ಲಾಸ್ ಏಂಜಲೀಸ್: ಮೈಕ್ರೋಬ್ಲಾಗಿಂಗ್ ಜಾಲತಾಣ ಟ್ವಿಟರ್‌ನಲ್ಲಿ ನಿಮ್ಮ ಫಾಲೋವರ್ಸ್ ಸಂಖ್ಯೆ ಕುಸಿಯಬಹುದು ಎಂದು ಟ್ವಿಟರ್ ಮಾಲೀಕ ಇಲಾನ್ ಮಸ್ಕ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಸ್ಕ್, ಅನೇಕ ಸ್ಪಾಮ್/ಸ್ಕ್ಯಾಮ್ ಖಾತೆಗಳನ್ನು ತೆಗೆದು ಹಾಕಲಾಗುತ್ತಿದೆ. ಹಾಗಾಗಿ ಫಾಲೋವರ್ಸ್ ಸಂಖ್ಯೆ ಕುಸಿಯಬಹುದು ಎಂದು ಬಳಕೆದಾರರನ್ನು ಎಚ್ಚರಿಸಿದ್ದಾರೆ.
ಈ ಮೂಲಕ ಸ್ಪಾಮ್ ಖಾತೆಗಳಿಗೆ ಕಡಿವಾಣ ಹಾಕುವಸೂಚನೆ ನೀಡಿದ್ದಾರೆ.
ಟ್ವಿಟರ್ ಅಕ್ಷರ ಮಿತಿಯನ್ನು 280ರಿಂದ 1,000ಕ್ಕೆ ಹೆಚ್ಚಿಸಲು ಮಸ್ಕ್ ಯೋಜನೆ ಇರಿಸಿಕೊಂಡಿದ್ದಾರೆ. ಈ ಸಂಬಂಧ ಕೆಲವು ದಿನಗಳ ಹಿಂದೆಯಷ್ಟೇ ಟ್ವೀಟ್ ಮಾಡಿದ್ದರು.
ಅಲ್ಲದೆ ಟ್ವಿಟರ್ ಖಾತೆಗಳಿಗೆ ಹೊಸತಾಗಿ ಗೋಲ್ಡನ್ ಮತ್ತು ಗ್ರೇ ಟಿಕ್ ಫೀಚರ್ಜಾರಿಗೊಳಿಸುವುದಾಗಿ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.