ADVERTISEMENT

ಸ್ನ್ಯಾಪ್‌ಚಾಟ್‌ ಖಾತೆ ಸುರಕ್ಷಿತವಾಗಿರಿಸಿ

ರಶ್ಮಿ ಕಾಸರಗೋಡು
Published 12 ಸೆಪ್ಟೆಂಬರ್ 2018, 19:30 IST
Last Updated 12 ಸೆಪ್ಟೆಂಬರ್ 2018, 19:30 IST

ಸ್ನ್ಯಾಪ್‌ಚಾಟ್‌ ಖಾತೆ ಸುರಕ್ಷಿತವಾಗಿರಿಸಿ

ವಾಟ್ಸ್‌ಆ್ಯಪ್‌ನಂತೆಯೇ ಜನಪ್ರಿಯ ಚಾಟಿಂಗ್ ಆ್ಯಪ್‌ ಆಗಿರುವ ಸ್ನ್ಯಾಪ್‌ಚಾಟ್‌ನಲ್ಲಿ ಸುರಕ್ಷಿತವಾಗಿರುವುದು ಹೇಗೆ ಎಂಬುದನ್ನು ನೋಡೋಣ.

1. ನಿಮ್ಮ ಸ್ನೇಹಿತರನ್ನು ಮಾತ್ರ ಸೇರಿಸಿಕೊಳ್ಳಿ

ADVERTISEMENT

ಸ್ನ್ಯಾಪ್‌ಚಾಟ್‌ನಲ್ಲಿ ಖಾತೆ ತೆರೆದರೆ ನಿಮಗೆ ಪರಿಚಯ ಇರುವ ವ್ಯಕ್ತಿಗಳನ್ನು ಮಾತ್ರ ಸ್ನೇಹಿತರ ಪಟ್ಟಿಗೆ ಸೇರಿಸಿಕೊಳ್ಳಿ. ಸ್ನ್ಯಾಪ್‌ಚಾಟ್‌ನಲ್ಲಿ ಖಾಸಗಿ ಅನುಭವಗಳನ್ನು ಹಂಚಿಕೊಳ್ಳುವುದರಿಂದ ನೀವು ಚೆನ್ನಾಗಿ ಬಲ್ಲ ವ್ಯಕ್ತಿಗಳನ್ನು ಮಾತ್ರ ಸ್ನೇಹಿತರ ಪಟ್ಟಿಗೆ ಸೇರಿಸುವುದೊಳಿತು.

2. ಅಪರಿಚಿತರನ್ನು ಬ್ಲಾಕ್ ಮಾಡಿ

ನಿಮ್ಮ ಸ್ನೇಹಿತರು ಹೊರತು ಪಡಿಸಿ ಬೇರೆ ಅಪರಿಚಿತರು ಯಾರಾದರೂ ನಿಮ್ಮನ್ನು ಸಂಪರ್ಕಿಸಲು ಯತ್ನಿಸಿದರೆ ಬ್ಲಾಕ್ ಮಾಡಿ. ಅನಗತ್ಯ ಸ್ನ್ಯಾಪ್ ಕಳುಹಿಸಿ ನಿಮಗೆ ಮುಜುಗರ ಮಾಡುವುದಾದರೆ ಅಂತವರನ್ನು ಬ್ಲಾಕ್ ಮಾಡಲು ಯಾವುದೇ ಹಿಂಜರಿಕೆ ಬೇಡ.

3. ಅನಗತ್ಯ ಸ್ನ್ಯಾಪ್ ಕಳುಹಿಸಬೇಡಿ

ನಂಬಿಕೆಯ ಸ್ನೇಹಿತರೇ ಆಗಿರಲಿ ಯಾರಿಗೂ ಅನಗತ್ಯ ಸ್ನ್ಯಾಪ್‌ಗಳನ್ನು ಕಳುಹಿಸಲೇ ಬೇಡಿ.

4. ಲೊಕೇಶನ್ ಪ್ರೈವೆಟ್ ಆಗಿರಲಿ

ನೀವು ಸ್ನ್ಯಾಪ್ ಕಳುಹಿಸುವಾಗ ಜಿಯೊ ಫಿಲ್ಟರ್ ಬಳಕೆ ಮಾಡಬೇಡಿ. ನೀವು ಯಾವುದೇಸ್ನ್ಯಾಪ್ ಕಳುಹಿಸುವುದಿದ್ದರೂ ಲೊಕೇಶನ್ ಪಬ್ಲಿಕ್ ಬದಲು ಪ್ರೈವೇಟ್ ಆಗಿಯೇ ಇರಲಿ.

5. ಖಾಸಗಿ ಮಾಹಿತಿಗಳು ಬೇಡ

ನಿಮ್ಮ ಸ್ನ್ಯಾಪ್‌ನಲ್ಲಿ ಯಾವುದೇ ಖಾಸಗಿ ಮಾಹಿತಿಗಳನ್ನು ಹಾಕದಿರಿ. ನೀವು ಸ್ನ್ಯಾಪ್‌ಚಾಟನ್‌ನಲ್ಲಿ Send ಬಟನ್ ಕ್ಲಿಕ್ ಮಾಡಿದ ಕೂಡಲೇ ನಿಮ್ಮ ಸ್ನ್ಯಾಪ್ ಪ್ರೈವೆಟ್‌ನಿಂದ ಪಬ್ಲಿಕ್ ಆಗಿ ಬಿಡುತ್ತದೆ. ಹಾಗಾಗಿ ಸ್ನ್ಯಾಪ್ ಕಳಿಸುವ ಮುನ್ನಯೋಚಿಸಿ.

6.ನಿಮ್ಮ ವಯಸ್ಸು ತಿಳಿಸುವಾಗ ಗಮನಿಸಿ
ಸ್ನ್ಯಾಪ್‌ಚಾಟ್‌ಮೂಲಕ ಡೇಟಿಂಗ್ ಮಾಡುವುದಾದರೆ ನಿಮ್ಮ ನಿಜ ವಯಸ್ಸು ಮುಚ್ಚಿಡಬೇಡಿ. ಅಂದಹಾಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಯಸ್ಸು ತಿಳಿಸುವುದು ಒಳ್ಳೆಯದಲ್ಲ. ನಿಮ್ಮ ನಂಬಿಕೆಯ ವ್ಯಕ್ತಿ ಆಗಿದ್ದರೆ ಮಾತ್ರ ಅವರೊಂದಿಗೆ ವೈಯಕ್ತಿಕ ಮಾಹಿತಿ ಹಂಚಿಕೊಳ್ಳಿ

7. ನಿಮ್ಮನ್ನು ಯಾರೆಲ್ಲಾ ಸಂಪರ್ಕಿಸಬಹುದು? ಸೆಟ್ಟಿಂಗ್ ಚೇಂಜ್ ಮಾಡಿ
ಸ್ನ್ಯಾಪ್‌ಚಾಟ್‌ ಮೂಲಕ ನಿಮ್ಮನ್ನು ಎಲ್ಲರೂ ಸಂಪರ್ಕಿಸಬಹುದಾದರೂ, ಕೆಲವರು ಮಾತ್ರ ನಿಮ್ಮನ್ನು ಸಂಪರ್ಕಿಸುವಂತೆ ಸೆಟ್ಟಿಂಗ್ ಬದಲಿಸಿಕೊಳ್ಳಿ. ಇದರಿಂದಾಗಿ ಅಪರಿಚಿತರ ಕಿರಿಕಿರಿಯೂ ತಪ್ಪುತ್ತದೆ.

- ರಶ್ಮಿ ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.