ADVERTISEMENT

ವಾಟ್ಸ್​ ಆ್ಯಪ್‌ ಹೊಸ ಫೀಚರ್‌

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 8:34 IST
Last Updated 10 ಜೂನ್ 2020, 8:34 IST
ವಾಟ್ಸ್ ಆ್ಯಪ್‌
ವಾಟ್ಸ್ ಆ್ಯಪ್‌   

ಅಂದಾಜು 200 ಕೋಟಿ ಬಳಕೆದಾರರನ್ನು ಹೊಂದಿರುವ ವಿಶ್ವದ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸ್ಆ್ಯಪ್ಹೊಸ ಫೀಚರ್‌ ಪರಿಚಯಿಸಲು ಸಿದ್ಧತೆ ನಡೆಸಿದೆ.

ಬಳಕೆದಾರರಿಗೆ ಹೊಸ ಮೆಸೇಜಿಂಗ್ ಅನುಭವ ಸೇವೆ ಒದಗಿಸಲು ಮತ್ತು ಬಳಕೆಯನ್ನು ಮತ್ತಷ್ಟು ಸುಲಭವಾಗಿಸುವ ನಿಟ್ಟಿನಲ್ಲಿ ವಾಟ್ಸ್‌ ಆ್ಯಪ್ ಹಲವು‌ಹೊಸ ಫೀಚರ್‌ಗಳನ್ನು‌ ಮುಂದಿನ ಅಪ್‌ಡೇಟ್‌ಗಳಲ್ಲಿ ಪರಿಚಯಿಸಲಿದೆ.

ಮಲ್ಟಿಪಲ್‌ ಡಿವೈಸ್‌ ಸಪೋರ್ಟ್,ಕಾಂಟ್ಯಾಕ್ಟ್ ಕ್ಯೂಆರ್‌ ಕೋಡ್‌, ಸೆಲ್ಫ್‌ ಡಿಸ್ಟ್ರಕ್ಟಿಂಗ್‌ ಮೆಸೇಜ್‌, ಇನ್‌ ಆ್ಯಪ್‌ ಬ್ರೌಸರ್‌ ಮತ್ತು ಲಾಸ್ಟ್‌ ಸೀನ್‌ ಫಾರ್‌ ಸೆಲೆಕ್ಟ್‌ ಫ್ರೆಂಡ್ಸ್‌ ಈಐದು ಫೀಚರ್‌ಗಳು ಬಳಕೆದಾರರಿಗೆ ಖಂಡಿತ ಹೊಸ ಅನುಭವ ನೀಡಲಿವೆ. ಹಾಗಾದರೆ ಆ ಐದು ಆಸಕ್ತಿದಾಯಕ ಫೀಚರ್‌ಗಳು ಹೇಗೆ ಕೆಲಸ ಮಾಡುತ್ತವೆ ಒಮ್ಮೆ ಕಣ್ಣಾಡಿಸಿ...

ADVERTISEMENT

1. ಮಲ್ಟಿಪಲ್‌ ಡಿವೈಸ್‌ ಸಪೋರ್ಟ್‌: ಬಳಕೆದಾರರು ಏಕಕಾಲಕ್ಕೆ ಒಂದಕ್ಕಿಂತ ಹೆಚ್ಚು ಡಿವೈಸ್‌ಗಳಲ್ಲಿ ವಾಟ್ಸ್‌ ಆ್ಯಪ್‌ ಅಕೌಂಟ್‌ಗೆ ಲಾಗಿನ್‌ ಆಗುವ ಸೌಲಭ್ಯ ಕಲ್ಪಿಸಲಿದೆ. ಸದ್ಯ ಬಳಕೆದಾರರು ಕೇವಲ ಒಂದು ಡಿವೈಸ್‌ನಲ್ಲಿ ಮಾತ್ರ ವಾಟ್ಸ್‌ ಅಪ್‌ ಅಕೌಂಟ್‌ಗೆ ಲಾಗಿನ್‌ ಆಗಬಹುದು. ಒಂದು ವೇಳೆ ಬೇರೆ ಮೊಬೈಲ್‌ನಲ್ಲಿ ಲಾಗಿನ್‌ ಆದರೆ, ಮೊದಲನೇ ಡಿವೈಸ್‌ನಿಂದ‌ ಆಟೋಮ್ಯಾಟಿಕ್ ಆಗಿ ಅಕೌಂಟ್‌ ಲಾಗ್‌ ಔಟ್‌ ಆಗುತ್ತದೆ.

2. ಕಾಂಟ್ಯಾಕ್ಟ್‌ ಕ್ಯೂಆರ್ ಕೋಡ್‌: ಹೊಸ ಸಂಪರ್ಕ ಸಂಖ್ಯೆಗಳನ್ನು ಕಾಂಟ್ಯಾಕ್ಟ್‌ ಲಿಸ್ಟ್‌ಗೆ ಸೇರಿಸಲುಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದರೆ ಸಾಕು. ಈ ಫೀಚರ್‌ ಈಗಾಗಲೇ ಅಂಡ್ರಾಯ್ಡ್‌ ಆ್ಯಂಡ್‌ ಐಒಎಸ್ ಪ್ಲಾಟ್‌ಫಾರ್ಮ್‌ನ ಬೀಟಾ ವರ್ಶನ್‌ಗಳಲ್ಲಿ ಲಭ್ಯವಿದೆ.

3. ಸೆಲ್ಫ್‌ ಡಿಸ್ಟ್ರಕ್ಟಿಂಗ್ ಮೆಸೇಜ್‌: ವಾಟ್ಸ್‌ ಆ್ಯಪ್‌ ಸ್ಟೇಟಸ್‌ ಅಥವಾ ಸ್ಟೋರೀಸ್‌ 24 ಗಂಟೆಗಳ ನಂತರ ಕಾಣುವುದಿಲ್ಲ. ಇನ್ನು ಮುಂದೆ ಸೆಲ್ಫ್‌ ಡಿಸ್ಟ್ರಕ್ಟಿಂಗ್‌ ಮೆಸೇಜ್‌ ಫೀಚರ್‌ನಲ್ಲಿ ಬಳಕೆದಾರರು ತಮಗೆ ಇಷ್ಟ ಬಂದಷ್ಟು ಸಮಯ ಸ್ಟೇಟಸ್‌ ಅಥವಾ ಸ್ಟೋರಿ ಕಾಣುವಂತೆ ಇಟ್ಟುಕೊಳ್ಳಬಹುದು. ಬಳಕೆದಾರರು ಇಂತಿಷ್ಟು ಸಮಯ ಎಂದು ಮೊದಲೇ ಸೆಟ್ ಮಾಡಿದರೆ ಆ ಸಮಯದ ಬಳಿಕವಷ್ಟೇ ಸ್ಟೇಟಸ್‌ ಕಾಣೆಯಾಗುತ್ತದೆ.

4. ‌ಇನ್‌ ಆ್ಯಪ್ ಬ್ರೌಸರ್‌: ವಾಟ್ಸ್ ಆ್ಯಪ್‌ ಚಾಟ್‌ಗಳಲ್ಲಿ ಕಳಿಸಿದ ಲಿಂಕ್‌ಗಳನ್ನು ವೆಬ್‌ ಬ್ರೌಸರ್‌ಗಳಿಗೆ ರಿಡೈರಕ್ಟ್‌ ಮಾಡದೆ ನೇರವಾಗಿ ಓಪನ್‌ ಮಾಡಬಹುದು. ಸದ್ಯ ಈ ಸೌಲಭ್ಯ 'ಟ್ವಿಟ್ಟರ್'‌ ಮತ್ತು 'ಲಿಂಕ್ಡ್ ಇನ್‌' ಸೇರಿದಂತೆ ಬಹಳಷ್ಟು ಆ್ಯಪ್‌ಗಳಲ್ಲಿ ಲಭ್ಯವಿದ್ದು, ಇದು ಕೂಡ ಅದೇ ರೀತಿ ಕಾರ್ಯನಿರ್ವಹಿಸಲಿದೆ. ಇದರಿಂದ ಸಮಯ ಉಳಿತಾಯವಾಗುತ್ತದೆ.

5. ಲಾಸ್ಟ್‌ ಸೀನ್‌ ಫಾರ್‌ ಸೆಲೆಕ್ಟ್‌ ಫ್ರೆಂಡ್ಸ್‌: ಸದ್ಯ ವಾಟ್ಸ್‌ಆ್ಯಪ್‌‌ ಬಳಕೆದಾರರು ಲಾಸ್ಟ್‌ ಸೀನ್‌ ಸ್ಟೇಟಸ್ ಅನ್ನು ಕಾಂಟ್ಯಾಕ್ಟ್ಸ್‌, ಎವರಿಒನ್‌ ಅಥವಾ ನೋ ಒನ್‌ ಜತೆ ಹಂಚಿಕೊಳ್ಳಲು ಅಥವಾ ಹಂಚಿಕೊಳ್ಳದಿರಲು ಅವಕಾಶವಿದೆ. ಆದರೆ, ನಿಮ್ಮಿಷ್ಟದ ಕೆಲವೇ ಕೆಲವು ಜನರಿಗೆ ಮಾತ್ರ ‌ಲಾಸ್ಟ್‌ ಸೀನ್‌ ಸ್ಟೇಟಸ್‌ ಸೀಮಿತಗೊಳಿಸುವುದು ಸಾಧ್ಯವಿಲ್ಲ. ಇನ್ನು ಮುಂದೆ ನೀವು ಆಯ್ಕೆ ಮಾಡಿದ ಫ್ರೆಂಡ್ಸ್‌ಗಳಿಗೆ ಮಾತ್ರ ನಿಮ್ಮ ‘ಲಾಸ್ಟ್‌ ಸೀನ್‌ ಸ್ಟೇಟಸ್‌’ ಕಾಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.