ADVERTISEMENT

ಜಾಕೆಟ್ ಹೆಸರು ಬದಲಿಸಿದರೆ ಮೋದಿ ನೆಹರು ಆಗುತ್ತಾರಾ? 

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2018, 14:13 IST
Last Updated 31 ಅಕ್ಟೋಬರ್ 2018, 14:13 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಧರಿಸುವ ಜಾಕೆಟ್ ಮೋದಿ ಜಾಕೆಟ್ ಎಂದು ಸ್ವತಃ ಪ್ರಧಾನಿಯೇ ಹೇಳುತ್ತಿದ್ದಾರೆ.ಆದರೆ ವರ್ಷಗಳ ಹಿಂದೆ ಫ್ಯಾಬ್ ಇಂಡಿಯಾ ಮೊದಲಾದ ಕಂಪನಿಗಳು ನೆಹರು ಜಾಕೆಟ್ ಎಂಬ ಹೆಸರಿಲ್ಲಿ ಈ ಜಾಕೆಟ್‍ನ್ನು ಮಾರುಕಟ್ಟೆಗೆ ಪರಿಚಯಿಸಿದ್ದವು.
ನೆಹರು ಜಾಕೆಟ್ ಎಂದೇ ಚಿರಪರಿಚಿತವಾಗಿದ್ದ ಈ ಉಡುಗೆಯ ಹೆಸರನ್ನೀಗ ಮೋದಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ.

ಕಳೆದ ಬಾರಿ ಭಾರತ ಸಂದರ್ಶಿಸಿದಾಗ ಮೋದಿ ಧರಿಸುವ ಜಾಕೆಟ್ ಇಷ್ಟ ಎಂದು ದಕ್ಷಿಣ ಕೊರಿಯಾದ ಅಧ್ಯಕ್ಷಮೂನ್ ಜೇ ಇನ್ಹೇಳಿದ್ದರು.ಹಾಗಾಗಿ ಮೋದಿ ಅಂಥದೊಂದು ಜಾಕೆಟ್‍ನ್ನು ಮೂನ್ ಅವರಿಗೆ ಕಳಿಸಿಕೊಟ್ಟಿದ್ದರು. ಮೋದಿ ಕಳಿಸಿಕೊಟ್ಟ ಜಾಕೆಟ್ ಧರಿಸಿ ಮೂನ್ ಅವರು ಟ್ಟಟರ್‌ನಲ್ಲಿ ಫೋಟೋ ಶೇರ್ ಮಾಡಿರುವುದರಿಂದ ಈ ಜಾಕೆಟ್ ವಿಷಯ ಜಗತ್ತಿಗೆ ಗೊತ್ತಾಗಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಸುಂದರವಾದಕೆಲವು ವಸ್ತ್ರಗಳನ್ನು ನನಗೆ ಕಳುಹಿಸಿಕೊಟ್ಟಿದ್ದರು.ಭಾರತದ ಪರಂಪರಾಗತ ವಸ್ತ್ರವೊಂದರ ಆಧುನಿಕ ರೂಪವಾಗಿದೆ ಇದು.ಮೋದಿ ವೆಸ್ಟ್ ಎಂದು ಇದು ಕರೆಯಲ್ಪಡುತ್ತದೆ ಎಂದು ಮೂನ್ ಟ್ವೀಟ್ ಮಾಡಿದ್ದಾರೆ. ಮೋದಿ ಕಳುಹಿಸಿಕೊಟ್ಟಿದ್ದ ಜಾಕೆಟ್ ಧರಿಸಿ ಫೋಟೊವನ್ನು ಕೂಡಾ ಈ ಟ್ವೀಟ್ ಜತೆ ಶೇರ್ ಮಾಡಿದ್ದಾರೆ.

ADVERTISEMENT

ಟ್ವೀಟ್ ಚರ್ಚೆ ಏನು?
ಜಾಕೆಟ್‍ನ ಮೇಲೆ ದೊಡ್ಡ ಅಕ್ಷರಗಳಲ್ಲಿ ಮೋದಿ ವೆಸ್ಟ್ ಎಂದು ಬರೆದಿರುವುದರ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ

ನಮ್ಮ ಪ್ರಧಾನಿ ಈ ಜಾಕೆಟ್‍ಗಳನ್ನುಕಳುಹಿಸಿಕೊಟ್ಟಿದ್ದು ಖುಷಿಯ ವಿಚಾರ.ಆದರೆ ಜಾಕೆಟ್ ಹೆಸರು ಬದಲಿಸದೆ ಕಳುಹಿಸಬಹುದಿತ್ತು.ನನ್ನ ಜೀವನದಲ್ಲಿ ಈ ಜಾಕೆಟ್ ಹೆಸರು ನೆಹರು ಜಾಕೆಟ್ ಎಂದೇ ನಾನು ಕೇಳಿದ್ದು.ಆದರೆ ಅದರ ಹೆಸರನ್ನು ಈಗ ಬದಲಿಸಲಾಗಿದೆ. 2014ಕ್ಕಿಂತ ಮುಂಚೆ ಇದೆಲ್ಲವೂ ಭಾರತದಲ್ಲಿ ಅಸ್ತಿತ್ವದಲ್ಲಿತ್ತು ಎಂದು ಜಮ್ಮು ಕಾಶ್ಮೀರದ ವಿಪಕ್ಷ ನೇತಾರ ಒಮರ್ ಅಬ್ದುಲ್ಲಾ ಟ್ವೀಟಿಸಿದ್ದಾರೆ.

ಅಧ್ಯಕ್ಷರೇ, ನೀವು ಹೇಳುತ್ತಿರುವುದು ತಪ್ಪು, ಇದು ಮೋದಿ ವೆಸ್ಟ್ ಅಲ್ಲ ನೆಹರು ಜಾಕೆಟ್. ಮೋದಿಗೆ ನೆಹರು ಆಗಲು ಸಾಧ್ಯವಿಲ್ಲ. ಮೋದಿಯದ್ದು ಎಂದು ಹೇಳುವುದಾದರೆ ಅದು ಖಾಕಿ ಚಡ್ಡಿ ಮಾತ್ರ.
ಫ್ಯಾಬ್ ಇಂಡಿಯಾ ಇದುವರೆಗೆ ನೆಹರು ಜಾಕೆಟ್ ಎಂಬ ಹೆಸರಿನಲ್ಲೇ ಈ ಜಾಕೆಟ್ಮಾರಾಟ ಮಾಡಿತ್ತು ಎಂದು ಅಶೋಕ್ ಸ್ವೆಯನ್ ಹೇಳಿದ್ದಾರೆ.

ನೆಹರೂ ಜಾಕೆಟ್ ಇದೀಗ ಮೋದಿ ಜಾಕೆಟ್!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.