ADVERTISEMENT

ಬದುಕು ಉಳಿಸಿದವರಿಗೆ ಕೃತಜ್ಞತೆಗಳು: #InternationalNursesDay ಟಾಪ್ ಟ್ರೆಂಡಿಂಗ್

​ಪ್ರಜಾವಾಣಿ ವಾರ್ತೆ
Published 12 ಮೇ 2020, 4:56 IST
Last Updated 12 ಮೇ 2020, 4:56 IST
ಕೃಪೆ: twitter.com/Ra_THORe
ಕೃಪೆ: twitter.com/Ra_THORe   

ಫ್ಲಾರೆನ್ಸ್ ನೈಟಿಂಗೇಲ್‌ ಜನ್ಮ ದ್ವಿಶತಮಾನೋತ್ಸವವಾದ ಇಂದು (ಮೇ 12) ಟ್ವಿಟರ್ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ನೆಟಿಜನ್ನರು #InternationalNursesDay ಹ್ಯಾಷ್‌ಟ್ಯಾಗ್ ಬಳಸಿ ದಾರಿಯರಿಗೆ ಕೃತಜ್ಞತೆ ಅರ್ಪಿಸುತ್ತಿದ್ದಾರೆ.

‘ದಾದಿಯರ ಬದುಕಿನ ಸವಾಲಿನ ಕಾಲಘಟ್ಟವಿದು’ ಎಂದು ದಾದಿಯರ ಅಂತರರಾಷ್ಟ್ರೀಯ ಮಂಡಳಿ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಹೇಳಿದೆ.

‘ನನ್ನ ಬದುಕು ಉಳಿಸಿದ ದಾದಿಯರಿಗೆ ಪ್ರಣಾಮಗಳು’ ಎಂದು ಅಮೆರಿದ ಜನಪ್ರಿಯ ನಟಿ ಎಮಿಲಿಯಾ ಕ್ಲಾರ್ಕ್ ಟ್ವೀಟ್ ಮಾಡಿದ್ದಾರೆ.

ADVERTISEMENT

‘ನಮ್ಮ ಹೀರೊಗಳು’ ಎಂದು ಬಾಲಿವುಡ್ ನಟಿ ಯಾಮಿ ಗೌತಮ್ ಗ್ಲೋಬ್‌ ಮೇಲೆ ನರ್ಸ್‌ ಟೋಪಿ ಮತ್ತು ಸ್ಕೆತೊಸ್ಕೋಪ್ ಇರುವ ಚಿತ್ರ ಟ್ವೀಟ್ ಮಾಡಿದ್ದಾರೆ.

‘ಅಪಾಯಕಾರಿ ಪಿಡುಗಿನ ಸಂದರ್ಭದಲ್ಲಿಧೈರ್ಯ ಮತ್ತು ನಿಸ್ವಾರ್ಥದಿಂದ ಜಗತ್ತಿನ ಆರೋಗ್ಯವನ್ನು ಶುಶ್ರೂಷೆ ಮಾಡುತ್ತಿರುವ ದಾದಿಯರಿಗೆ ನಮ್ಮ ನಮನಗಳು’ ಎಂದು ಕಾಂಗ್ರೆಸ್‌ ಟ್ವೀಟ್ ಮಾಡಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹ ದಾದಿಯರಿಗೆ ಶುಭಾಶಯ ಕೋರಿದ್ದಾರೆ.

ಪಾಂಡಿಚೆರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ದಾದಿಯೊಬ್ಬರೊಂದಿಗೆ ಮಾತನಾಡುವ ವಿಡಿಯೊ ಹಂಚಿಕೊಂಡು, ‘ಬಿಳಿಯುಡುಗೆಯಲ್ಲಿರುವ ಯೋಧರಿಗೆ ನಮನ’ ಎಂದು ಹೇಳಿದ್ದಾರೆ.

‘ಶುಶ್ರೂಷೆ ಎನ್ನುವುದು ನನ್ನ ಆತ್ಮದ ಭಾಗ’ ಎಂದಿರುವ ನರ್ಸ್ ಪೊಲ್ಲಿ ಮೊಲಿನಾ ಅವರ ಇನ್‌ಸ್ಟಾಗ್ರಾಂ ಪೋಸ್ಟ್‌ ಭಾವುಕ ಬರಹದಿಂದ ಗಮನ ಸೆಳೆಯುತ್ತದೆ.

‘ಶುಶ್ರೂಷಕರ ಕಾರ್ಯ ಯಾವ ಬಲಿದಾನಕ್ಕೂ ಕಡಿಮೆಯಲ್ಲ’ ಎಂದು ಜೆಡಿಎಸ್ ನಾಯಕ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.