ADVERTISEMENT

ನಾಳೆ ಹೈಬ್ರಿಡ್ ಸೂರ್ಯಗ್ರಹಣ: ಭಾರತದಲ್ಲಿ ಗೋಚರಿಸುವುದೇ? ಇಲ್ಲಿದೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2023, 16:30 IST
Last Updated 19 ಏಪ್ರಿಲ್ 2023, 16:30 IST
   

ನವದೆಹಲಿ: ಈ ವರ್ಷದ ಮೊದಲ ಸೂರ್ಯ ಗ್ರಹಣ ಗುರುವಾರ(ಏಪ್ರಿಲ್ 20) ಸಂಭವಿಸಲಿದೆ. ಸೂರ್ಯ ಮತ್ತು ಭೂಮಿ ನಡುವೆ ಚಂದ್ರನ ಆಗಮನದ ಹಿನ್ನೆಲೆಯಲ್ಲಿ ಭೂಮಿ ಮೇಲೆ ಚಂದ್ರನ ನೆರಳು ಹಾದುಹೋಗುವುದರಿಂದ ಉಂಗುರ ಆಕಾರ ಏರ್ಪಡಲಿದೆ. ಹೀಗಾಗಿ, ಇದನ್ನು ಬೆಂಕಿಯ ಉಂಗುರ ಅಥವಾ ಹೈಬ್ರಿಡ್ ಸೂರ್ಯಗ್ರಹಣ ಎಂದೂ ಕರೆಯಲಾಗುತ್ತದೆ.

ಇದು ಶತಮಾನಗಳಿಗೊಮ್ಮೆ ನಭೋಮಂಡಲದಲ್ಲಿ ಸಂಭವಿಸುವ ಅಪರೂಪದ ವಿದ್ಯಮಾನ ಎಂದು ಹೇಳಲಾಗುತ್ತದೆ.

ಸ್ಪೇಸ್ ಡಾಟ್ ಕಾಮ್ ಪ್ರಕಾರ, 2013ರಲ್ಲಿ ಹೈಬ್ರಿಡ್ ಸೂರ್ಯಗ್ರಹಣ ಸಂಭವಿಸಿತ್ತು. ಮುಂದೆ 2031ರಲ್ಲಿ ಸಂಭವಿಸಲಿದೆ. ಅದಾದ ಬಳಿಕ, 2164ರವರೆಗೆ ಈ ವಿಶಿಷ್ಟ ವಿದ್ಯಮಾನಕ್ಕೆ ಕಾಯಬೇಕಾಗಿದೆ.

ADVERTISEMENT

ಅಪರೂಪದ ಹೈಬ್ರಿಡ್ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ದಕ್ಷಿಣ ಫೆಸಿಫಿಕ್‌ನಲ್ಲಿ ಗ್ರಹಣ ಗೋಚರಿಸಲಿದೆ. ಚಂದ್ರನ ನೆರಳು ಪಶ್ಚಿಮ ಆಸ್ಟ್ರೇಲಿಯಾ, ಪೂರ್ವ ತಿಮೋರ್, ಇಂಡೋನೇಷ್ಯಾ ಮೂಲಕ ಹಾದುಹೋಗಲಿದೆ.

ಭಾರತೀಯ ಕಾಲಮಾನ ಬೆಳಿಗ್ಗೆ 7:04ಕ್ಕೆ ಸೂರ್ಯ ಗ್ರಹಣ ಆರಂಭವಾಗಲಿದ್ದು, ಸಂಪೂರ್ಣ ಸೂರ್ಯಗ್ರಹಣ 08:07ಕ್ಕೆ ಸಂಭವಿಸುತ್ತದೆ. ರಾತ್ರಿ 9:46ಕ್ಕೆ ಉತ್ತುಂಗಕ್ಕೆ ತಲುಪುತ್ತದೆ. 11:26ರಿಂದ ಗ್ರಹಣ ಅಂತ್ಯಕಾಲ ಆರಂಭವಾಗುತ್ತದೆ. ಭಾಗಶಃ ಸೂರ್ಯಗ್ರಹಣ ಮಧ್ಯಾಹ್ನ 12:29ಕ್ಕೆ ಅಂತ್ಯವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.