ADVERTISEMENT

ಉತ್ತರ ಪ್ರದೇಶ: ಶಾಲಾ ಮಕ್ಕಳಿಂದ ‘ಹಿಂದೂ ರಾಷ್ಟ್ರ’ದ ಪ್ರತಿಜ್ಞೆ, ವಿಡಿಯೊ ವೈರಲ್‌

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2021, 14:04 IST
Last Updated 31 ಡಿಸೆಂಬರ್ 2021, 14:04 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಖನೌ: ಇತ್ತೀಚೆಗೆ ಹರಿದ್ವಾರದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕೆಲ ಸನ್ಯಾಸಿಗಳು ನೀಡಿದ್ದ ‘ದ್ವೇಷ ಭಾಷಣ’ವೊಂದು ಭಾರಿ ಸದ್ದು ಮಾಡಿತ್ತು. ಈ ಭಾಷಣದಲ್ಲಿ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಶಸ್ತ್ರವನ್ನು ಕೈಗೆತ್ತಿಕೊಳ್ಳುವಂತೆ ಯುವಕರಿಗೆ ಕರೆ ನೀಡಲಾಗಿತ್ತು. ಇದೀಗ ಅಂಥದ್ದೇ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಉತ್ತರ ಪ್ರದೇಶದ ಸೋನೆಭದ್ರಾ ಜಿಲ್ಲೆಯಲ್ಲಿ ಶಾಲಾ ಸಮವಸ್ತ್ರ ಧರಿಸಿರುವ ಮಕ್ಕಳ ಗುಂಪೊಂದು ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ರಕ್ತದ ಕೊನೆ ಹನಿ ಇರುವವರೆಗೂ ಹೋರಾಡುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ದೇಶವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲುರಕ್ತದ ಕೊನೆಯ ಹನಿಯವರೆಗೂ ನಾವು ಹೋರಾಡುತ್ತೇವೆ. ನಮ್ಮ ಗುರಿ ತಲುಪಲು ಪ್ರಾಣ ತ್ಯಾಗ ಮಾಡಲು ನಾವು ಸಿದ್ಧ. ಅವಶ್ಯಕತೆ ಬಿದ್ದಲ್ಲಿ ಸಾಯಿಸಲೂ ಹಿಂಜರಿಯುವುದಿಲ್ಲ ಎಂದು ಮಕ್ಕಳು ಪ್ರತಿಜ್ಞೆ ಮಾಡಿರುವುದನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿದೆ.

ADVERTISEMENT

‘ವಿಡಿಯೊವನ್ನು ಪಾರ್ಕ್‌ವೊಂದರಲ್ಲಿ ಚಿತ್ರೀಕರಿಸಲಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.