
ಪ್ರಜಾವಾಣಿ
ನಮ್ಮ ದಿನಚರಿಯಲ್ಲಿ ಮೊಬೈಲ್ ಅವಿಭಾಜ್ಯ ಭಾಗ ಎನ್ನುವಂತಾಗಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮೊಬೈಲ್ ಪೋನ್ ಬಳಕೆ ವ್ಯಾಪಕವಾಗಿಯೇ ಇದೆ. ಅತಿಯಾದ ಮೊಬೈಲ್ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ದಿನದಲ್ಲಿ ಕನಿಷ್ಟವೆಂದರೂ 4 ರಿಂದ 5 ಗಂಟೆಗಳ ಕಾಲ ಮೊಬೈಲ್ ಬಳಸುತ್ತೇವೆ. ಕೆಲವೊಮ್ಮೆ ಈ ಅವಧಿ ಹೆಚ್ಚಾಗುತ್ತದೆ.
ಆದರೆ, ಸಾಮಾಜಿಕ ಮಾಧ್ಯಮ ‘ಎಕ್ಸ್‘ (ಟ್ವಿಟರ್) ಮಾಲೀಕ ಇಲಾನ್ ಮಸ್ಕ್ ಒಂದು ನಿಮಿಷ ಮೊಬೈಲ್ ನೋಡುತ್ತಾರೆ ಎಂದರೆ ನಂಬಲು ತುಸು ಕಷ್ಟವೇ.
ವಿದ್ಯುತ್ ಚಾಲಿತ ಕಾರು ತಯಾರಕ ಕಂಪನಿ ಟೆಸ್ಲಾದ ಮಾಲೀಕರೂ ಆಗಿರುವ ಇಲಾನ್ ಮಸ್ಕ್ ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಮಸ್ಕ್ ಅವರಿಗೆ ನಿರೂಪಕ ಎಕ್ಸ್‌ನಲ್ಲಿ ಅಷ್ಟೊಂದು ಪೋಸ್ಟ್, ಟ್ವೀಟ್‌ಗಳು ಯಾವಾಗ ಮಾಡುತ್ತೀರಿ, ಎಷ್ಟು ಸಮಯ ಫೋನ್ ಬಳಸುತ್ತೀರಿ ಎಂದು ಕೇಳಿದ್ದಾರೆ.
ಅದಕ್ಕೆ ಮಸ್ಕ್ ‘ಬಹುಶಃ ದಿನದಲ್ಲಿ ಒಂದು ಗಂಟೆ’ ಎಂದು ಹೇಳಿದ್ದಾರೆ. ನಂತರ ಫೋನ್ ತೆಗೆದು ನೋಡಿ ಎಂದು ಹೇಳಿದಾಗ. ಫೋನ್ ಪರದೆ ನೋಡಿ ಸಮಯ ಒಂದು ನಿಮಿಷ ತೊರಿಸುತ್ತಿದೆ ಎಂದಿದ್ದಾರೆ. ಇದನ್ನು ಕೇಳಿ ನಿರೂಪಕ ಸಹಿತ ನೆರೆದವರು ನಕ್ಕಿದ್ದಾರೆ.
ಇಲಾನ್ ಮಸ್ಕ್ ಫೋನ್ ಪರದೆ ನೋಡುವ ಬಗ್ಗೆ ಲಿಂಕ್ಡ್ ಇನ್‌ನಲ್ಲಿ ಪುಣೆಯ ಡಾ. ಅಭಿಜೀತ್ ದೇಸಾಯಿ ಎನ್ನುವವರು ಪೋಸ್ಟ್ ಹಂಚಿಕೊಂಡಿದ್ದಾರೆ.
‘ಇಲಾನ್ ಮಸ್ಕ್ ಅವರು ವಾರದಲ್ಲಿ 4 ನಿಮಿಷಗಳ ಕಾಲ ಮಾತ್ರ ಫೋನ್ ನೋಡುತ್ತಾರೆ. ಗಂಟೆಗಟ್ಟಲೆ ಫೋನ್ ನೋಡುವರಿಗೆ ಇದು ಎಚ್ಚರಿಕೆಯ ಸಮಯ. ನಿಮ್ಮ ಕೆಲಸದ ಬಗ್ಗೆ, ಹೊಸತನದ ಬಗ್ಗೆ ಗಮನ ನೀಡಿ, ಫೋನ್ ನೋಡುವ ಸಮಯವನ್ನು ಉಪಯುಕ್ತ ಕೆಲಸದಲ್ಲಿ ವಿನಯೋಗಿಸಬಹುದಲ್ಲವೇ?’ ಎಂದು ಬರೆದುಕೊಂಡಿದ್ದಾರೆ.
ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡ ಪೋಸ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.