ADVERTISEMENT

ಕಿರು ವಿಡಿಯೊ ಖ್ಯಾತಿಯ ಲೀನಾ ನಾಗವಂಶಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2022, 13:20 IST
Last Updated 28 ಡಿಸೆಂಬರ್ 2022, 13:20 IST
ಲೀನಾ ನಾಗವಂಶಿ (ಕೃಪೆ: ಇನ್‌ಸ್ಟಾ)
ಲೀನಾ ನಾಗವಂಶಿ (ಕೃಪೆ: ಇನ್‌ಸ್ಟಾ)   

ರಾಯಪುರ: ಛತ್ತೀಸ್‌ಗಢದ ರಾಯಗಢ ಜಿಲ್ಲೆಯಲ್ಲಿ ಸಾಮಾಜಿಕ ಮಾಧ್ಯಮಗಳ ಖ್ಯಾತಿಯ ಲೀನಾ ನಾಗವಂಶಿಆತ್ಮಹತ್ಯೆ ಮಾಡಿಕೊಂಡಿದ್ದಾರೆ.

22 ವರ್ಷದ ಲೀನಾ ನಾಗವಂಶಿ ತಮ್ಮ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದು ಆತ್ಮಹತ್ಯೆ ಎಂದು ‍ಪೊಲೀಸರು ಹೇಳಿದ್ದಾರೆ.

ಲೀನಾ ನಾಗವಂಶಿ ಬಿ.ಕಾಂಪದವಿ ಓದುತ್ತಿದ್ದರು. ಇನ್‌ಸ್ಟಾಗ್ರಾಂನಲ್ಲಿ ಸಕ್ರಿಯರಾಗಿದ್ದ ಅವರುಕಿರು ವಿಡಿಯೊಗಳು ಮತ್ತು ರೀಲ್ಸ್‌ಗಳ ಮೂಲಕ ಜನಪ್ರಿಯರಾಗಿದ್ದರು. ಇನ್‌ಸ್ಟಾಗ್ರಾಂನಲ್ಲಿ 10,000 ಕ್ಕೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದರು.

ADVERTISEMENT

ಲೀನಾ ನಾಗವಂಶಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು ಅವರ ಸಾವಿನ ಬಗ್ಗೆ ತನಿಖೆ ಮಾಡಲಾಗುವುದು ಎಂದು ಪೊಲೀಸ್‌ ಅಧಿಕಾರಿಇಂಗೇಶ್ವರ್ ಯಾದವ್ ಹೇಳಿದ್ದಾರೆ.

ಡಿಸೆಂಬರ್ 25 ರಂದು ಲೀನಾ ಇನ್ಸ್ಟಾಗ್ರಾಮ್ನಲ್ಲಿ ಕ್ರಿಸ್ಮಸ್ ರೀಲ್ ಅಪ್ಲೋಡ್ ಮಾಡಿದ್ದರು. ಇದು ಅವರ ಕೊನೆಯ ವಿಡಿಯೊ ಎಂದು ಅವರ ಮನೆಯವರು ಹೇಳಿದ್ದಾರೆ. ಲೀನಾ ಸಾವಿಗೆ ಅವರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.