ADVERTISEMENT

ಕೊರೊನಾ ಸಂಬಂಧಿಸಿದ ಅಧಿಕೃತ ಮಾಹಿತಿಗಳಿಗೆ ಟ್ವಿಟರ್‌ನಿಂದ ಪ್ರತ್ಯೇಕ ಪುಟಗಳು 

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 9:09 IST
Last Updated 3 ಏಪ್ರಿಲ್ 2020, 9:09 IST
ಇಂಡಿಯನ್‌ ಪೊಲೀಸ್‌ ಹ್ಯಾಂಡಲ್ಸ್‌ ಟ್ವಿಟರ್‌ ಪುಟ
ಇಂಡಿಯನ್‌ ಪೊಲೀಸ್‌ ಹ್ಯಾಂಡಲ್ಸ್‌ ಟ್ವಿಟರ್‌ ಪುಟ   
""
""
""

ಬೆಂಗಳೂರು: ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿಗಳ ಹರಿದಾಟ ಜೋರಾಗಿರುವುದರಿಂದ ಅಧಿಕೃತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ನಿಟ್ಟಿನಲ್ಲಿ ಟ್ವಿಟರ್‌ ಪ್ರತ್ಯೇಕ ಪುಟಗಳನ್ನು ತೆರೆದಿದೆ. ಆರೋಗ್ಯ ಇಲಾಖೆ, ಸರ್ಕಾರದ ಸಂಸ್ಥೆಗಳಿಂದ ಪ್ರಕಟಗೊಳ್ಳುವ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗುತ್ತಿದೆ.

ನಿರ್ದಿಷ್ಟವಾಗಿ ಭಾರತಕ್ಕಾಗಿಯೇ ಟ್ವಿಟರ್‌ ಪ್ರತ್ಯೇಕ ಪುಟ ತೆರೆದಿದೆ. ಭಾರತದ ಸರ್ಕಾರಿ ಸಂಸ್ಥೆಗಳ ಅಧಿಕೃತ ಟ್ವೀಟ್‌ಗಳು (Coronavirus Tweets from Indian authorities) ಹಾಗೂ ದೇಶದ ಪೊಲೀಸ್‌ ಇಲಾಖೆಗಳಿಂದ ಟ್ವೀಟ್‌ (Indian Police Handles); ಈ ಪುಟಗಳಿಂದ ಕೊರೊನಾ ವೈರಸ್‌ ತಡೆಗೆ ಸಂಬಂಧಿಸಿದಂತೆ ದೇಶದಲ್ಲಿನ ಬೆಳವಣಿಗಳ ಕುರಿತು ಮಾಹಿತಿ ಪಡೆಯಬಹುದಾಗಿದೆ ಎಂದು ಟ್ವಿಟರ್‌ನ ಸಾರ್ವಜನಿಕ ನೀತಿ ನಿರ್ದೇಶಕ ಮಹೀಮಾ ಕೌಲ್ ಹೇಳಿದ್ದಾರೆ.

'ಸೋಂಕು ನಿಯಂತ್ರಣ ಮತ್ತು ಸಾರ್ವಜನಿಕರೊಂದಿಗೆ ಹೆಚ್ಚು ಸಂಪರ್ಕ ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಆರೋಗ್ಯ ಇಲಾಖೆಗೆ ಸಂಬಂಧಿತ ಅಧಿಕಾರಿಗಳು ಟ್ವಿಟರ್‌ ಮಾಧ್ಯಮ ಬಳಸುತ್ತಿದ್ದಾರೆ. ಅವರ ಖಾತೆಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವುದು, ಖಚಿತಪಡಿಸಿಕೊಳ್ಳಲು ಮತ್ತು ಕಾರ್ಯತಂತ್ರದ ಸಲಹೆಯನ್ನು ನೀಡಲು ಅವರೊಂದಿಗೆ ಮುಕ್ತ ಸಂವಹನದಲ್ಲಿ ತೊಡಗಿದ್ದೇವೆ' ಎಂದಿದ್ದಾರೆ.

ADVERTISEMENT

ಲಾಕ್‌ಡೌನ್‌ಗೆ ಸಂಬಂಧಿಸಿದ ಕಳವಳಗಳು, ಪ್ರಶ್ನೆಗಳು, ಕೋವಿಡ್‌–19 ಕುರಿತಾದ ಹೆಚ್ಚಿನ ಮಾಹಿತಿ ಹಾಗೂ ಸಹಾಯಗಳಿಗಾಗಿಯೇ ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ಪ್ರತಿಕ್ರಿಯೆ ಖಾತೆಗಳನ್ನು ತೆರೆಯಲು ಅನುವು ಮಾಡಿಕೊಡಲಾಗಿದೆ. ಕರ್ನಾಟಕದ ಟ್ವೀಟಿಗರು DIPR COVID19 (https://twitter.com/DIPR_COVID19) ಪುಟದಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ. ಉಳಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯಿಂದ ಮಾಹಿತಿ ಪಡೆಯಲು ' ಕೋವಿಡ್‌–19 ಸರ್ಚ್‌ ಪ್ರಾಂಪ್ಟ್‌' ವ್ಯವಸ್ಥೆಯ ಮೂಲಕ ಅಧಿಕೃತ ವೆಬ್‌ಸೈಟ್‌ಗಳಿಗೆ ಲಿಂಕ್‌ ನೀಡುತ್ತದೆ.

ಸೋಂಕು ವ್ಯಾಪಿಸುವುದನ್ನು ತಡೆಯಲು ಆಗಾಗ್ಗೆ ಕೈತೊಳೆಯುವುದರ ಮಹತ್ವದ ಬಗ್ಗೆ ತಿಳಿಸಲು, ಜಾಗೃತಿ ಮೂಡಿಸುವ ಸಲುವಾಗಿ ಟ್ವಿಟರ್‌ ವಿಶೇಷ ಎಮೋಜಿಗಳನ್ನು ಹೊರ ತಂದಿದೆ. #handwashing, #SafeHands, #HandWashChallenge ಇತರೆ ಹ್ಯಾಷ್‌ಟ್ಯಾಗ್‌ಗಳ ಮೂಲಕ ಟ್ವೀಟ್‌ಗಳಲ್ಲಿ‌‌‌ ಎಮೋಜಿ ಬಳಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.