ADVERTISEMENT

ಸಾವಿರಕ್ಕೆ ಒಂದು ಪೋಸ್ಟ್‌ನಲ್ಲಿ ದ್ವೇಷ

ಪಿಟಿಐ
Published 20 ನವೆಂಬರ್ 2020, 21:14 IST
Last Updated 20 ನವೆಂಬರ್ 2020, 21:14 IST
ಫೇಸ್‌ಬುಕ್‌
ಫೇಸ್‌ಬುಕ್‌   

ನವದೆಹಲಿ :ತನ್ನ ವೇದಿಕೆಯಲ್ಲಿ ದ್ವೇಷ ಬಿತ್ತುವ ಮಾತುಗಳು ಯಾವ ಪ್ರಮಾಣದಲ್ಲಿ ಪ್ರಕಟವಾಗುತ್ತಿವೆ ಎಂಬುದನ್ನು ಫೇಸ್‌ಬುಕ್‌ ಬಹಿರಂಗಪಡಿಸಿದೆ. ಈ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಪ್ರಕಟವಾದ ಪ್ರತಿ 10 ಸಾವಿರ ಪೋಸ್ಟ್‌ಗಳ ಪೈಕಿ 10–11ರಲ್ಲಿ ದ್ವೇಷ ಬಿತ್ತುವ ಅಂಶಗಳಿದ್ದವು ಎಂದು ಹೇಳಿದೆ.

‘ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಯ ಫಲವಾಗಿ ಬಳಕೆದಾರರಿಂದ ದೂರು ಬರುವ ಮುನ್ನವೇ ಸಾಕಷ್ಟು ದ್ವೇಷಭಾಷಣಗಳನ್ನು ಗುರುತಿಸಿ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಾಗಿದೆ’ ಎಂದು ಸಂಸ್ಥೆ ಹೇಳಿದೆ.

ದ್ವೇಷವನ್ನು ಪ್ರಸಾರ ಮಾಡುವ 2.21 ಕೋಟಿ ಪೋಸ್ಟ್‌ಗಳ ವಿರುದ್ಧಮೂರನೇ ತ್ರೈಮಾಸಿಕದಲ್ಲಿ ಸಂಸ್ಥೆಯು ಕ್ರಮ ಕೈಗೊಂಡಿದೆ. ಅದರಲ್ಲಿ ಶೇ 95ಕ್ಕೂ ಹೆಚ್ಚು ಪೋಸ್ಟ್‌ಗಳ ವಿರುದ್ಧ ಗ್ರಾಹಕರಿಂದ ದೂರುಗಳು ಬರುವುದಕ್ಕೂ ಮುನ್ನ ಕ್ರಮ ಕೈಗೊಳ್ಳಲಾಗಿದೆ.

ADVERTISEMENT

‘ಕೃತಕ ಬುದ್ಧಿಮತ್ತೆ ಬಳಕೆಯಲ್ಲಿ ಸುಧಾರಣೆಯಾಗಿದ್ದರಿಂದ ಇಂಥ ಪೋಸ್ಟ್‌ಗಳನ್ನು ಪತ್ತೆ ಮಾಡುವುದು ಸುಲಭವಾಗಿದೆ. ಈ ತಂತ್ರಜ್ಞಾನಗಳನ್ನು ಇನ್ನಷ್ಟು ಭಾಷೆಗಳಿಗೆ ವಿಸ್ತರಿಸಲಾಗುವುದು’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.