ಎಲಾನ್ ಮಸ್ಕ್
ಸ್ಯಾನ್‌ಫ್ರಾನ್ಸಿಸ್ಕೊ: ಸಾಮಾಜಿಕ ಮಾಧ್ಯಮ ‘ಎಕ್ಸ್’ ಜಗತ್ತಿನ ಹಲವೆಡೆ ಬಳಕೆದಾರರಿಗೆ ಸೋಮವಾರ ಲಭ್ಯವಾಗಲಿಲ್ಲ. ‘ಭಾರಿ ಪ್ರಮಾಣದ ಸೈಬರ್ ದಾಳಿಯ’ ಪರಿಣಾಮವಾಗಿ ಈ ರೀತಿ ಆಗಿದೆ ಎಂದು ‘ಎಕ್ಸ್’ನ ಮಾಲೀಕ ಎಲಾನ್ ಮಸ್ಕ್ ಹೇಳಿದ್ದಾರೆ.
‘ನಮ್ಮ ಮೇಲೆ ಪ್ರತಿದಿನ ದಾಳಿ ನಡೆಯುತ್ತದೆ. ಆದರೆ ಈ ಬಾರಿ ಭಾರಿ ಸಂಪನ್ಮೂಲದೊಂದಿಗೆ ದಾಳಿ ನಡೆಸಲಾಗಿದೆ’ ಎಂದು ಮಸ್ಕ್ ಅವರು ಹೇಳಿದ್ದಾರೆ. ‘ಭಾರಿ ದೊಡ್ಡದಾದ, ಸಮನ್ವಯದಿಂದ ಕೆಲಸ ಮಾಡುವ ಗುಂಪು ಈ ರೀತಿ ಮಾಡಿರಬೇಕು ಅಥವಾ ದೇಶವೊಂದು ಹೀಗೆ ಮಾಡಿರಬೇಕು. ಪತ್ತೆ ಮಾಡಲಾಗುತ್ತಿದೆ’ ಎಂದು ಅವರು ವಿವರಿಸಿದ್ದಾರೆ.
ವೆಬ್‌ಸೈಟ್‌ಗಳು, ಸಾಮಾಜಿಕ ಜಾಲತಾಣಗಳು ಬಳಕೆದಾರರಿಗೆ ಲಭ್ಯವಾಗದೆ ಇರುವ ನಿದರ್ಶನಗಳನ್ನು ದಾಖಲಿಸುವ ಡೌನ್‌ಡಿಟೆಕ್ಟರ್.ಕಾಂನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ 40 ಸಾವಿರಕ್ಕೂ ಹೆಚ್ಚು ಬಳಕೆದಾರರು ತಮಗೆ ‘ಎಕ್ಸ್’ ಬಳಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ.
ಭಾರತ, ಬ್ರಿಟನ್ ಸೇರಿದಂತೆ ವಿಶ್ವದ ಹಲವೆಡೆ ‘ಎಕ್ಸ್’ ಬಳಕೆಗೆ ಅಡ್ಡಿ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.