ADVERTISEMENT

96ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದು ಸ್ಫೂರ್ತಿಯಾದ ಕೇರಳದ ಮಹಿಳೆ!

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2018, 14:57 IST
Last Updated 11 ಆಗಸ್ಟ್ 2018, 14:57 IST
ಕೃಪೆ: ಟ್ವಿಟರ್
ಕೃಪೆ: ಟ್ವಿಟರ್   

ಬೆಂಗಳೂರು: ಕೇರಳದ ಸಾಕ್ಷರತಾ ಮಿಷನ್ ಅಕ್ಷರಲಕ್ಷಂ ಎಂಬ ಯೋಜನೆಯಡಿಯಲ್ಲಿ 4ನೇ ತರಗತಿ ತತ್ಸಮಾನ ಪರೀಕ್ಷೆ ಬರೆದ 96ರ ಹರೆಯದ ಮಹಿಳೆ ಸಾವಿರಾರು ಮಂದಿಗೆ ಸ್ಫೂರ್ತಿಯಾಗಿದ್ದಾರೆ.

ಆಲಪ್ಪುಳ ಜಿಲ್ಲೆಯ ಕಾರ್ತ್ಯಾಯಿನಿ ಅಮ್ಮ ಎಂಬವರು ಕಳೆದ ಭಾನುವಾರ ಮೊದಲ ಬಾರಿ ಪರೀಕ್ಷೆ ಬರೆದಿದ್ದರು. ಅವರು ಪರೀಕ್ಷೆ ಬರೆಯುತ್ತಿರುವ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಆಗಿದ್ದು, ನೆಟಿಜನ್‌ಗಳಿಂದ ಪ್ರಶಂಸೆಯ ಸುರಿಮಳೆಯಾಗಿದೆ.

ವಿನೋದ್ ರಡ್ಡಿ ಎಂಬ ಟ್ವೀಟಿಗರೊಬ್ಬರು 96ರ ಹರೆಯದ ಕೇರಳದ ಅಜ್ಜಿ ಮೊದಲ ಬಾರಿ ಪರೀಕ್ಷೆ ಬರೆದು ಓದುವ ಪರೀಕ್ಷೆಯಲ್ಲಿ ಪೂರ್ಣ ಅಂಕ ಗಳಿಸಿದ್ದಾರೆ ಎಂದು ಟ್ವೀಟಿಸಿ ಖ್ಯಾತ ಉದ್ಯಮಿ ಆನಂದ್ ಮಹೀಂದ್ರಅವರಿಗೆ ಟ್ಯಾಗ್ ಮಾಡಿದ್ದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಆನಂದ್ ಮಹೀಂದ್ರಈ ಸುದ್ದಿ ನಿಜವಾಗಿದ್ದರೆ ಈಕೆ ನನ್ನ ಸ್ಫೂರ್ತಿ. ಕಲಿಯುವ ಬಗ್ಗೆ ಆಕೆ ಉತ್ಸುಕತೆ ತೋರಿದಂತೆ ನಾನು ತೋರಿಸಿದರೆ ನನ್ನ ಮೆದುಳು ಕೂಡಾ ಚುರುಕಾಗಿರುತ್ತದೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.