ADVERTISEMENT

ಶೀಘ್ರವೇ ವಾಟ್ಸ್‌ಆ್ಯಪ್‌ ‘ಮ್ಯೂಟ್‌ ಆಲ್ವೇಸ್‌’ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 19:30 IST
Last Updated 6 ಅಕ್ಟೋಬರ್ 2020, 19:30 IST
ವಾಟ್ಸ್‌ಆ್ಯಪ್‌
ವಾಟ್ಸ್‌ಆ್ಯಪ್‌   

ಪದೇ ಪದೇ ರಗಳೆ ತರಿಸುವಂತಹ ಮೆಸೇಜ್‌ಗಳು ವಾಟ್ಸ್‌ಆ್ಯಪ್‌ನಲ್ಲಿ ಬರುತ್ತಿವೆಯೇ? ಹಾಗಾದರೆ ಅವುಗಳು ಬರುವುದನ್ನು ಶಾಶ್ವತವಾಗಿ ತಿಳಿಯದೇ ಇರುವಂತೆ ಮಾಡಲು ‘ಮ್ಯೂಟ್ ಆಲ್ವೇಸ್‌’ ಸೌಲಭ್ಯವಾಟ್ಸ್‌ಆ್ಯಪ್‌ ಜಾರಿಗೊಳಿಸುತ್ತಿದೆ.

ವಾಟ್ಸ್‌ಆ್ಯಪ್‌ನಲ್ಲಿ ಕೆಲವರು ಪದೇ ಪದೇ ಮೆಸೇಜ್‌ ಮಾಡುತ್ತಿರುತ್ತಾರೆ. ಅದರಿಂದ ಯಾವುದೇ ಪ್ರಯೋಜನವೂ ಇರುವುದಿಲ್ಲ. ಹಾಗೆ ಮಾಡಬೇಡಿ ಎಂದು ಹೇಳಿದರೂ ಅವರು ನಿಲ್ಲಿಸುವುದಿಲ್ಲ. ಹೀಗೆ ಬೇಡವೆಂದ ಮೆಸೇಜ್‌ ನೋಟಿಫಿಕೇಷ್‌ ಮ್ಯೂಟ್‌ ಮಾಡಲು ಸಾಧ್ಯವಿದೆ. ಆದರೆ ಸದ್ಯಕ್ಕೆ ನಮಗಿರುವ ಆಯ್ಕೆಗಳೆಂದರೆ ‘8 ಗಂಟೆ’, ‘1 ವಾರ’, ‘1 ವರ್ಷ’ ದಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡುವುದು. ಇದರರ್ಥ ಅಷ್ಟು ಸಮಯದವರೆಗೆ ನಿರ್ದಿಷ್ಟವಾದ ನಂಬರ್‌ ಅಥವಾ ಗ್ರೂಪ್‌ನಿಂದ ಮೆಸೇಜ್‌ ಬಂದಾಗ ನೋಟಿಫಿಕೇಷನ್‌ ಟೋನ್‌ ಬರುವುದಿಲ್ಲ. ನೋಟಿಫಿಕೇಷನ್‌ ಅನ್ನು ತೋರಿಸದೇ ಇರುವಂತೆಯೇ ಮಾಡಬಹುದು. ಈ ಆಯ್ಕೆಯಲ್ಲಿಯೇ ಸುಧಾರಣೆ ತಂದಿದೆ. ‘8 ಗಂಟೆ’, ‘1 ದಿನ’, ‘ಆಲ್ವೇಸ್‌’ ಎನ್ನುವ ಆಯ್ಕೆ ನೀಡಲಿದೆ.

ಈ ಸೌಲಭ್ಯವು ಸದ್ಯಕ್ಕೆ ಆಂಡ್ರಾಯ್ಡ್‌ನ ವಾಟ್ಸ್‌ಆ್ಯಪ್‌ ಬೇಟಾ ಆವೃತ್ತಿ 2.20.201.10ರಲ್ಲಿ ಲಭ್ಯವಿದೆ. ಈ ಹಂತದಲ್ಲಿ ಯಶಸ್ವಿಯಾದರೆ ಎಲ್ಲಾ ಬಳಕೆದಾರರಿಗೂ ಇದು ಲಭ್ಯವಾಗಲಿದೆ.‌ ಈಗಾಗಲೇ ನಾವು ಮ್ಯೂಟ್‌ ಮಾಡಲು ಅನುಸರಿಸುತ್ತಿರುವ ಮಾರ್ಗವನ್ನೇ ಮುಂದಿನ ದಿನಗಳಲ್ಲಿ ‘ಮ್ಯೂಟ್‌ ಆಲ್ವೇಸ್‌’ಗೂ ಅನುಸರಿಸಬೇಕು. ಯಾವುದೇ ಒಂದು ನಿರ್ದಿಷ್ಟ ಚಾಟ್‌ ಅಥವಾ ಗ್ರೂಪ್‌ ಮೇಲೆ ಲಾಂಗ್‌ ಪ್ರೆಸ್‌ ಮಾಡಿದರೆ ಆಗ ಸ್ಪೀಕರ್‌ ಚಿನ್ಹೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿದರೆ ಎಷ್ಟು ಸಮಯದವರೆಗೆ ಮ್ಯೂಟ್‌ ಮಾಡಬೇಕು ಎನ್ನುವ ಆಯ್ಕೆ ತೆರೆದುಕೊಳ್ಳಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.