ADVERTISEMENT

'ವಿಧಿ ರೇಪ್‌ನಂತೆ; ನಿಮ್ಮಿಂದ ತಡೆಯಲಾಗದಿದ್ದರೆ ಆಸ್ವಾದಿಸಿ': ಕೇರಳ ಸಂಸದನ ಪತ್ನಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2019, 14:07 IST
Last Updated 22 ಅಕ್ಟೋಬರ್ 2019, 14:07 IST
ಅನ್ನಾ ಅವರ ಫೇಸ್‌ಬುಕ್ ಪೋಸ್ಟ್
ಅನ್ನಾ ಅವರ ಫೇಸ್‌ಬುಕ್ ಪೋಸ್ಟ್   

ಕೊಚ್ಚಿ: ಕೇರಳ ಸಂಸದಹೈಬಿ ಈಡನ್ ಅವರ ಪತ್ನಿ ಅನ್ನಾ ಲಿಂಡಾ ಈಡನ್ಫೇಸ್‌ಬುಕ್‌ನಲ್ಲಿ ಬರೆದ ಪೋಸ್ಟ್ ವಿವಾದಕ್ಕೀಡಾಗಿದೆ.

ಕೇರಳದಲ್ಲಿ ಭಾರೀ ಮಳೆಯಾಗುತ್ತಿದ್ದು ಮನೆಯೊಳಗೆ ನೀರು ನುಗ್ಗಿರುವ ಬಗ್ಗೆ ಸೋಮವಾರಅನ್ನಾ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ಮಳೆ ನೀರು ನುಗ್ಗಿದಾಗ ಈ ನೀರಲ್ಲಿ ಆಟವಾಡುತ್ತಿರುವ ಮತ್ತು ತಿಂಡಿ ತಿನ್ನುತ್ತಿರುವ ವಿಡಿಯೊವೊಂದನ್ನುಪೋಸ್ಟಿಸಿದ್ದ ಅನ್ನಾ, 'ವಿಧಿ ಅತ್ಯಾಚಾರದಂತೆ. ನಿಮ್ಮಿಂದ ತಡೆಯಲಾಗದಿದ್ದರೆ ಆಸ್ವಾದಿಸಿ' ಎಂಬ ಶೀರ್ಷಿಕೆ ನೀಡಿದ್ದರು.

ಎರ್ನಾಕುಳಂನ ಕಾಂಗ್ರೆಸ್ ಪಕ್ಷದ ನಾಯಕ ಹೈಬಿ ಈಡನ್‌ರಪತ್ನಿ ಈ ರೀತಿ ಮಹಿಳಾ ವಿರೋಧಿ ಪೋಸ್ಟ್ ಹಾಕಿರುವುದರ ಬಗ್ಗೆ ಆಕ್ಷೇಪಗಳು ಕೇಳಿ ಬಂದಿದ್ದು, ಪೋಸ್ಟ್ ವೈರಲ್ ಆಗಿತ್ತು. ಪೋಸ್ಟ್ ಬಗ್ಗೆ ಟೀಕಾ ಪ್ರಹಾರವಾಗುತ್ತಿದ್ದಂತೆ ಅನ್ನಾ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

ADVERTISEMENT

ಇದಾದ ನಂತರ ಕ್ಷಮೆಯಾಚಿಸಿ ಮಂಗಳವಾರ ಬೆಳಗ್ಗೆಬೇರೊಂದು ಬರಹ ಪ್ರಕಟಿಸಿದ್ದಾರೆ. ಅನ್ನಾ ಅವರ ಬರಹದ ಅನುವಾದ ಇಲ್ಲಿದೆ.


ಸಾಮಾಜಿಕ ಮಾಧ್ಯಮಗಳಲ್ಲಿ ನಾನು ಬಳಸಿದ ಪದಗಳ ಬಗ್ಗೆ ನನ್ನ ಯೋಚನೆಗಿಂತ ಅತೀತವಾಗಿ ಚರ್ಚೆಯಾಗಿದೆ. ಜೀವನದಲ್ಲಿ ಆ ಪರಿಸ್ಥಿತಿ ಅನುಭವಿಸಿದವರ ಮನಸ್ಸಿಗೆ ಇದು ನೋವುಂಟು ಮಾಡಿದೆ ಎಂದು ನನಗರ್ಥವಾಗುತ್ತದೆ.
ಕಳೆದ ಒಂದು ವಾರದಿಂದ ನನ್ನ ಅಪ್ಪನ ಆರೋಗ್ಯ ಕಂಗೆಟ್ಟಿದ್ದು ಅಮೃತಾ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ಮತ್ತು ಮನೆ ನಡುವಿನ ಓಡಾಟದ ಹೊತ್ತಲ್ಲೇ ಈವರೆಗೆ ಕಾಣದಷ್ಟು ನೀರು ಮನೆಯೊಳಗೆ ನುಗ್ಗಿ ನಾಶ ನಷ್ಟವುಂಟಾಗಿದ್ದು. ಅಮ್ಮ ಮತ್ತು ಮಕ್ಕಳನ್ನು ಕರೆದುಕೊಂಡು ತುಂಬಾ ಕಷ್ಟದಿಂದಲೇ ಮನೆಯ ಕೆಲವು ವಸ್ತುಗಳನ್ನು ಹಿಡಿದು ನಾವು ಮನೆಯಿಂದ ಹೊರಗೆ ಕಾಲಿಟ್ಟಿದ್ದು. ಹೈಬಿ ಚುನಾವಣಾ ಕಾರ್ಯದಲ್ಲಿ ಬ್ಯುಸಿಯಾಗಿದ್ದರು.

ಅಪ್ಪನ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ವೆಂಟಿಲೇಟರ್ ಸಹಾಯವೂ ಅವರಿಗೆ ನೀಡಲು ಆಗುತ್ತಿಲ್ಲ. ಕೆಲವೊಮ್ಮೆ ನಮ್ಮ ಜೀವನದಲ್ಲಿ ಈ ರೀತಿಯ ಪರಿಸ್ಥಿತಿ ಎದುರಾಗುತ್ತದೆ. ಎಲ್ಲ ದಿಶೆಗಳಿಂದಲೂ ಅಸಹಾಯಕತೆ ಅನುಭವಿಸುವ ಕ್ಷಣಗಳು. ಜೀವನದಲ್ಲಿನ ಇಂತಾ ಕ್ಷಣಗಳನ್ನು ನಗುತ್ತಾ ಎದುರಿಸಲು ನಾನು ಕಲಿತಿದ್ದೇನೆ. ಹೊಡೆತಗಳನ್ನು ಸಂಭ್ರಮಗಳನ್ನಾಗಿ ಮಾಡಿ ಅದರಿಂದ ಬಚಾವಾಗಲು ಇರುವ ಒಂದು ಪ್ರಯತ್ನ.

ಶಾಲೆಯಲ್ಲಿ ಕಲಿಯುತ್ತಿದ್ದ ಕಾಲ ಅದು. ಅಮಿತಾಬ್ ಬಚ್ಚನ್ ಎಬಿಸಿಎಲ್ ಎಂಬ ಕಾರ್ಯಕ್ರಮ ನಡೆಸಿ ಎಲ್ಲ ಕಳೆದುಕೊಂಡಿದ್ದ ಹೊತ್ತಲ್ಲಿ ಅವರು ಹೇಳಿದ ಹೇಳಿಕೆಯನ್ನೇ ನಾನಿಲ್ಲಿಹೇಳಿದ್ದು. ಆ ಕಾಲದಿಂದಲೇ ಈ ವಾಕ್ಯ ನನ್ನ ಮೇಲೆ ಪ್ರಭಾವ ಬೀರಿತ್ತು. ಹಾಗಾಗಿ ಈ ಪರಿಸ್ಥಿತಿಯಲ್ಲಿ ನಾನು ಆ ವಾಕ್ಯವನ್ನುಬಳಸಿದೆ.
ಹಲವಾರು ಮಹಿಳೆಯರು ಅನುಭವಿಸಬೇಕಾಗಿ ಬಂದ ನೋವನ್ನು ಉದಾಹರಣೆಯಾಗಿ ನೀಡಿ ಅವರನ್ನು ಅಮಾನಿಸುವ ಉದ್ದೇಶ ನನಗಿರಲಿಲ್ಲ.
ಓರ್ವ ಜನಪ್ರತಿನಿಧಿಯ ಪತ್ನಿಯಾಗಿರುವ ನಾನು ಜನರ ಕಷ್ಟ, ನೋವುಗಳನ್ನು ಅರ್ಥ ಮಾಡಿಕೊಂಡು ಅವರೊಂದಿಗೆ ನಿಲ್ಲಲು ಸದಾ ಪ್ರಯತ್ನಿಸಿದ್ದೇನೆ. ನನ್ನ ಪೋಸ್ಟ್‌ನ್ನು ತಪ್ಪಾಗಿ ಅರ್ಥೈಸಿಕೊಂಡದ್ದಕ್ಕೆ ಬೇಸರವಿದೆ. ನಾನು ಅದಕ್ಕಾಗಿ ಕ್ಷಮೆ ಯಾಚಿಸುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.