ADVERTISEMENT

ಕೋವಿಡ್‌–19 ತಡೆಗೆ ಕೈತೊಳೆದರೆ ಸಾಕೇ? ಸದಾ ಕೈಯಲ್ಲೇ ಇರುವ ಮೊಬೈಲ್‌ ಫೋನ್‌ ಶುಚಿ?

ಏಜೆನ್ಸೀಸ್
Published 15 ಮಾರ್ಚ್ 2020, 3:52 IST
Last Updated 15 ಮಾರ್ಚ್ 2020, 3:52 IST
ಕೊರೊನಾ ವೈರಸ್‌ ಸೋಂಕಿನಿಂದ ರಕ್ಷಣೆಗೆ ಮಾಸ್ಕ್‌ ಧರಿಸಿರುವ ವ್ಯಕ್ತಿ ಮೊಬೈಲ್‌ ಫೋನ್‌ ನೋಡುತ್ತಿರುವುದು– ಸಾಂದರ್ಭಿಕ ಚಿತ್ರ
ಕೊರೊನಾ ವೈರಸ್‌ ಸೋಂಕಿನಿಂದ ರಕ್ಷಣೆಗೆ ಮಾಸ್ಕ್‌ ಧರಿಸಿರುವ ವ್ಯಕ್ತಿ ಮೊಬೈಲ್‌ ಫೋನ್‌ ನೋಡುತ್ತಿರುವುದು– ಸಾಂದರ್ಭಿಕ ಚಿತ್ರ   
""
""

ಕೈತೊಳೆಯುವುದು ಮತ್ತು ಮಾಸ್ಕ್‌ ಧರಿಸಿ ಕೊರೊನಾ ವೈರಸ್ ಸೋಂಕಿನಿಂದ ರಕ್ಷಣೆ ಪಡೆಯುತ್ತಿರುವ ಬಹಳಷ್ಟು ಜನರು ತಮ್ಮ ಮೊಬೈಲ್‌ ಫೋನ್‌, ಲ್ಯಾಪ್‌ಟಾಪ್‌, ಟ್ಯಾಬ್‌ಗಳನ್ನು ವೈರಸ್‌ ಮುಕ್ತಗೊಳಿಸುವ ಬಗ್ಗೆ ಗಮನ ಕೊಟ್ಟಿಲ್ಲ. ವಿಜ್ಞಾನಿಗಳು ನಡೆಸಿರುವ ಹಲವು ಪರೀಕ್ಷೆಗಳಲ್ಲಿಪ್ಲಾಸ್ಟಿಕ್‌ ಮತ್ತು ಸ್ಟೈನ್‌ಲೆಸ್‌ ಸ್ಟೀಲ್‌ ವಸ್ತುಗಳ ಮೇಲೆ ವೈರಸ್‌ ಎರಡರಿಂದ ಮೂರು ದಿನಗಳ ವರೆಗೂ ಜೀವಿಸುವುದು ತಿಳಿದು ಬಂದಿದೆ.

ಪದೇ ಪದೇ ಕೈಗಳನ್ನು ತೊಳೆಯುವುದು, ಸ್ಟ್ಯಾನಿಟೈಸರ್‌ ಬಳಸುವುದು ಸಾಮಾನ್ಯವಾಗಿದೆ. ಕೊರೊನಾ ವೈರಸ್‌ ಪ್ರಭಾವನ್ನು ತಡೆಯುವ ಉದ್ದೇಶದಿಂದ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಡಿಜಿಟಲ್ ಉಪಕರಣಗಳನ್ನು ಬಹುತೇಕ ನಿರ್ಲಕ್ಷಿಸಲಾಗಿದೆ. ಅರೆ ಕ್ಷಣವೂ ಫೋನ್‌ನಿಂದ ದೂರ ಉಳಿಯದ ಜನರಿಗೆ ಅದೇ ಫೋನ್‌ ವೈರಸ್‌ ಸೋಂಕು ತಗುಲಲು ಕಾರಣವಾಗಬಹುದು!

ಹೆಚ್ಚು ಬಳಸುವ, ಮುಟ್ಟುವ ವಸ್ತುಗಳನ್ನು ನಿತ್ಯವೂ ಶುಚಿಗೊಳಿಸುವಂತೆರೋಗ ನಿಯಂತ್ರಣ ಮತ್ತು ತಡೆ ಕೇಂದ್ರಗಳು ಸಲಹೆ ನೀಡಿವೆ. ಫೋನ್‌ಗಳು, ಕಿಬೋರ್ಡ್‌ಗಳು, ಕಂಪ್ಯೂಟರ್, ಟ್ಯಾಬ್ಲೆಟ್‌ಗಳನ್ನು ಶುಚಿ ಮಾಡುವುದು ಅಗತ್ಯವಾಗಿದೆ.

ADVERTISEMENT

ಆದರೆ, ಸೋಪ್‌ ಅಥವಾ ಸ್ಯಾನಿಟೈಸರ್‌ ಬಳಸಿ ಫೋನ್‌ಗಳನ್ನು ಉಜ್ಜಿ ತೊಳೆದರೆ, ಫೋನ್‌ ಉಳಿಯುತ್ತದೆಯೇ? ನೀರಿನ ಅಂಶ ಫೋನ್‌ ಒಳಗೆ ಇಳಿಯದಂತೆ ಎಚ್ಚರವಹಿಸಬೇಕು. ಕ್ಲೀನರ್‌ಗಳನ್ನು ಫೋನ್‌ ಮೇಲೆ ನೇರವಾಗಿ ಸಿಂಪಡಿಸುವುದು ಅಥವಾ ಸೋಪು ಮಿಶ್ರಣದಲ್ಲಿ ಮೊಬೈಲ್‌ ಮುಳುಗಿಸಿದರೆ ಫೋನ್‌ ಕಳೆದುಕೊಳ್ಳಬೇಕಾಗುತ್ತದೆ.

ಹಾಗಾದರೆ ಫೋನ್‌ ಶುಚಿಗೊಳಿಸುವುದು ಹೇಗೆ?

ಮೊದಲಿಗೆ ಫೋನ್‌ ಸ್ವಿಚ್‌ ಆಫ್‌ ಮಾಡಿ. ಶುಚಿಗೊಳಿಸುವಾಗ ಫೋನ್‌ ಚಾರ್ಜ್‌ ಮಾಡಬಾರದು; ಚಾರ್ಜಿಂಗ್‌ ಕೇಬಲ್‌, ಇಯರ್‌ಫೋನ್‌ ಯಾವುದೂ ಫೋನ್‌ಗೆ ಸಂಪರ್ಕಿಸದಿರುವುದನ್ನು ಗಮನಿಸಿ.

ಟಿಶ್ಯೂರೀತಿಯಲ್ಲಿರುವ ನಯವಾದ ಬಟ್ಟೆ ಅಥವಾ ಹಾಳೆಗಳನ್ನು ಫೋನ್‌ಒರಸಲು ಬಳಸಬೇಕು. ಔಷಧಿ ಅಂಗಡಿಗಳಲ್ಲಿ ಶೇ 70ರಷ್ಟು ಆಲ್ಕೊಹಾಲ್‌ ಹೊಂದಿರುವ ವೈಪ್ಸ್‌ (ಒರಸುವ ಕಾಗದ) ದೊರೆಯುತ್ತವೆ. ಕನಿಷ್ಠ 9ರಿಂದ 35 ವೈಪ್‌ಗಳನ್ನು ಒಳಗೊಂಡಿರುವ ಪ್ಯಾಕೆಟ್‌ಗಳು ಲಭ್ಯವಿರುತ್ತದೆ. ಅದನ್ನು ಬಳಸಿ ಫೋನ್‌ ಒರಸಬಹುದು. ಆದರೆ, ಹೆಚ್ಚು ತೇವಾಂಶವಿದ್ದರೆ ಅದನ್ನು ಹಿಂಡಿದ ನಂತರವೇ ಬಳಸುವುದು ಉತ್ತಮ.

ಕನ್ನಡಕದ ಗಾಜು ಅಥವಾ ಕ್ಯಾಮೆರಾ ಲೆನ್ಸ್‌ ಒರಸಲು ಬಳಸುವ ಮೃದುವಾದ ಬಟ್ಟೆಗಳಿಂದ ಇಲ್ಲವೇ ಮೈಕ್ರೋಫೈಬರ್‌ ಬಟ್ಟೆಯನ್ನುಸೋಪ್ ಮತ್ತು ನೀರಿನ ಅಂಶದಲ್ಲಿ ಅದ್ದಿ, ತೇವಾಂಶವನ್ನು ಹಿಂಡಿ ತೆಗೆದು ಮೊಬೈಲ್‌ ಒರಸಬಹುದು.

ಸ್ಯಾಮ್‌ಸಂಗ್‌ ಪ್ರಸ್ತುತ ಅಮೆರಿಕದ ಸ್ಯಾಮ್‌ಸಂಗ್‌ ಕೇಂದ್ರಗಳು ಹಾಗೂ ಮಳಿಗೆಗಳಲ್ಲಿ ಉಚಿತವಾಗಿ ಫೋನ್‌ಗಳನ್ನು ಶುಚಿಗೊಳಿಸಿ ಕೊಡುವ ಸೇವೆ ನೀಡುತ್ತಿದೆ. ಯುವಿ (UV) ಲೈಟ್‌ ಬಳಸಿ ಮೊಬೈಲ್ ಶುಚಿಗೊಳಿಸಲಾಗುತ್ತದೆ. ಕೆಲವು ವಾರಗಳಲ್ಲಿ ಇತರೆ ರಾಷ್ಟ್ರಗಳಿಗೂ ಅದನ್ನು ವಿಸ್ತರಿಸಲಿದೆ.

ಜಗತ್ತಿನಾದ್ಯಂತ 1,37,000 ಮಂದಿ ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿದ್ದು, 5,000ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.