ADVERTISEMENT

ಭಾರತದ ಸ್ಫೂರ್ತಿ: ಕೋವಿಡ್‌ ವೈದ್ಯೆಯ ವಿಡಿಯೊ ಶೇರ್ ಮಾಡಿ ಪ್ರಧಾನಿ ಮೋದಿ ಮೆಚ್ಚುಗೆ

ಮನ ಕಲಕುವ ದೃಶ್ಯ

ಏಜೆನ್ಸೀಸ್
Published 1 ಮೇ 2020, 4:54 IST
Last Updated 1 ಮೇ 2020, 4:54 IST
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)   

ನವದೆಹಲಿ: ಕೊರೊನಾ ಸೋಂಕಿತರಿಗೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡುತ್ತಿರುವ ವೈದ್ಯೆಯೊಬ್ಬರಿಗೆ ಮನೆಗೆ ಮರಳಿದಾಗ ದೊರೆತ ಅಭೂತಪೂರ್ವ ಸ್ವಾಗತದ ಮನ ಕಲಕುವ ವಿಡಿಯೊವೊಂದನ್ನು ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

‘ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯೆ ನಿರಂತರ 20 ದಿನಗಳ ಕಾಲ ಕೆಲಸ ಮಾಡಿ ಮನೆಗೆ ಮರಳಿದಾಗ ಆಕೆಯ ಕುಟುಂಬದವರು ಮತ್ತು ನೆರೆಹೊರೆಯವರು ಸ್ವಾಗತಿಸಿದರು. #HeartTouching’ ಎಂದು ಚಂಡೀಗಡ ಬಿಜೆಪಿ ಕಾರ್ಯದರ್ಶಿ ದೀಪಕ್ ಮಲ್ಹೋತ್ರಾ ಟ್ವೀಟ್ ಮಾಡಿದ್ದರು.

ಅದನ್ನು ಶೇರ್ ಮಾಡಿರುವ ಮೋದಿ, ‘ಇಂತಹ ಕ್ಷಣಗಳು ಹೃದಯದಲ್ಲಿ ಸಂತಸ ಉಕ್ಕಿಸುತ್ತವೆ. ಇದು ಭಾರತದ ಸ್ಫೂರ್ತಿ. ಕೋವಿಡ್–19 ವಿರುದ್ಧ ನಾವು ಧೈರ್ಯದಿಂದ ಹೋರಾಡುತ್ತೇವೆ. ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವವರ ಬಗ್ಗೆ ನಾವು ಶಾಶ್ವತವಾಗಿ ಹೆಮ್ಮೆಪಡುತ್ತೇವೆ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.