(ಚಿತ್ರ ಕೃಪೆ: ಇಸ್ರೊ)
ಶೂನ್ಯ ಗುರುತ್ವ ಪ್ರದೇಶದಲ್ಲಿ ಎರಡು ಉಪಗ್ರಹಗಳನ್ನು ಪರಸ್ಪರ ಜೋಡಿಸುವ ‘ಡಾಕಿಂಗ್’ ಕಾರ್ಯಾಚರಣೆಯು ಅತ್ಯಂತ ಸವಾಲಿನದ್ದಾಗಿತ್ತು. ನಿಗದಿತ ವೇಗ ಮತ್ತು ಸ್ಥಾನದಲ್ಲಿ ಸ್ವಲ್ಪವೇ ಬದಲಾಗಿದ್ದರೂ ಎರಡೂ ಉಪಗ್ರಹಗಳು ಪರಸ್ಪರ ಅಪ್ಪಳಿಸಿ, ಸ್ಫೋಟಿಸುವ ಅಪಾಯವಿತ್ತು. ಹೀಗಿದ್ದೂ ಕಾರ್ಯಾಚರಣೆಯಲ್ಲಿನ ಕೊರತಗೆಳನ್ನು ತುಂಬಿಕೊಂಡು ಇಸ್ರೊ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದೆ. ಡಾಕಿಂಗ್ ವ್ಯವಸ್ಥೆ, ಉಪಗ್ರಹಗಳನ್ನು ನಿಗದಿತ ಸ್ಥಳಕ್ಕೆ ಸೇರಿಸುವ ವ್ಯವಸ್ಥೆ, ಉಪಗ್ರಹಗಳನ್ನು ಬೇರ್ಪಡಿಸುವ (ಅನ್ ಡಾಕಿಂಗ್) ವ್ಯವಸ್ಥೆ ಸೇರಿದಂತೆ ಈ ಯೋಜನೆಯ ಎಲ್ಲ ಹಂತದಲ್ಲಿಯೂ ಭಾರತೀಯ ತಂತ್ರಜ್ಞಾನವನ್ನೇ ಬಳಸಿಕೊಳ್ಳಲಾಗಿದೆ.
ಜ.6: ಜೋಡಣೆ ಪ್ರಕಿಯೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಈ ಪ್ರಕ್ರಿಯೆಯನ್ನು ಭೂಮಿಯಿಂದ ನಿಯಂತ್ರಿಸಬೇಕಿರುವುದರಿಂದ ಜ.7ರಂದು ನಡೆಯಬೇಕಿದ್ದ ಜೋಡಣೆ ಪ್ರಕ್ರಿಯೆಯನ್ನು ಜ.9ಕ್ಕೆ ಮುಂದೂಡಲಾಯಿತು
ಜ.8: ಚೇಸರ್ ಉಪಗ್ರಹವು ಟಾರ್ಗೆಟ್ ಉಪಗ್ರಹದಿಂದ 500 ಮೀ. ದೂರದಲ್ಲಿತ್ತು. ಈ ಅಂತರವು ಕಡಿಮೆಯಾಗಿ 225 ಮೀ. ನಷ್ಟಾಗಲು ಚೇಸರ್ ಉಪಗ್ರಹವು ಟಾರ್ಗೆಟ್ ಉಪಗ್ರಹದ ಬಳಿ ಸಾಗಿತು. ಟಾರ್ಗೆಟ್ ಉಪಗ್ರಹದ 225 ಮೀ. ಅಂತರಕ್ಕೆ ತಲುಪುತ್ತಿದ್ದಂತೆಯೇ ಚೇಸರ್ ಉಪಗ್ರಹದ ವೇಗ ನಿಗದಿಗಿಂತ ಹೆಚ್ಚಾಯಿತು. ಹೀಗಾಗಿ ಕಾರ್ಯಾಚರಣೆ ಮುಂದೂಡಲಾಯಿತು
ಜ.9: ಚೇಸರ್ ಉಪಗ್ರಹದ ವೇಗವನ್ನು ತಗ್ಗಿಸಲಾಯಿತು. ಎರಡೂ ಉಪಗ್ರಹಗಳು ಸುಲಲಿತವಾಗಿ ಹತ್ತಿರಕ್ಕೆ ಬರುವಂತೆ ಮಾಡಲಾಯಿತು
****
ಜ.10–11: ಎರಡೂ ಉಪಗ್ರಹಗಳ ಪರಸ್ಪರ 1.5 ಕಿ.ಮೀ.ನಷ್ಟು ದೂರದಲ್ಲಿದ್ದವು. ಕಾರ್ಯಾಚರಣೆ ಮೂಲಕ ಅಂತರವನ್ನು 500 ಮೀಟರ್‌ಗೆ ಇಳಿಸಲಾಯಿತು. ಎರಡೂ ಉಪಗ್ರಹಗಳ ಅಂತರವನ್ನು 230 ಮೀ.ಗೆ ತಗ್ಗಿಸಲಾಯಿತು.
ಜ.12: ಬೆಳಿಗ್ಗೆ 3.11ರ ವೇಳೆಗೆ ಉಪಗ್ರಹಗಳು ಪರಸ್ಪರ 105 ಮೀ.ನಷ್ಟು ಹತ್ತಿರಕ್ಕೆ ಬಂದಿದ್ದವು.
ಬೆಳಿಗ್ಗೆ 5.17ರ ವೇಳೆಗೆ ಅಂತರವು 15 ಮೀ.ಗೆ ಇಳಿಕೆಯಾಯಿತು.
ಬೆಳಿಗ್ಗೆ 7.06ರ ವೇಳೆಗೆ ಪರಸ್ಪರ 3 ಮೀಟರ್‌ನಷ್ಟು ಹತ್ತಿರಕ್ಕೆ ಬಂದಿದ್ದವು. ಅದೇ ಅಂತರದಲ್ಲಿ ಕೆಲ ಕಾಲ ನಿಲ್ಲಿಸುವ ಕಾರ್ಯಾಚರಣೆ ನಡೆಸಲಾಯಿತು.
* ನಂತರ ಚೇಸರ್ ಅನ್ನು ಮತ್ತೆ 15 ಮೀ.ನಷ್ಟು ಹಿಂದಕ್ಕೆ ತರಲಾಯಿತು
ಜ.16: ಐತಿಹಾಸಿಕ ಘಳಿಗೆ! ಜೋಡಣೆ ಯಶಸ್ವಿ. 15 ಮೀ.ನಷ್ಟಿದ್ದ ಅಂತರವನ್ನು 3 ಮೀ.ಗೆ ತರಲಾಗಿತ್ತು. ಬಳಿಕ ಈ ಅಂತರವನ್ನೂ ತಗ್ಗಿಸಿ ಜೋಡಣೆ ಪ್ರಕ್ರಿಯೆ ಪೂರ್ಣಗೊಂಡಿತು
****
ಮೂರನೇ ಉಡ್ಡಯನ ವೇದಿಕೆ ಸ್ಥಾಪನೆಗೆ ಅಸ್ತು
ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಮೂರನೇ ಉಡಾವಣಾ ವೇದಿಕೆ (ಟಿಎಲ್‌ಪಿ) ಸ್ಥಾಪನೆಗೆ ಸಂಪುಟ ಒಪ್ಪಿಗೆ ನೀಡಿದೆ. ‘2035ರೊಳಗೆ ಭಾರತೀಯ ಅಂತರಿಕ್ಷ ನಿಲ್ದಾಣ ಸ್ಥಾಪಿಸಲು ಹಾಗೂ ಚಂದಿರನ ಅಂಗಳಕ್ಕೆ 2040ರೊಳಗೆ ಭಾರತೀಯ ಗಗನಯಾನಿಯನ್ನು ಕಳುಹಿಸಲು ಇಸ್ರೊ ಯೋಜಿಸಿದೆ. ಸುಮಾರು ₹4000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವ ಮೂರನೇ ಉಡ್ಡಯನ ವೇದಿಕೆಯು ನಾಲ್ಕು ವರ್ಷಗಳಲ್ಲಿ ಸಿದ್ಧವಾಗಲಿದೆ’ ಎಂದು ಅಧಿಕಾರಿಗಳು ಇಲ್ಲಿ ತಿಳಿಸಿದರು. ಇಸ್ರೋ ತನ್ನ ಎರಡನೇ ಉಡ್ಡಯನ ಕೇಂದ್ರವನ್ನು ತಮಿಳುನಾಡಿನ ಕುಲಶೇಖರಪಟ್ಟಣಂನಲ್ಲಿ ನಿರ್ಮಿಸುತ್ತಿದ್ದು, 2026ರ ವೇಳೆಗೆ ಸಿದ್ಧವಾಗುವ ಸಾಧ್ಯತೆಯಿದೆ.
****
ಮಾಹಿತಿ: ಇಸ್ರೊದ ‘ಎಕ್ಸ್’ ಪೋಸ್ಟ್‌ಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.