ADVERTISEMENT

ಯೆಸ್ ಬ್ಯಾಂಕ್ ಬಿಕ್ಕಟ್ಟು: ‘ಅಬ್ಬಾ, ಸ್ವಲ್ಪದರಲ್ಲಿ ಬಚಾವಾದೆ’ ಟ್ವೀಟ್‌ ಲೋಕವಿಹಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಮಾರ್ಚ್ 2020, 8:27 IST
Last Updated 6 ಮಾರ್ಚ್ 2020, 8:27 IST
ಯೆಸ್ ಬ್ಯಾಂಕ್
ಯೆಸ್ ಬ್ಯಾಂಕ್   

‘ಅನಾಹುತ ಆಗುವ ಮೊದಲು ನನ್ನ ಯೆಸ್‌ ಬ್ಯಾಂಕ್ ಖಾತೆಯಿಂದ ಹಣ ಹಿಂಪಡೆದೆ’ ಎಂದು ನೂರಾರು ಮಂದಿ ಯೆಸ್‌ ಬ್ಯಾಂಕ್‌ನಿಂದ ಬಂದಿರುವ ಎಸ್‌ಎಂಎಸ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಟ್ವಿಟರ್‌ನಲ್ಲಿ ಬೆಳಿಗ್ಗೆಯಿಂದಲೂ#yesbankcrisis ಮತ್ತು#NoBank ಹ್ಯಾಷ್‌ಟ್ಯಾಗ್‌ಗಳು ಟಾಪ್‌ ಟ್ರೆಂಡಿಂಗ್‌ ಪಟ್ಟಿಯಲ್ಲಿವೆ.

‘ಯೆಸ್ ಬ್ಯಾಂಕ್ ಬಿಕ್ಕಟ್ಟಿನ ನಂತರ ಸರ್ಕಾರಿ ಬ್ಯಾಂಕ್‌ಗಳ ಖಾಸಗೀಕರಣವನ್ನು ನಾನು ಐದುಪಟ್ಟು ಹೆಚ್ಚು ಬೆಂಬಲಿಸುತ್ತಿದ್ದೇನೆ. ಎಸ್‌ಬಿಐ ಹೊರತುಪಡಿಸಿ ಉಳಿದೆಲ್ಲಾ ಸರ್ಕಾರಿ ಬ್ಯಾಂಕ್‌ಗಳನ್ನು ಖಾಸಗಿಯವರಿಗೆ ಮಾರಬೇಕು. ನಮ್ಮ ಠೇವಣಿಗಳನ್ನು ಅವರು ಮತ್ತೆಂದೂ ಮರುಪಾವತಿ ಮಾಡದ ತಮ್ಮ ಬೇನಾಮಿಗಳಿಗೆ ಸಾಲವಾಗಿ ಕೊಡಬೇಕು. ಬ್ಯಾಂಕ್ ಕುಸಿದ ನಂತರ ಎಸ್‌ಬಿಐ ಆ ಎಲ್ಲಾ ಸಾಲಗಳನ್ನು ಮಾಫಿ ಮಾಡುವ ಮಹಾನುಭಾವನಾಗಬೇಕು’ ಎಂದು ಔನಿದ್ಯೋ ಚಕ್ರವರ್ತಿ ಹೇಳಿದ್ದಾರೆ.

ADVERTISEMENT

‘ಭಾರತದಲ್ಲಿ ಬ್ಯಾಂಕಿಂಗ್ ಮತ್ತು ಲಿಕ್ವಿಡಿಟಿ ಬಿಕ್ಕಟ್ಟು ಹೆಚ್ಚಾಗಿದೆ. ಬ್ಯಾಂಕ್‌ಗಳು ಬಾಗಿಲು ಹಾಕುತ್ತಿವೆ. ನಿರುದ್ಯೋಗದ ಪ್ರಮಾಣ ಸಾರ್ವಕಾಲಿಕ ಮಟ್ಟದಲ್ಲಿದೆ. ಹೊಸ ಕೆಲಸಗಳು ಸಿಗುತ್ತಿಲ್ಲ’ ಎಂದು ಸುಧೀರ್ ಸೂರ್ಯವಂಶಿ ಟ್ವೀಟ್ ಮಾಡಿದ್ದಾರೆ.

‘ಕೆಟ್ಟ ಸಾಲಗಳನ್ನು ಮುಚ್ಚಿಟ್ಟು, ಲಾಭದ ಪ್ರಮಾಣವನ್ನು ಕೃತಕವಾಗಿ ಹಿಗ್ಗಿಸಿದ ಯೆಸ್‌ ಬ್ಯಾಂಕ್ ಆಡಳಿತ ಮಂಡಳಿಯ ನಡೆಯನ್ನು ಏಕೆ ಯಾವುದೇ ಮಾಧ್ಯಮಗಳು ಟೀಕಿಸುತ್ತಿಲ್ಲ’ ಎಂದು ನ್ಯೂಟನ್ ಬ್ಯಾಂಕ್ ಕುಮಾರ್ ಎಂಬ ಖಾತೆಯಲ್ಲಿ ಪ್ರಶ್ನಿಸಲಾಗಿದೆ.

‘ಯೆಸ್‌ ಬ್ಯಾಂಕ್ ಬಿಕ್ಕಟ್ಟು ಎಷ್ಟೊ ದೊಡ್ಡದು ಎಂದು ಅರ್ಥವಾಗಲು ಅದನ್ನು ಪಿಎಂಸಿ ಜೊತೆಗೆ ಹೋಲಿಸಿ ನೋಡಬೇಕು. ಪಿಎಂಸಿಯಲ್ಲಿ 137 ಶಾಖೆ, 800 ಉದ್ಯೋಗಿಗಳಿದ್ದರು. ಆದರೆ ಯೆಸ್‌ ಬ್ಯಾಂಕ್‌ನಲ್ಲಿ1122 ಶಾಖೆಗಳು, 18,238 ಉದ್ಯೋಗಿಗಳಿದ್ದಾರೆ’ ಎಂದು ಸರಳ್ ಪಟೇಲ್ ವಿಶ್ಲೇಷಿಸಿದ್ದಾರೆ.

‘ಯೆಸ್‌ ಬ್ಯಾಂಕ್‌ನಲ್ಲಿದ್ದ ನನ್ನ ಹಣವನ್ನುಸರಿಯಾದ ಸಮಯಕ್ಕೆ ವಾಪಸ್ ತೆಗೆದುಕೊಂಡೆ’ ಎಂದು ಡೇನಿಸ್ ಜಾಕೋಬ್ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.