ADVERTISEMENT

’ಚೀನಾ ವಸ್ತುಗಳನ್ನು ಬಹಿಷ್ಕರಿಸಿ’ ಅಭಿಯಾನ; ಭಯೋತ್ಪಾದನೆ ಪೋಷಣೆಗೆ ಆಕ್ರೋಶ

ಟ್ವಿಟರ್‌ ಟ್ರೆಂಡಿಂಗ್‌

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 7:26 IST
Last Updated 14 ಮಾರ್ಚ್ 2019, 7:26 IST
   

ಬೆಂಗಳೂರು:ಜೈಷ್‌–ಎ-ಮೊಹಮ್ಮದ್‌ ಸಂಘಟನೆ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಕುರಿತು ನಾಲ್ಕನೇ ಬಾರಿ ಆಕ್ಷೇಪ ವ್ಯಕ್ತ ಪಡಿಸಿರುವ ಚೀನಾ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಟ್ವಿಟರ್‌ನಲ್ಲಿ ಅಭಿಯಾನ ಶುರುವಾಗಿದೆ.

2009ರಿಂದ ಮೂರು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದ ಚೀನಾ ಈ ಬಾರಿಯೂ ಇದೇ ನಿಲುವು ವ್ಯಕ್ತಪಡಿಸಿದೆ.

ಪುಲ್ವಾಮಾ ದಾಳಿ ಬಳಿಕಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸುವ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಕಾಯಂ ರಾಷ್ಟ್ರಗಳು ಸೇರಿದಂತೆ ಒಟ್ಟು 25 ಸದಸ್ಯ ರಾಷ್ಟ್ರಗಳ ಜತೆ ಭಾರತ ಮಾತುಕತೆ ನಡೆಸಿತ್ತು.

ADVERTISEMENT

ಆದರೆ, ಚೀನಾ ಮತ್ತೆ ಇದ್ದಕ್ಕೆ ವಿರೋಧ ವ್ಯಕ್ತಪಡಿಸಿರುವುದಕ್ಕೆ ಭಾರತೀಯರು ಟ್ವಿಟರ್‌ನಲ್ಲಿ#BoycottChina, #BoycottChineseProducts ಹ್ಯಾಷ್‌ಟ್ಯಾಗ್‌ಗಳನ್ನು ಬಳಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚೀನಾದ ಎಲ್ಲ ರೀತಿಯ ಉತ್ಪನ್ನಗಳನ್ನು ಬಹಿಷ್ಕರಿಸುಂತೆ ಕರೆ ನೀಡುತ್ತಿದ್ದಾರೆ.

’ಭಯೋತ್ಪಾದನೆಯನ್ನು ಪೋಷಿಸುತ್ತಿರುವ ಚೀನಾ ಮೂಲದ ಯಾವುದೇ ವಸ್ತುಗಳ ಖರೀದಿಯನ್ನು ನಿಲ್ಲಿಸೋಣ, ಪೆನ್‌ನಿಂದ ಹಿಡಿದು ಸ್ಮಾರ್ಟ್‌ಫೋನ್‌ ವರೆಗಿನ ಯಾವುದೇ ಚೀನಾ ಉತ್ಪನ್ನಗಳನ್ನು ಕೊಳ್ಳುವುದು ಬೇಡ. ಭಾರತೀಯರು ಎಚ್ಚೆತ್ತುಕೊಳ್ಳಬೇಕು’ ಎಂದು ಪ್ರಕಟಿಸಿಕೊಂಡಿದ್ದಾರೆ.

ಇನ್ನೂ ಕೆಲವು ಚೀನಾದ ಉತ್ಪನ್ನಗಳು, ಆ್ಯಪ್‌ಗಳ ಪಟ್ಟಿಯನ್ನು ಹಂಚಿಕೊಂಡು ಇದರ ಬಳಕೆ ನಿಲ್ಲಿಸಿ ಎಂದಿದ್ದಾರೆ. ’ಭಯೋತ್ಪಾದನೆ ಬೆಂಬಲಿಸುತ್ತಿರುವ ಚೀನಾದ ಯಾವುದೇ ವಸ್ತುಗಳು ನಮಗೆ ಬೇಡ’ ಎಂದು ಸಂಕಲ್ಪ ತೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.