ADVERTISEMENT

ಹೊಸ ಸರ್ಚ್ ಫೀಚರ್ ಪರಿಚಯಿಸಲಿದೆ ವಾಟ್ಸ್‌ಆ್ಯ‍ಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜನವರಿ 2022, 10:31 IST
Last Updated 11 ಜನವರಿ 2022, 10:31 IST
ವಾಟ್ಸ್‌ಆ್ಯಪ್ ಹೊಸ ಫೀಚರ್ ಶೀಘ್ರದಲ್ಲಿ ಬಿಡುಗಡೆ
ವಾಟ್ಸ್‌ಆ್ಯಪ್ ಹೊಸ ಫೀಚರ್ ಶೀಘ್ರದಲ್ಲಿ ಬಿಡುಗಡೆ   

ಬೆಂಗಳೂರು: ನಿಯರ್‌ಬೈ ಎಂಬ ಹೊಸ ಫೀಚರ್ ಅನ್ನು ಬಳಕೆದಾರರಿಗೆ ಪರಿಚಯಿಸಲು ವಾಟ್ಸ್‌ಆ್ಯಪ್ ಮುಂದಾಗಿರುವುದು ಹಳೆಯ ಸುದ್ದಿ.

ಈಗ, ಅದರ ಜತೆಗೆ ಹೊಸ ಫೀಚರ್ ಅನ್ನು ಬಿಡುಗಡೆ ಮಾಡಲು ವಾಟ್ಸ್‌ಆ್ಯಪ್ ತಯಾರಿ ನಡೆಸಿದೆ.

ಐಓಎಸ್ ಮತ್ತು ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಬಳಕೆಗೆ ಅನುಕೂಲವಾಗುವಂತೆ, ಹೊಸದಾಗಿ ಸರ್ಚ್ ಎಂಬ ಫೀಚರ್ ಅನ್ನು ಬೀಟಾ ಆವೃತ್ತಿಯಲ್ಲಿ ಪರಿಶೀಲಿಸಲಾಗುತ್ತಿದೆ.

ADVERTISEMENT

ಇದರಲ್ಲಿ ಸರ್ಚ್ ಆಯ್ಕೆಯ ಮೂಲಕ ಬಳಕೆದಾರರು, ಮೆಸೇಜ್ ಮಾತ್ರವಲ್ಲದೆ, ಕಾಂಟಾಕ್ಟ್, ರೀಡ್ ಮತ್ತಿತರ ಸರ್ಚ್ ಆಯ್ಕೆಗಳನ್ನು ಪಡೆಯಬಹುದು.

ಗೂಗಲ್ ಜಿಮೇಲ್‌ನಲ್ಲಿ ಇರುವಂತೆಯೇ, ಅನ್‌ರೀಡ್ ಆಯ್ಕೆಯ ಮೂಲಕ ಸುಲಭದಲ್ಲಿ ವಾಟ್ಸ್‌ಆ್ಯಪ್ ಮೆಸೇಜ್ ಸರ್ಚ್ ಮಾಡಬಹುದು. ಬೀಟಾ ಆವೃತ್ತಿ ಪರಿಶೀಲನೆಯ ಬಳಿಕ, ಎಲ್ಲ ಬಳಕೆದಾರರಿಗೆ ಹೊಸ ವೈಶಿಷ್ಟ್ಯ ಲಭ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.