ADVERTISEMENT

ಭಾರತ ಸೇರಿ ವಿಶ್ವದಾದ್ಯಂತ Gmail ಸೇವೆಯಲ್ಲಿ ವ್ಯತ್ಯಯ: ಗೊಂದಲಕ್ಕೀಡಾದ ಬಳಕೆದಾರರು

ಐಎಎನ್ಎಸ್
Published 10 ಡಿಸೆಂಬರ್ 2022, 16:05 IST
Last Updated 10 ಡಿಸೆಂಬರ್ 2022, 16:05 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಶನಿವಾರ ಸಂಜೆ ಭಾರತ ಸೇರಿದಂತೆ ವಿಶ್ವದ ಹಲವು ಕಡೆ ಗೂಗಲ್‌ ಜಿಮೇಲ್‌ (Google Gmail) ಸೇವೆಯಲ್ಲಿ ವ್ಯತ್ಯಯ ಉಂಟಾಗಿದೆ. ಮೇಲ್‌ ಕಳುಹಿಸಲು, ಸ್ವೀಕರಿಸಲು ಸಾಧ್ಯವಾಗದೇ ಬಳಕೆದಾರರು ತೊಂದರೆ ಅನುಭವಿಸಿದ್ದಾರೆ.

ವೆಬ್‌ಸೈಟ್‌ಗಳ ಸೇವೆಯಲ್ಲಿನ ವ್ಯತ್ಯಯಗಳ ಬಗ್ಗೆ ಗಮನಹರಿಸುವ ಪೋರ್ಟಲ್ ‘Downdetector.com’ ಪ್ರಕಾರ, ಇಮೇಲ್‌ಗಳನ್ನು ಸ್ವೀಕರಿಸುವಲ್ಲಿ ಹೆಚ್ಚಿನ ತೊಡಕು ಉಂಟಾಗಿತ್ತು ಎನ್ನಲಾಗಿದೆ.

ಮೊಬೈಲ್ ಅಪ್ಲಿಕೇಶನ್ ಮತ್ತು ಡೆಸ್ಕ್‌ಟಾಪ್ ಆವೃತ್ತಿಗಳೆರಡರಲ್ಲೂ ವಿಶ್ವದಾದ್ಯಂತ ತೊಂದರೆ ಉಂಟಾಗಿತ್ತು.

ADVERTISEMENT

Gmailನ ಸಮಸ್ಯೆಯ ಬಗ್ಗೆ ಟ್ವಿಟರ್‌ನಲ್ಲಿಯೂ ಭಾರಿ ಚರ್ಚೆ ನಡೆಯಿತು. ಜನರು ತಮಗಾದ ತೊಂದರೆ, ಗೊಂದಲದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬರೆದರು.

‘Gmail ಸಮಸ್ಯೆ ಎಲ್ಲರಿಗೂ ಎದುರಾಗಿದೆಯೇ ಅಥವಾ ನನ್ನ ಖಾತೆಯಲ್ಲಿ ಏನಾದರೂ ತಪ್ಪಾಗಿದೆಯೇ? ಯಾವುದೇ ಮೇಲ್ ನನಗೆ ಬರುತ್ತಿಲ್ಲ’ ಎಂದು ಬಳಕೆದಾರರು ಪ್ರಶ್ನೆ ಮಾಡಿದರು.

ಈ ಜಾಗತಿಕ ವ್ಯತ್ಯಯಕ್ಕೆ ಕಾರಣವೇನು ಎಂಬುದರ ಕುರಿತು ಗೂಗಲ್ ಇನ್ನೂ ಪ್ರತಿಕ್ರಿಯಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.