ADVERTISEMENT

ಈ ಐಫೋನ್, ಆಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಶೀಘ್ರ ವಾಟ್ಸ್‌ಆ್ಯಪ್ ಕಾರ್ಯಸ್ಥಗಿತ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2020, 16:30 IST
Last Updated 29 ಡಿಸೆಂಬರ್ 2020, 16:30 IST
ವಾಟ್ಸ್ಆಪ್
ವಾಟ್ಸ್ಆಪ್   

ಕಳೆದ ವರ್ಷ 2019ರ ಡಿಸೆಂಬರ್‌ 31ರಂದುಎಲ್ಲ ವಿಂಡೋಸ್ ಚಾಲಿತ ಮೊಬೈಲ್ ಫೋನ್‌ಗಳಿಗೆ ಬೆಂಬಲಿಸುವುದನ್ನು ನಿಲ್ಲಿಸಿದ್ದ ಫೇಸ್‌ಬುಕ್ ಒಡೆತನದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್‌ಆ್ಯಪ್ ಇದೀಗ, ಮುಂದಿನ ವಾರದಿಂದ ಕೆಲವು ಆಯ್ದ ಆಂಡ್ರಾಯ್ಡ್ ಮತ್ತು ಐಓಎಸ್ ಚಾಲಿತ ಐಫೋನ್‌ಗಳಿಗೆ ಬೆಂಬಲ ನಿಲ್ಲಿಸಲು ಸಿದ್ಧತೆ ನಡೆಸಿದೆ.

ಫೆಬ್ರುವರಿ 1, 2020ರ ಬಳಿಕ ಆಂಡ್ರ್ಯಾಯ್ಡ್ ಆವೃತ್ತಿ 2,3,7 ಹೊಂದಿರುವ ಮತ್ತು ಅದಕ್ಕಿಂತ ಹಳೆಯ ಫೋನ್‌ಗಳಲ್ಲಿ ವಾಟ್ಸ್‌ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ. ಐಒಎಸ್ 8 ಅಥವಾ ಹಳೆಯ ಆವೃತ್ತಿಗಳನ್ನು ಹೊಂದಿರುವ ಐಫೋನ್‌ಗಳು ಇನ್ನು ಮುಂದೆ ವಾಟ್ಸ್‌ಆ್ಯಪ್ ತಂತ್ರಾಂಶ ನವೀಕರಣ(ಅಪ್ಡೇಟ್)ವನ್ನು ಪಡೆಯುವುದಿಲ್ಲ. ಮುಂದಿನ ವಾರದ ಬಳಿಕ ಯಾವುದೇ ಸಮಯದಲ್ಲಿ ಕಾರ್ಯಸ್ಥಗಿತಮಾಡಬಹುದು.

ವಾಟ್ಸ್ ಆಪ್ ಕಾರ್ಯ ಸ್ಥಗಿತಗೊಳಿಸಲಿರುವ ಮೊಬೈಲ್ ಆಪರೇಟಿಂಗ್ ಸಿಸ್ಟಂಗಳ ಪಟ್ಟಿ ಹೀಗಿದೆ– ಆಂಡ್ರ್ಯಾಯ್ಡ್ OS 4.0.3 ಚಾಲಿತ ಫೋನ್, ಐಫೋನ್ iOS 8 ಚಾಲಿತ ಫೋನ್, ಜಿಯೋ ಫೋನ್ ಮತ್ತು ಜಿಯೋ ಫೋನ್ 2 ಸೇರಿದಂತೆ ಕೆಎಐಒಎಸ್ 2.5.1 ಆವೃತ್ತಿ ಚಾಲನೆಯಲ್ಲಿರುವ ಕೆಲ ಆಯ್ದ ಫೋನ್‌ಗಳು.

ADVERTISEMENT

ಇದೇ ಸಂದರ್ಭ ವಾಟ್ಸಾಪ್ ಅಧಿಕೃತವಾಗಿ ಆಂಡ್ರ್ಯಾಯ್ಡ್ ಫೋನ್‌ಗಳಿಗೆ ಡಾರ್ಕ್‌ಮೋಡ್ ವೈಶಿಷ್ಟ್ಯದ ಪರೀಕ್ಷೆ ಆರಂಭಿಸಿದೆ. ಆಸಕ್ತಿ ಇರುವವರು ವಾಟ್ಸಾಪ್ ಬೆಟಾ ಡೌನ್ಲೋಡ್ ಮಾಡಿಕೊಂಡು ಟೆಸ್ಟಿಂಗ್ ರಿಜಿಸ್ಟರ್ ಮಾಡಿಕೊಳ್ಳಬಹುದು.

ಈಗಾಗಲೇ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಡಾರ್ಕ್‌ಮೋಡ್ ಲಭ್ಯವಿದ್ದು, ಈ ವೈಶಿಷ್ಟ್ಯದಿಂದ ಯೂಸರ್ ಇಂಟರ್ಫೇಸ್ನ ಸ್ವರೂಪ ಉತ್ತಮಗೊಳ್ಳುವುದರ ಜೊತೆ ಬ್ಯಾಟರಿ ಬಾಳಿಕೆ ಕೂಡ ಹೆಚ್ಚಾಗುತ್ತದೆ.

ಈ ಹೊಸ ವೈಶಿಷ್ಟ್ಯವನ್ನು ಪ್ರಯೋಗಾರ್ಥ ಬಳಸಿದ ಬಳಕೆದಾರರಿಂದ ಕಂಪನಿಯು ಫೀಡ್ ಬ್ಯಾಕ್ ಪಡೆಯಲಿದ್ದು, ಯಾವುದೇ ದೋಷವಿದ್ದರೆ ಅದನ್ನು ನಿವಾರಿಸುತ್ತದೆ. ಆ ಬಳಿಕವಷ್ಟೇ ಆಪ್‌ ಅಪ್ಡೇಟ್ ಮೂಲಕ ಡಾರ್ಕ್‌ಮೋಡ್ ಬಿಡುಗಡೆ ಮಾಡಲಾಗುತ್ತದೆ.

ಮೇಲೆ ತಿಳಿಸಲಾದ (ಐಒಎಸ್ 8 / ಆಂಡ್ರಾಯ್ಡ್ 2.3.7 ಅಥವಾ ಅದಕ್ಕಿಂತ ಹಳೆಯದಾದ) ಮೊಬೈಲ್‌ಗಳ ವಾಟ್ಸಾಪ್‌ನಲ್ಲಿ ಡಾರ್ಕ್ ಮೋಡ್ ವೈಶಿಷ್ಟ್ಯ ಲಭ್ಯವಿರುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.