ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಮುಂಬೈ ರಸ್ತೆಗಳಲ್ಲಿ ಸ್ಕೂಟರ್ನಲ್ಲಿ ಸವಾರಿ ಮಾಡಿದ್ದಾರೆ.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸದ್ಯ ಕುಟುಂಬದವರ ಜೊತೆ ಕಾಲ ಕಳೆಯುತ್ತಿರುವ ವಿರಾಟ್ ಕೊಹ್ಲಿ ಅವರು ಇತ್ತೀಚೆಗೆಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಶೂಟಿಂಗ್ ಮುಗಿದ ಬಳಿಕ ಅನುಷ್ಕಾ ಜೊತೆ ಸ್ಕೂಟರ್ ಸವಾರಿ ಮಾಡಿದ್ದಾರೆ. ಈ ವಿಡಿಯೊಗೆ ‘ವಿರೂಷ್ಕಾ‘ (ವಿರಾಟ್, ಅನುಷ್ಕಾ) ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್ ಮಾಡುತ್ತಿದ್ದಾರೆ.
ಇವರು ಮುಂಬೈನಮಡ್ ಐಲ್ಯಾಂಡ್ನ ರಸ್ತೆಗಳಲ್ಲಿ ಕಾಣಿಸಿಕೊಂಡರು. ಇಬ್ಬರೂಹೆಲ್ಮೆಟ್ ಧರಿಸಿ ಕಪ್ಪು ಸ್ಕೂಟರ್ ಮೇಲೆ ಸವಾರಿ ಮಾಡಿದರು. ಈ ವೇಳೆ ಅವರು ಮಾಧ್ಯಮಗಳಿಂದ ಮರೆಮಾಚಲು ಯತ್ನಿಸಿದರಾದರೂ ಯಾವುದೇ ಪ್ರಯೋಜನಗಳಾಗಲಿಲ್ಲ. ಅಂತಿಮವಾಗಿ ಕ್ಯಾಮೆರಾ ಕಣ್ಣಿಗೆ ಬಿದ್ದರು.
ಕೋಟಿ ಕೋಟಿ ರೂಪಾಯಿಗಳ ಒಡೆಯ ವಿರಾಟ್ ಸ್ಕೂಟರ್ ಓಡಿಸುತ್ತಿದ್ದರೇ ಅನುಷ್ಕಾ ಅವರ ಹಿಂದೆ ಕುಳಿತಿದ್ದರು. ಈ ವಿಡಿಯೊ ನೋಡಿದ ಅಭಿಮಾನಿಗಳು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.