ADVERTISEMENT

ಗೂಗಲ್ ಸರ್ಚ್, ಮ್ಯಾಪ್ಸ್‌ನಲ್ಲಿ ಸಮೀಪದ ಕೋವಿಡ್–19 ಪರೀಕ್ಷಾ ಕೇಂದ್ರಗಳು

ಪಿಟಿಐ
Published 12 ಜೂನ್ 2020, 10:29 IST
Last Updated 12 ಜೂನ್ 2020, 10:29 IST
ಗೂಗಲ್ ಸರ್ಚ್‌–ಸಾಂಕೇತಿಕ ಚಿತ್ರ
ಗೂಗಲ್ ಸರ್ಚ್‌–ಸಾಂಕೇತಿಕ ಚಿತ್ರ   
""

ನವದೆಹಲಿ: ಸಮೀಪದ ಹೊಟೇಲ್‌, ರೆಸ್ಟೊರೆಂಟ್‌ಗಳು, ಸಿನಿಮಾ ಹಾಲ್‌ಗಳು, ಶಾಪಿಂಗ್‌ ಮಾಲ್‌ಗಳನ್ನು ತೋರಿಸುತ್ತಿದ್ದ ಗೂಗಲ್‌ ಈಗ ಹತ್ತಿರದ ಕೋವಿಡ್‌–19 ಪರೀಕ್ಷಿಸುವ ಕೇಂದ್ರಗಳನ್ನು ಸೂಚಿಸುತ್ತಿದೆ.

ಗೂಗಲ್‌ ಸರ್ಚ್‌, ಅಸಿಸ್ಟಂಟ್‌ ಹಾಗೂ ಮ್ಯಾಪ್ಸ್‌ ಬಳಕೆದಾರರಿಗೆ ಕೋವಿಡ್‌–19 ಪರೀಕ್ಷೆ ಕೇಂದ್ರಗಳನ್ನು ಸುಲಭವಾಗಿ ಹುಡುಕಲು ಅನುವು ಮಾಡಿಕೊಡುತ್ತಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಮತ್ತು ಭಾರತ ಸರ್ಕಾರದ ಮೈಗೌ (MyGov) ವೆಬ್‌ಸೈಟ್‌ನೊಂದಿಗೆ ಕಾರ್ಯಾಚರಿಸುತ್ತಿದ್ದು, ಬಳಕೆದಾರರಿಗೆ ಅಧಿಕೃತ ಕೋವಿಡ್‌–19 ಪರೀಕ್ಷೆ ಪ್ರಯೋಗಾಲಯಗಳನ್ನು ಸೂಚಿಸುತ್ತಿರುವುದಾಗಿ ಗೂಗಲ್‌ ಹೇಳಿದೆ.

ಹೊಸ ಸೌಲಭ್ಯವು ಇಂಗ್ಲಿಷ್‌ ಜೊತೆಗೆ ಭಾರತದ ಎಂಟು ಭಾಷೆಗಳಲ್ಲಿ ಲಭ್ಯವಿದೆ. ಕನ್ನಡ, ಹಿಂದಿ, ಬೆಂಗಲಿ, ತೆಲುಗು, ತಮಿಳು, ಮಲಯಾಳಂ, ಮರಾಠಿ ಹಾಗೂ ಗುಜರಾತಿ ಭಾಷೆಗಳಲ್ಲಿ ಗೂಗಲ್‌ ಮಾಹಿತಿ ಸಿಗುತ್ತಿದೆ.

ADVERTISEMENT

ಗೂಗಲ್‌ ಸರ್ಚ್‌ ಮತ್ತು ಗೂಗಲ್‌ ಅಸಿಸ್ಟಂಟ್‌ನಲ್ಲಿ ಕೊರೊನಾ ವೈರಸ್‌ ಸಂಬಂಧಿತ ಹುಡುಕಾಟಗಳಲ್ಲಿ (ಉದಾಹರಣೆಗೆ 'ಕೊರೊನಾ ವೈರಸ್‌ ಪರೀಕ್ಷೆ') ಬಳಕೆದಾರರಿಗೆ ಪರೀಕ್ಷೆ (Testing) ಟ್ಯಾಬ್ ಕಾಣಸಿಗುತ್ತದೆ. ಹುಡುಕಾಟದಿಂದ ತೆರೆದುಕೊಂಡ ಪುಟದಲ್ಲಿ ಸಮೀಪದ ಪರೀಕ್ಷೆ ಪ್ರಯೋಗಾಲಯಗಳ ಪಟ್ಟಿ ಹಾಗೂ ಸೇವೆ ಬಳಸುವುದಕ್ಕೂ ಮುನ್ನ ಅಗತ್ಯವಿರುವ ಮಾರ್ಗದರ್ಶನ ಮತ್ತು ಪ್ರಮುಖ ಮಾಹಿತಿಗಳು ಸಿಗುತ್ತವೆ.

ಪ್ರಸ್ತುತ ಗೂಗಲ್‌ ದೇಶದ 300 ನಗರಗಳಲ್ಲಿನ 700 ಪರೀಕ್ಷಾ ಕೇಂದ್ರಗಳನ್ನು ಸರ್ಚ್‌ ಹಾಗೂ ಮ್ಯಾಪ್ಸ್‌ನಲ್ಲಿ ಸೇರಿಸಿದೆ. ಶೀಘ್ರದಲ್ಲೇ ಇನ್ನಷ್ಟು ಕೇಂದ್ರಗಳು ಪಟ್ಟಿಗೆ ಸೇರಲಿವೆ ಎಂದು ಗೂಗಲ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.