ADVERTISEMENT

VLC ಮೀಡಿಯಾ ಪ್ಲೇಯರ್ ಮೇಲಿನ ನಿರ್ಬಂಧ ತೆರವು

ವಿಎಲ್‌ಸಿ ಮೀಡಿಯಾ ಪ್ಲೇಯರ್ ಮೇಲೆ ಸರ್ಕಾರ ನಿರ್ಬಂಧ

ಐಎಎನ್ಎಸ್
Published 15 ನವೆಂಬರ್ 2022, 8:19 IST
Last Updated 15 ನವೆಂಬರ್ 2022, 8:19 IST
   

ನವದೆಹಲಿ: ವಿಎಲ್‌ಸಿ ಮೀಡಿಯಾ ಪ್ಲೇಯರ್ ಮೇಲಿನ ನಿಷೇಧವನ್ನು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತೆಗೆದುಹಾಕಿದೆ.

ದಕ್ಷಿಣ ಏಷ್ಯಾದಲ್ಲಿ ಜನಪ್ರಿಯತೆ ಗಳಿಸಿರುವ ವಿಎಲ್‌ಸಿ ಮೀಡಿಯಾ ಪ್ಲೇಯರ್ ಮೇಲೆ ಸಚಿವಾಲಯ ಒಂಬತ್ತು ತಿಂಗಳ ನಿರ್ಬಂಧ ವಿಧಿಸಿತ್ತು.

ವಿಡಿಯೊಲಾನ್ ಸಾಫ್ಟ್‌ವೇರ್ ಕಂಪನಿ ಅಭಿವೃದ್ಧಿಪಡಿಸಿರುವ ವಿಎಲ್‌ಸಿ ಮೀಡಿಯಾ ಪ್ಲೇಯರ್ ವಿರುದ್ಧದ ನಿರ್ಬಂಧವನ್ನು ಇಂಟರ್‌ನೆಟ್ ಫ್ರೀಡಂ ಫೌಂಡೇಶನ್ (ಐಎಫ್‌ಎಫ್) ಪ್ರಶ್ನಿಸಿತ್ತು. ಜತೆಗೆ ಕಾನೂನು ಸಹಕಾರವನ್ನು ಒದಗಿಸಿತ್ತು.

ADVERTISEMENT

ನಿರ್ಬಂಧ ತೆರವಾಗಿರುವ ಬಗ್ಗೆ ಐಎಫ್‌ಎಫ್‌ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದೆ.

ದೇಶದಲ್ಲಿ ವಿಎಲ್‌ಸಿ ಗರಿಷ್ಠ ಸಂಖ್ಯೆಯ ಡೌನ್‌ಲೋಡ್ ಮತ್ತು ಬಳಕೆದಾರರನ್ನು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.