ADVERTISEMENT

ನ್ಯೂಸ್ ಫೀಡ್‌ನಲ್ಲಿ ಜಾಹೀರಾತು ಕಿರಿಕಿರಿಯೇ ?

ರಶ್ಮಿ ಕಾಸರಗೋಡು
Published 15 ಮೇ 2019, 19:45 IST
Last Updated 15 ಮೇ 2019, 19:45 IST
   

ನ್ಯೂಸ್ ಫೀಡ್‌ನಲ್ಲಿ ಜಾಹೀರಾತು ಕಿರಿಕಿರಿಯೇ?

ಫೇಸ್‌ಬುಕ್‌ಗೆ ಲಾಗಿನ್ ಆದ ಕೂಡಲೇ ನಿಮ್ಮ ವಾಲ್ ಮೇಲೆ ನಿಮ್ಮ ಸ್ನೇಹಿತರ ಪೋಸ್ಟ್‌ಗಳು, ನೀವು ಲೈಕ್ ಮಾಡಿದ ಪುಟಗಳ ಪೋಸ್ಟ್, ವಿಡಿಯೊ ಮೊದಲಾದವುಗಳು ಕಾಣಿಸುತ್ತವೆ.ನಿಮ್ಮ ನ್ಯೂಸ್ ಫೀಡ್ ಸ್ಕ್ರಾಲ್ ಮಾಡುತ್ತಾ ಹೋದಂತೆ ಕೆಲವು ಜಾಹೀರಾತು ಪದೇ ಪದೇ ಕಾಣಿಸುತ್ತವೆ. ಶೂ, ಕಾಸ್ಮೆಟಿಕ್, ಡ್ರೆಸ್, ಕ್ಯಾಮೆರಾ, ಒಳ ಉಡುಪು ಹೀಗೆ ಹಲವಾರು ಉತ್ಪನ್ನಗಳ ಜಾಹೀರಾತುಗಳು ನಿಮ್ಮ ಕಣ್ಣಿಗೆ ಬಿದ್ದಿರುತ್ತವೆ. ಜಾಹೀರಾತುಗಳ ಉದ್ದೇಶವೇ ಆಕರ್ಷಣೆ. ಈ ರೀತಿ ನ್ಯೂಸ್ ಫೀಡ್‌ನಲ್ಲಿ ಕಾಣುವ ಜಾಹೀರಾತುಗಳ ಲಿಂಕ್ ಕ್ಲಿಕ್ ಮಾಡಿ ಆ ಉತ್ಪನ್ನವನ್ನು ಖರೀದಿಸುವವರ ಸಂಖ್ಯೆ ಜಾಸ್ತಿ ಇರುತ್ತದೆ. ಇನ್ನು ಇದು ಯಾವುದೂ ನಮ್ಮ ನ್ಯೂಸ್ ಫೀಡ್‌ನಲ್ಲಿ ಕಾಣಿಸಿಕೊಳ್ಳುವುದು ಬೇಡ ಎಂದರೆ ಅದನ್ನೂ ತಡೆಯಬಹುದು.

ಜಾಹೀರಾತು ಕಾಣಿಸದಂತೆ ಮಾಡಿ

ADVERTISEMENT

ನಿಮ್ಮ ನ್ಯೂಸ್ ಫೀಡ್‍ನಲ್ಲಿ ಉದಾಹರಣೆಗೆ ವಿವಿಧ ಉಡುಗೆಗಳ ಜಾಹೀರಾತು ಕಾಣಿಸಿಕೊಳ್ಳುತ್ತದೆ ಎಂದಿಟ್ಟುಕೊಳ್ಳಿ. ಈ ಜಾಹೀರಾತುಗಳನ್ನು ನೀವು ನೋಡಲು ಇಚ್ಛಿಸುತ್ತಿಲ್ಲ ಎಂದಾದರೆ ಹೀಗೆ ಮಾಡಿ;

ಜಾಹೀರಾತು ಪೋಸ್ಟ್‌ ಬಲಭಾಗದಲ್ಲಿ ಡ್ರಾಪ್ ಡೌನ್ ಮೆನು (ಮೂರು ಚುಕ್ಕಿ) ಕ್ಲಿಕ್ ಮಾಡಿ. ಅಲ್ಲಿ Hide Ad, Report Ad, Save Video ಅಥವಾ Save Link, Why I am seeing this ad? ಎಂಬ ಆಪ್ಶನ್ ಕಾಣಿಸುತ್ತದೆ.

ಜಾಹೀರಾತುಗಳು ನ್ಯೂಸ್ ಫೀಡ್‌ನಲ್ಲಿ ಕಾಣಿಸದಂತೆ ಮಾಡಲು Hide Ad ಕ್ಲಿಕ್ ಮಾಡಿ. ಹೀಗೆ ಕ್ಲಿಕ್ ಮಾಡಿದಾಗ ನೀವು ಯಾಕೆ Hide ಮಾಡುತ್ತಿದ್ದೀರಿ ಎಂಬುದಕ್ಕೆ ಕಾರಣ ಕೇಳುತ್ತದೆ. Irrelevant, Repetitive, Already Purchased ಆ ಮೂರು ಆಯ್ಕೆಗಳಲ್ಲಿ ಯಾವುದಾದರೊಂದನ್ನು ಕ್ಲಿಕ್ಕಿಸಿ ಜಾಹೀರಾತು Hide ಮಾಡಿ.

ಜಾಹೀರಾತುಗಳು ಅಶ್ಲೀಲ ಅಥವಾ ಪ್ರಚೋದನಾಕಾರಿ ಎಂದೆನಿಸಿದರೆ ಅದನ್ನು Report Ad ಎಂದು ಕ್ಲಿಕ್ಕಿಸಿ ರಿಪೋರ್ಟ್ ಮಾಡಬಹುದು. ಯಾವ ಕಾರಣಕ್ಕಾಗಿ ರಿಪೋರ್ಟ್ ಮಾಡುತ್ತಿದ್ದೀರಿ ಎಂಬ ಕಾರಣವನ್ನೂಇಲ್ಲಿ ನಮೂದಿಸಿ.

ನಿಮ್ಮ ವಾಲ್‌ನಲ್ಲಿ ಈ ಜಾಹೀರಾತು ಹೇಗೆ ಬಂತು?
ಈ ಪ್ರಶ್ನೆಗೆ ಉತ್ತರ ತಿಳಿಯಲು Why I am seeing this ad? ಎಂಬುದನ್ನು ಕ್ಲಿಕ್ ಮಾಡಿ. ಅಲ್ಲಿ ನಿಮ್ಮ ಪ್ರಶ್ನೆಗೆ ಉತ್ತರವಿರುತ್ತದೆ. ಪ್ರಾಯೋಜಿತ ಜಾಹೀರಾತುಗಳ ಪೋಸ್ಟ್‌ಗಳ ನೋಟಿಫಿಕೇಶನ್‌ ಬರದಂತೆ Turn off Notifications ಕ್ಲಿಕ್ ಮಾಡಿ.
ಗಮನಿಸಿ: ನ್ಯೂಸ್ ಫೀಡ್‌ನಲ್ಲಿರುವ ಈ ಜಾಹೀರಾತುಗಳ ಲಿಂಕ್ ಕ್ಲಿಕ್ ಮಾಡಿ ನೀವು ಜಾಲಾಡಿದ್ದರೆ, ಇಂತದ್ದೇ ಉತ್ಪನ್ನಗಳ ಜಾಹೀರಾತುಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.