ADVERTISEMENT

ವಿಶ್ವದಾದ್ಯಂತ 2 ಗಂಟೆಗಳ ಕಾಲ ಸ್ಥಗಿತವಾಗಿದ್ದ ವಾಟ್ಸಾಪ್‌ ಸೇವೆಗಳು ಪುನಾರಂಭ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಅಕ್ಟೋಬರ್ 2022, 9:16 IST
Last Updated 25 ಅಕ್ಟೋಬರ್ 2022, 9:16 IST
ವಾಟ್ಸಾಪ್
ವಾಟ್ಸಾಪ್    

ಬೆಂಗಳೂರು: ವಿಶ್ವದಾದ್ಯಂತ ಸರ್ವರ್ ಸಮಸ್ಯೆಯಿಂದಾಗಿ 2 ಗಂಟೆಗಳ ಕಾಲ ಸ್ಥಗಿತಗೊಂಡಿದ್ದವಾಟ್ಸಾಪ್ ಸೇವೆಗಳು ಪುನಾರಂಭಗೊಂಡಿವೆ.

ಭಾರತ ಸೇರಿದಂತೆ ಹಲವೆಡೆ ವಾಟ್ಸಾಪ್‌ ಸೇವೆಗಳು ಪುನಾರಂಭವಾಗಿವೆ ಎಂದು ಮೆಟಾ ಕಂಪನಿ ತಿಳಿಸಿದೆ.

ಭಾರತದ ಹಲವೆಡೆ ವಾಟ್ಸಾಪ್‌ ಬಳಕೆದಾರರು ಸಂದೇಶ ರವಾನಿಸಲು ಹಾಗೂ ಸ್ವೀಕರಿಸಲು ಸಾಧ್ಯವಾಗದೆ ಪರದಾಡಿದ್ದರು.

ADVERTISEMENT

ವಾಟ್ಸಾಪ್‌ ಮೊಬೈಲ್‌ ಅಪ್ಲಿಕೇಷನ್‌ ಮತ್ತು ವೆಬ್‌ ಅಪ್ಲಿಕೇಷನ್‌ ಎರಡೂ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ವಾಟ್ಸಾಪ್‌ ಆಡಿಯೊ ಮತ್ತು ವಿಡಿಯೊ ಕಾಲ್‌ ಸೇವೆಯೂ ಕಾರ್ಯ ನಿರ್ವಹಿಸುತ್ತಿರಲಿಲ್ಲ.

ವಾಟ್ಸಾಪ್‌ ತೆರೆಯಲು ಸಾಧ್ಯವಾಗುತ್ತಿದೆ. ಆದರೆ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಹಲವು ಬಳಕೆದಾರರು ದೂರಿದ್ದರು.

ಡೌನ್‌ಡಿಟೆಕ್ಟರ್‌ ಪ್ರಕಾರ ಶೇ 69ರಷ್ಟು ಬಳಕೆದಾರರು ಈ ಸಮಸ್ಯೆ ಎದುರಿಸಿದ್ದರು. ಶೇ 21ರಷ್ಟು ಬಳಕೆದಾರರಿಗೆ ಸರ್ವರ್‌ ಸಂಪರ್ಕ ಸಿಕ್ಕಿರಲಿಲ್ಲ. ಶೇ 9ರಷ್ಟು ಮಂದಿ ತಮ್ಮ ಸ್ಮಾರ್ಟ್‌ ಫೋನ್‌ ಆ್ಯಪ್‌ಗಳಲ್ಲಿ ಗುರುತಿಸಲಾಗದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದಿತ್ತು.

ಟ್ವಿಟರ್‌ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ವಾಟ್ಸಾಪ್‌ ಡೌನ್‌ ಹ್ಯಾಶ್‌ ಟ್ಯಾಗ್‌ ಟ್ರೆಂಡ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.