ADVERTISEMENT

ಐಐಎಸ್‌ಸಿಯಲ್ಲಿ ನೋಕಿಯಾ ಲ್ಯಾಬ್‌

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 0:34 IST
Last Updated 8 ಆಗಸ್ಟ್ 2020, 0:34 IST

ಬೆಂಗಳೂರು: ತುರ್ತುಸ್ಥಿತಿಯ ನಿರ್ವ ಹಣೆ, ಕೃಷಿ ಮತ್ತು ಕೈಗಾರಿಕಾ ಆಟೋಮೇಷನ್‌ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ, ಸುಧಾರಿತ ಸಂಪರ್ಕ ತಂತ್ರಜ್ಞಾನ ಮತ್ತು ರೋಬೊಟಿಕ್ಸ್‌ಗಳ ಸಂಶೋಧನೆಗೆ ನೋಕಿಯಾ ಕಂಪನಿಯು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಪ್ರಯೋಗಾಲಯವನ್ನು ಸ್ಥಾಪಿಸಲಿದೆ.

ಇದನ್ನು ಸೆಂಟರ್ ಆಫ್‌ ಎಕ್ಸಲೆನ್ಸ್ ‌ಎಂದು ಹೆಸರಿಸಲಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿಯ ನಿಟ್ಟಿನಲ್ಲಿ ಶೈಕ್ಷಣಿಕ ವಲಯ, ನವೋದ್ಯಮ ಮತ್ತು ಕೈಗಾರಿಕಾ ವ್ಯವಸ್ಥೆ ಸಹಕಾರದ ವ್ಯವಸ್ಥೆ ರೂಪಿಸಲಾಗುವುದು. ಭಾರತ ಸರ್ಕಾರ ‘ಸ್ಟಾರ್ಟ್‌ ಅಪ್‌ ಇಂಡಿಯಾ’ದ ಪ್ರಯತ್ನಗಳಿಗೂ ಕೈಜೋಡಿಸಲಾಗು ವುದು ಎಂದು ನೋಕಿಯಾ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT