ವಾಷಿಂಗ್ಟನ್ (ಪಿಟಿಐ): ನಾಸಾದ ‘ಇನ್‌ಸೈಟ್’ ಲ್ಯಾಂಡರ್ ಇದೇ ಮೊದಲ ಬಾರಿಗೆ ಮಂಗಳ ಗ್ರಹದಲ್ಲಿ ಉಂಟಾದ ಕಂಪನವನ್ನು ದಾಖಲು ಮಾಡಿದೆ.
ಕಂಪನದ ಜೊತೆಗೆ, ಜೋರಾಗಿ ಬೀಸಿದ ಗಾಳಿಯ ಶಬ್ದವನ್ನೂ ಕಳೆದ ಏಪ್ರಿಲ್ 6ರಂದು ಇನ್‌ಸೈಟ್ ದಾಖಲಿಸಿದೆ ನಾಸಾ ಹೇಳಿದೆ.
ಮಂಗಳ ಗ್ರಹದ ಒಳಗೆ ಸಂಭವಿಸಿದ ವಿದ್ಯಮಾನವನ್ನು ದಾಖಲಿಸಿರುವುದು ಇದೇ ಮೊದಲು. ಇದಕ್ಕೆ ಸಂಬಂಧಿಸಿದ ದತ್ತಾಂಶಗಳು ಕುರಿತು ಹೆಚ್ಚಿನ ಅಧ್ಯಯನ ನಡೆಯಬೇಕಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
‘ಈವರೆಗೆ ಗಾಳಿಯ ಹಿನ್ನೆಲೆ ಶಬ್ದವನ್ನು ಮಾತ್ರ ಇನ್‌ಸೈಟ್ ದಾಖಲಿಸುತ್ತಿತ್ತು. ಮಂಗಳ ಗ್ರಹದಲ್ಲಿನ ಭೂಕಂಪವಿಜ್ಞಾನದ ಕುರಿತೂ ಮಾಹಿತಿ ಕಲೆ ಹಾಕಿರುವುದು ವಿಶೇಷ ಸಾಧನೆ’ ಎಂದು ನಾಸಾ ವಿಜ್ಞಾನಿ ಬ್ರೂಸ್ ಬೆನೆಟ್ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.