ADVERTISEMENT

ಶೀಘ್ರದಲ್ಲೇ ಮೆಸೇಜ್‌ ಕಣ್ಮರೆಯಾಗುವ ವೈಶಿಷ್ಟ್ಯ: ವಾಟ್ಸ್‌ಆ್ಯಪ್‌

ಪಿಟಿಐ
Published 5 ನವೆಂಬರ್ 2020, 11:25 IST
Last Updated 5 ನವೆಂಬರ್ 2020, 11:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಾಟ್ಸ್‌ಆ್ಯಪ್‌ನಲ್ಲಿ ಒಬ್ಬರಿಗೆ ಕಳುಹಿಸಿದ ಮೆಸೇಜ್‌ ಏಳು ದಿನಗಳ ಬಳಿಕ ಕಣ್ಮರೆಯಾಗುವಂತೆ (ಡಿಸ್‌ಅಪಿಯರ್‌) ಮಾಡುವ ವೈಶಿಷ್ಟ್ಯವನ್ನು ಪರಿಚಯಿಸಿರುವುದಾಗಿ ವಾಟ್ಸ್‌ಆ್ಯಪ್‌ ಗುರುವಾರ ಹೇಳಿಕೊಂಡಿದೆ. ಈ ತಿಂಗಳಿನಲ್ಲಿಯೇ ಇದನ್ನು ಬಳಕೆದಾರರಿಗೆ ಲಭ್ಯವಾಗುವಂತೆ ಮಾಡುವುದಾಗಿಯೂ ಅದು ತಿಳಿಸಿದೆ.

ವೈಯಕ್ತಿಕವಾಗಿ ಚಾಟ್‌ ಮಾಡುವಾಗ ಮೆಸೇಜ್‌ ಕಣ್ಮರೆ ಆಯ್ಕೆಯನ್ನು ಯಾರು ಬೇಕಾದರೂ ಆನ್‌ ಅಥವಾ ಆಫ್ ಮಾಡಿಕೊಳ್ಳಬಹುದು. ಆದರೆ ಗ್ರೂಪ್‌ಗಳಲ್ಲಿ ಅಡ್ಮಿನ್‌ ಮಾತ್ರ ಅದರ ಮೇಲೆ ನಿಯಂತ್ರಣ ಹೊಂದಿರುತ್ತಾರೆ ಎಂದು ವಾಟ್ಸ್‌ಆ್ಯಪ್‌ ವಿವರಿಸಿದೆ.

ಫೋನ್‌ನಲ್ಲಿ ಸೇವ್ ಆಗುವ ವಾಟ್ಸ್‌ಆ್ಯಪ್‌ ಕಂಟೆಂಟ್‌ಗಳನ್ನು ಸುಲಭವಾಗಿ ಗುರುತಿಸಲು ಮತ್ತು ಏಕಕಾಲಕ್ಕೆ ಹಲವನ್ನು ಡಿಲೀಟ್‌ ಮಾಡಲು ಅನುಕೂಲ ಆಗುವಂತೆ ಮಾಡುವುದಾಗಿ ವಾಟ್ಸ್‌ಆ್ಯಪ್‌ ಹೇಳಿತ್ತು. ಈ ವಾರದಿಂದಲೇ ಆ ಸೌಲಭ್ಯವನ್ನೂ ನೀಡುವುದಾಗಿ ಅದು ತಿಳಿಸಿದೆ.

ADVERTISEMENT

ವಾಟ್ಸ್‌ಆ್ಯಪ್‌ನ ಸೆಟ್ಟಿಂಗ್ಸ್‌ನಲ್ಲಿ ಸ್ಟೋರೇಜ್‌ ಮ್ಯಾನೇಜ್‌ಮೆಂಟ್‌ ಟೂಲ್‌ ಲಭ್ಯವಾಗಲಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.