ್ಸ್‌ ಟೀಮ್‌ ಹೇಳಿದೆ. ಹೀಗಾಗಿ ತಕ್ಷಣವೇ ವಾಟ್ಸ್‌ಆ್ಯಪ್‌ ಅಪ್‌ಡೇಟ್‌ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.
ಎಂಪಿ4 ವಿಡಿಯೊ ಕಳುಹಿಸಿ ಅದರ ಮೂಲಕ ಯಾವುದೇ ರೀತಿಯ ಅನುಮತಿ ಕೇಳದೇ ಮೊಬೈಲ್‌ಗೆ ಕುತಂತ್ರಾಂಶ ಸೇರಿಕೊಳ್ಳುವಂತೆ ಮಾಡಲಾಗುತ್ತದೆ. ಆ ಮೂಲಕ ಮೊಬೈಲ್‌ ಮೇಲೆ ನಿಯಂತ್ರಣ ಸಾಧಿಸಲಾಗುತ್ತದೆ.‌

ವಾಟ್ಸ್‌ಆ್ಯಪ್‌ ಅಪ್‌ಡೇಟ್‌ ಮಾಡಿಕೊಳ್ಳುವಂತೆ ಕಂಪನಿಯು ಪದೇ ಪದೇ ಸೂಚನೆ ನೀಡುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಆಂಡ್ರಾಯ್ಡ್‌ ಬಳಕೆದಾರರು ಕನಿಷ್ಠ 2.19.274 ವರ್ಷನ್‌ ಮತ್ತು ಆ್ಯಪಲ್‌ ಐಫೋನ್‌ ಬಳಕೆದಾರರು ಕನಿಷ್ಠ 2.19.100 ವರ್ಷನ್‌ ಹೊಂದಿರಲೇಬೇಕು ಎಂದು ಹೇಳಿದೆ.

ADVERTISEMENT

ವರ್ಷನ್‌ ಚೆಕ್‌ ಮಾಡಲು: ಐಫೋನ್‌: Settings>Help
ಆಂಡ್ರಾಯ್ಡ್‌: Settings>Help> ‘App info’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.