
ಫೇಸ್‌ಬುಕ್
ನವದೆಹಲಿ: ಭಾರತದಲ್ಲಿ ಸಾಮಾಜಿಕ ತಾಣಗಳಲ್ಲಿ ಬಹು ಜನಪ್ರಿಯ ಆಗಿರುವ ಅಮೆರಿಕದ ಮೆಟಾ ಕಂಪನಿ ಒಡೆತನದ ಫೇಸ್‌ಬುಕ್ 2025 ರಲ್ಲಿ ಭಾರತದಲ್ಲಿ ₹645.45 ಕೋಟಿ ನಿವ್ವಳ ಲಾಭ ದಾಖಲಿಸಿದೆ.
2024 ರಲ್ಲಿ ಫೇಸ್‌ಬುಕ್ ₹504 ಕೋಟಿ ನಿವ್ವಳ ಲಾಭ ಗಳಿಸಿತ್ತು.
2024 ಕ್ಕೆ ಹೋಲಿಸಿದರೆ ಫೇಸ್‌ಬುಕ್ ಸಂಸ್ಥೆ 2025 ರ ಒಟ್ಟು ಆದಾಯದಲ್ಲಿ ಶೇ 25 ರಷ್ಟು ಹೆಚ್ಚಳ ಕಂಡಿದೆ. ₹3,793 ಕೋಟಿ ಒಟ್ಟು ಆದಾಯ ದಾಖಲಿಸಿ ಅದರಲ್ಲಿ ₹2881 ಕೋಟಿ ಖರ್ಚು ತೋರಿಸಿದೆ.
ಇನ್ನೊಂದು ಗಮನರಾರ್ಹ ಅಂಶವೆಂದರೆ ಭಾರತದಲ್ಲಿ ಫೇಸ್‌ಬುಕ್ ಉದ್ಯೋಗಿಗಳಿಗೆ ಆ ಸಂಸ್ಥೆ ಗಣನೀಯ ಪ್ರಮಾಣದಲ್ಲಿ ಖರ್ಚು ಮಾಡುತ್ತಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ 2025 ರಲ್ಲಿ ಅದು ಶೇ 36 ರಷ್ಟು ಹೆಚ್ಚಳವಾಗಿದೆ. ಫೇಸ್‌ಬುಕ್ ಒಟ್ಟು ₹649 ಕೋಟಿ ಹಣವನ್ನು ಉದ್ಯೋಗಿಗಳಿಗೆ ಖರ್ಚು ಮಾಡಿದೆ.
ಉದ್ಯೋಗಿಗಳ ಖರ್ಚಿನ ನಂತರ ಅತಿ ಹೆಚ್ಚು ಆದಾಯವನ್ನು ಫೇಸ್‌ಬುಕ್ ಕಂಪನಿ ತೆರಿಗೆಗಾಗಿ ಖರ್ಚು ಮಾಡಿದೆ. ಫೇಸ್‌ಬುಕ್‌ನ 2025 ರ ತೆರಿಗೆ ಹಣ ₹305 ₹ಕೋಟಿ.
ಮೆಟಾ ಒಡೆತನದಲ್ಲಿ ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ ಸೇರಿದಂತೆ ಪ್ರಮುಖ ಆನ್‌ಲೈನ್ ಸೇವಾ ಸಂಸ್ಥೆಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.