ADVERTISEMENT

ಕಳಸದ ಎಂಜಿನಿಯರ್‌ಗೆ ಗುರುತರ ಜವಾಬ್ದಾರಿ

ಸೌರ ಅಧ್ಯಯನಕ್ಕಾಗಿ ಉಪಗ್ರಹ ಉಡಾವಣೆ

ರವಿ ಕೆಳಂಗಡಿ
Published 14 ಫೆಬ್ರುವರಿ 2020, 17:45 IST
Last Updated 14 ಫೆಬ್ರುವರಿ 2020, 17:45 IST
ಸಂದೀಪ್ ರಾಮನಾಥ್
ಸಂದೀಪ್ ರಾಮನಾಥ್   

ಕಳಸ: ಅಮೆರಿಕದ ಫ್ಲಾರಿಡಾದ ಕೆನಡಿ ಸ್ಪೇಸ್ ಸೆಂಟರ್‌ನಿಂದ ಸೋಮವಾರ (ಫೆ.9) ಯೂರೋಪಿಯನ್ ಸ್ಪೇಸ್ ಏಜೆನ್ಸಿಯು ನಾಸಾ ಸಹಾಯದೊಂದಿಗೆ ಸೂರ್ಯನ ಬಗ್ಗೆ ಅಧ್ಯಯನ ನಡೆಸಲು ಉಪಗ್ರಹವೊಂದನ್ನು ಆಗಸಕ್ಕೆ ಉಡಾಯಿಸಿದೆ. ಈ ಯೋಜನೆಯಲ್ಲಿ ಕಳಸದ ಎಂಜಿನಿಯರ್‌ ಸಂದೀಪ್ ರಾಮನಾಥ್ ಮಹತ್ವದ ಪಾತ್ರ ವಹಿಸಿದ್ದಾರೆ.

ಅವರು ಪಿಎಚ್‍ಐ (ಪೊಲಾರಿಮೆಟ್ರಿಕ್‌ ಅಂಡ್‌ ಹಿಲಿಯೊಸೆಸ್ಮಿಕ್‌ ಇಮೇಜರ್‌) ಯೋಜನೆ ಅಭಿವೃದ್ಧಿ ಪಡಿಸಿದ ಜರ್ಮನಿಯ ಮ್ಯಾಕ್‌ ಪ್ಲಾಂಕ್‌ ಇನ್‌ಸ್ಟಿಟ್ಯೂಟ್‌ನ ತಂಡದ ಪ್ರಮುಖ ಸದಸ್ಯರಾಗಿದ್ದಾರೆ.

‘ಈ ಉಪಗ್ರಹದಲ್ಲಿ ಹೈ ರೆಸಲ್ಯೂಶನ್ ಟೆಲಿಸ್ಕೋಪ್ ಇದ್ದು, ಸೂರ್ಯನ ಆಳದ ಸಂಗತಿಗಳನ್ನು ಪತ್ತೆ ಮಾಡುವ ಉದ್ದೇಶ ಇದೆ. ಸೂರ್ಯನಲ್ಲಿರುವ ಆಯಸ್ಕಾಂತೀಯ ಬಲದ ದಿಕ್ಕು ಮತ್ತು ಶಕ್ತಿಯ ಅಧ್ಯಯನ ಮಾಡುವ ಉದ್ದೇಶ ಇದೆ. ಉಪಗ್ರಹ ಈಗಾಗಲೇ ತನ್ನ ಗುರಿ ತಲುಪಿದೆ’ ಎಂದು ಸಂದೀಪ್ ಫ್ಲಾರಿಡಾದಿಂದ ‘ಪ್ರಜಾವಾಣಿ’ಗೆಮಾಹಿತಿ ನೀಡಿದ್ದಾರೆ.

ADVERTISEMENT

‘ಈ ಸೋಲಾರ್ ಆರ್ಬಿಟರ್‌ನ ಎಲ್ಲ ಸಲಕರಣೆಗಳನ್ನು 40 ಸೆಂಟಿ ಮೀಟರ್ ದಪ್ಪದ ಟೈಟಾನಿಯಮ್ ಲೋಹದ ಒಳಗೆ ಇರಿಸಲಾಗಿದೆ. ಈ ಲೋಹದ ಕವಚದ ಒಳಗೆ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ಮೀರದಂತೆ ತಡೆಯಲಾಗುತ್ತಿದೆ. ಇದರಿಂದ ಬೆಂಕಿಯುಂಡೆಯಂತಹ ಸೂರ್ಯನಿಂದ ಸಲಕರಣೆಗಳನ್ನು ರಕ್ಷಿಸಲು ಸಾಧ್ಯ’ ಎಂದೂ ಸಂದೀಪ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.