ADVERTISEMENT

ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಸ್ಟೋರಿಗೆ ಮ್ಯೂಸಿಕ್‌ ಸೇರಿಸಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 19:30 IST
Last Updated 18 ಸೆಪ್ಟೆಂಬರ್ 2019, 19:30 IST
   

ಸಾಮಾಜಿಕ ಮಾಧ್ಯಮಗಳು ಇಂದು ಬಹುಮುಖಿಯಾಗಿ ಬಳಕೆಯಲ್ಲಿವೆ. ಸತ್ಯಾಸತ್ಯತೆ ಏನೇ ಇರಲಿ, ತಕ್ಷಣಕ್ಕೆ ಸುದ್ದಿ, ವಿಡಿಯೊ, ಚಿತ್ರ ಜಗತ್ತಿನ ಯಾವುದೇ ಮೂಲೆಗೆ ತಲುಪಿಸುವಲ್ಲಿ ಈ ಮಾಧ್ಯಮಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಜನಪ್ರಿಯತೆಯ ಉತ್ತುಂಗದಲ್ಲಿರುವ ಇವುಗಳು ದಿನವೂ ಹೊಸ ಹೊಸ ವೈಶಿಷ್ಟ್ಯ ಸೇರಿಸುವ ಮೂಲಕ ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗುವ ಪ್ರಯತ್ನ ನಡೆಸುತ್ತಲೇ ಇರುತ್ತವೆ. ಇದಕ್ಕೆ ಪೂರಕವಾಗಿ ಇತ್ತೀಚೆಗೆ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿ, ಹಂಚಿಕೊಳ್ಳುವ ಸ್ಟೋರಿಗಳಿಗೆ ಮ್ಯೂಸಿಕ್‌ ಜೋಡಿಸುವ ಆಯ್ಕೆಯನ್ನು ನೀಡಲಾಗಿದೆ.

ಜನಪ್ರಿಯ ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂಗಳಲ್ಲಿ ಪೋಸ್ಟ್‌ ಮಾಡುವ ಸ್ಟೋರಿಗಳಿಗೆ ಮ್ಯೂಸಿಕ್‌ ಸಹ ಸೇರಿಸಬಹುದಾಗಿದೆ.ಈ ಕುರಿತು ಫೇಸ್‌ಬುಕ್‌ ಮಂಗಳವಾರ(ಸೆ.17) ಅಧಿಕೃತ ಪ್ರಕಟಣೆ ಹೊರಡಿಸಿದೆ.

ಭಾರತೀಯರು ತಮ್ಮ ಭಾವನೆಗಳ ಅಭಿವ್ಯಕ್ತಿಗೆಮ್ಯೂಸಿಕ್‌ ಸ್ಟಿಕರ್ಸ್‌, ಲಿರಿಕ್ಸ್‌, ಲಿಪ್‌ ಸಿಂಕ್‌ ಲೈವ್‌ ಆಯ್ಕೆಗಳನ್ನೂ ಬಳಸಬಹುದಾಗಿದೆ. ಸದ್ಯ 55ಕ್ಕೂ ಅಧಿಕ ದೇಶಗಳಲ್ಲಿ ಮ್ಯೂಸಿಕ್ ಆ್ಯಡ್‌ ಮಾಡುವ ಆಯ್ಕೆ ನೀಡಲಾಗಿದೆ.

ADVERTISEMENT

ವಾಟ್ಸ್‌ಆ್ಯಪ್‌ ರೀತಿಯಲ್ಲಿಯೇ ಇಲ್ಲಿಯೂ‌ಸ್ಟೋರಿಗಳಲ್ಲಿ ಹಂಚಿಕೊಳ್ಳುವಫೋಟೊ, ವಿಡಿಯೊ ಮತ್ತು ಪೋಸ್ಟ್‌ಗಳು 24 ಗಂಟೆಯವರೆಗೆ ಮಾತ್ರವೇ ಇರಲಿವೆ.

ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಸ್ಟೋರಿಗಳಿಗೆಹೊಚ್ಚ ಹೊಸ ಮತ್ತು ಹಳೆಯ ಹಾಡುಗಳನ್ನು ಜೋಡಿಸಬಹುದು.

‘ಈ ಸೌಲಭ್ಯ ಕಲ್ಪಿಸಲುಇಂಡಿಯನ್‌ ಮ್ಯೂಸಿಕ್‌ ಕಮ್ಯುನಿಟಿ ಜತೆ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ’ ಎನ್ನುತ್ತಾರೆ ಎಂದುಫೇಸ್‌ಬುಕ್‌ ಇಂಡಿಯಾದ ನಿರ್ದೇಶಕ ಮನಿಶ್‌ ಚೋಪ್ರಾ.

ಟಿ–ಸಿರೀಸ್‌ ಮ್ಯೂಸಿಕ್‌, ಝೀ ಮ್ಯೂಸಿಕ್‌ ಕಂಪನಿ ಮತ್ತು ಯಶ್‌ ರಾಜ್ ಫಿಲ್ಮ್ಸ್ ಜತೆ ಒಪ್ಪಂದ ಮಾಡಿಕೊಂಡಿರುವುದಾಗಿಫೇಸ್‌ಬುಕ್ ಇಂಡಿಯಾ ತಿಳಿಸಿದೆ.

ಬಳಕೆ ಹೇಗೆ?
ಫೇಸ್‌ಬುಕ್‌ ಅಥವಾ ಇನ್‌ಸ್ಟಾಗ್ರಾಂ ಮೂಲಕ ಕ್ಯಾಮೆರಾ ಓಪನ್‌ ಮಾಡಬೇಕು ಅಥವಾ ಫೋನ್‌ ಗ್ಯಾಲರಿಯಿಂದಫೋಟೊ/ವಿಡಿಯೊ ಆಯ್ಕೆ ಮಾಡಿ ಅದಕ್ಕೆ ಹೊಂದುವಂತಹ ಮ್ಯೂಸಿಕ್‌ ಜೋಡಿಸಿದರೆ ಆಯ್ತು. ಇಷ್ಟೇ ಅಲ್ಲ ಇದಕ್ಕೆ ಮ್ಯೂಸಿಕ್‌ ಸ್ಟಿಕ್ಕರ್‌ ಸಹ ಆ್ಯಡ್‌ ಮಾಡಬಹುದು. ಆ ಮ್ಯೂಸಿಕ್‌ನಲ್ಲಿ ಯಾವ ಭಾಗ ಹೆಚ್ಚು ಹೈಲೈಟ್ ಆಗಬೇಕು ಎಂದು ಆಯ್ಕೆ ಮಾಡಿದ ಬಳಿಕ ಆರ್ಟಿಸ್ಟ್‌ ಹೆಸರು ಮತ್ತು ಟ್ರ್ಯಾಕ್‌ ಟೈಟಲ್‌ ಸಹ ಸೇರಿಸಬಹುದು.ಫೇಸ್‌ಬುಕ್‌ನ ಲಿಪ್‌ ಸಿಂಕ್‌ ಲೈವ್‌ನಲ್ಲಿ ಬಳಕೆದಾರರು ತಮ್ಮಿಷ್ಟದ ಹಾಡಿಗೆ ಪರ್ಫಾರ್ಮ್‌ ಮಾಡಬಹುದು. ಸಾಂಗ್‌ ಡಬ್‌ ಮಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.