ADVERTISEMENT

ಮೆಟಾ ತೊರೆದ ರಾಜೀವ್‌ ಅಗರ್‌ವಾಲ್‌ ಸ್ಯಾಮ್‌ಸ್ಯಂಗ್ ಸೇರ್ಪಡೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ನವೆಂಬರ್ 2022, 8:52 IST
Last Updated 16 ನವೆಂಬರ್ 2022, 8:52 IST
   

ನವದೆಹಲಿ: ಫೇಸ್‌ಬುಕ್‌ ಒಡೆತನದ ಮೆಟಾದ ಭಾರತದ ಸಾರ್ವಜನಿಕ ನೀತಿ ನಿರೂಪಣೆ ವಿಭಾಗದ ಮಾಜಿ ಮುಖ್ಯಸ್ಥ ರಾಜೀವ್ ಅಗರ್‌ವಾಲ್ ಅವರು ಸ್ಯಾಮ್‌ಸ್ಯಂಗ್‌ಗೆ ಸೇರಲಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಮಂಗಳವಾರವಷ್ಟೇ ಅವರು ಮೆಟಾವನ್ನು ತೊರೆದಿದ್ದರು. ಇದೀಗ ಸ್ಯಾಮ್‌ಸ್ಯಂಗ್ಲ್ಲಿ ಅದೇ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಡಿಸೆಂಬರ್‌ನಲ್ಲಿ ಅವರು ಹೊಸ ಹುದ್ದೆ ವಹಿಸಿಕೊಳ್ಳಲಿದ್ದಾರೆ ಎಂದು ಗೊತ್ತಾಗಿದ್ದು, ಈ ಬಗ್ಗೆ ಸ್ಯಾಮ್‌ಸ್ಯಂಗ್‌ನಿಂದ ಅಧಿಕೃತ ಪ್ರಕಟಣೆ ಇನ್ನಷ್ಟೇ ಬರಬೇಕಿದೆ.

ADVERTISEMENT

ಸರ್ಕಾರಿ ನೀತಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ಮಾಡುವುದು ಅವರ ನೂತನ ಹೊಣೆಗಾರಿಕೆಯಾಗಿರಲಿದೆ ಎಂದು ತಿಳಿದು ಬಂದಿದೆ.

ಮೆಟಾಗೂ ಮುನ್ನ ಅಗರ್‌ವಾಲ್‌, ಉಬರ್‌ನ ದಕ್ಷಿಣ ಏಷ್ಯಾ ನೀತಿ ನಿರೂಪಣಾ ಮುಖ್ಯಸ್ಥರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.